ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; ಹಕ್ಕಿಗಳ ಸಾವು, ನಗರದಲ್ಲಿ ಹಕ್ಕಿ ಜ್ವರದ ಭೀತಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 24: ಮೈಸೂರು ನಗರದಲ್ಲಿ ಒಂದೆಡೆ ಕೋವಿಡ್ ಆತಂಕ ಜೋರಾಗಿದೆ. ಮತ್ತೊಂದೆಡೆ ‌ಹಕ್ಕಿಜ್ವರದ ಭೀತಿ ಸಹ ಶುರುವಾಗಿದೆ. ಬಕ ಪ್ರಬೇಧದ ಕೊಳದ ಬಕ (ಪಾಂಡ್‌ ಹೆರಾನ್‌) ಮತ್ತು ಬೆಳ್ಳಕ್ಕಿಗಳು ನಗರದಲ್ಲಿ ಮೃತಪಟ್ಟಿವೆ.

ವಿಜಯನಗರದ ಕೊಡವ ಸಮಾಜದ ಬಳಿಯಿರುವ ಉದ್ಯಾನದಲ್ಲಿ ಪಕ್ಷಿಗಳು ನಿಗೂಢವಾಗಿ ಮೃತಪಟ್ಟಿದ್ದು, ಪಕ್ಷಿಪ್ರಿಯರಲ್ಲಿ ಕಳವಳ ಉಂಟು ಮಾಡಿವೆ. ಕಳೆದ ಒಂದು ವಾರದಲ್ಲಿ ಉದ್ಯಾನದಲ್ಲಿ ಎರಡು ಹಾಗೂ ಒಳಚರಂಡಿ ಸಮೀಪದ ಮರದ ತೋಪಿನ ಕೆಳಗೆ 4 ಪಕ್ಷಿಗಳು ಮೃತಪಟ್ಟಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ದಾವಣಗೆರೆಯಲ್ಲಿ ಕೋಳಿಗಳ ಅಸಹಜ ಸಾವು; ಹಕ್ಕಿ ಜ್ವರ ಇಲ್ಲ ದಾವಣಗೆರೆಯಲ್ಲಿ ಕೋಳಿಗಳ ಅಸಹಜ ಸಾವು; ಹಕ್ಕಿ ಜ್ವರ ಇಲ್ಲ

ಕಳೆದ ವರ್ಷದ ಇದೇ ವೇಳೆಯಲ್ಲಿ ಹಕ್ಕಿಜ್ವರ ಆರಂಭವಾಗಿತ್ತು. ಆದರೆ, ಈ ಬಾರಿ ಉದ್ಯಾನದ ಪಕ್ಕದಲ್ಲೇ ಹರಿಯುವ ಕಲುಷಿತ ಚರಂಡಿ ನೀರನ್ನು ಸೇವಿಸಿ ಸಾವನ್ನಪ್ಪಿವೆ ಎನ್ನುವ ಶಂಕೆಯೂ ವ್ಯಕ್ತವಾಗಿದೆ.

ಮನುಷ್ಯನಿಗೂ ಹರಡಿದ ಹಕ್ಕಿ ಜ್ವರ: ರಷ್ಯಾದಲ್ಲಿ ಮೊದಲ ಪ್ರಕರಣ ಮನುಷ್ಯನಿಗೂ ಹರಡಿದ ಹಕ್ಕಿ ಜ್ವರ: ರಷ್ಯಾದಲ್ಲಿ ಮೊದಲ ಪ್ರಕರಣ

Amid Coronavirus Scare Bird Deaths Create Panic In Mysuru

ಮೃತಪಟ್ಟಿರುವ ಪಕ್ಷಿಗಳನ್ನು ಬಕ ಪ್ರಬೇಧದ ಕೊಳದ ಬಕ (ಪಾಂಡ್‌ ಹೆರಾನ್‌) ಮತ್ತು ಬೆಳ್ಳಕ್ಕಿ ಎಂದು ಗುರುತಿಸಲಾಗಿದೆ. ಒಳಚರಂಡಿ ಸಮೀಪದ ಮರದ ತೋಪು, ಬಳಿ ಕೆಲ ದಿನಗಳ ಹಿಂದೆಯೇ ಪಕ್ಷಿಗಳು ಸಾವಿಗೀಡಾಗಿವೆ.

ಹಕ್ಕಿ ಜ್ವರ; ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ ಕೇಂದ್ರ ಸಚಿವಹಕ್ಕಿ ಜ್ವರ; ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ ಕೇಂದ್ರ ಸಚಿವ

ಇದರ ಸಮೀಪದಲ್ಲೇ ಮತ್ತೊಂದು ಪಕ್ಷಿ ಮೃತಪಟ್ಟಿದೆ. ಪಕ್ಷಿಗಳ ಸಾವಿನ ಕಾರಣಗಳನ್ನು ಪತ್ತೆ ಹಚ್ಚುವಂತೆ ಪಕ್ಷಿತಜ್ಞ ಶೈಲಜೇಶ ಒತ್ತಾಯಿಸಿದ್ದಾರೆ. ಪಾರ್ಕ್‌ನ ನೀರನ್ನು ಶುದ್ಧೀಕರಿಸುವಂತೆ ಒತ್ತಾಯಿಸಿರುವ ಪೀಪಲ್ಸ್‌ ಫಾರ್‌ ಅನಿಮಲ್ಸ್‌ ನ ಭಾಗ್ಯಲಕ್ಷ್ಮೀ ಮತ್ತು ಅಜಯ್‌ ಒಳಚರಂಡಿ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.

English summary
Bird deaths near Kodava Samaja at Mysuru city have created panic. Locals taking the death as a case of the bird flu virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X