ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಭಾರೀ ಮಳೆಗೆ ಕುಸಿಯುವ ಹಂತ ತಲುಪಿದ ಮೈಸೂರು ಅರಮನೆ ಛಾವಣಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 26: ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಧಾರಾಕಾರ ಮಳೆ ಸುರಿದಿದೆ. ಇದೇ ವೇಳೆ ಸಾಂಸ್ಕೃತಿಕ ನಗರಿ ಮೈಸೂರು ಜನರ ಜೀವನವನ್ನು ವರುಣದೇವ ಅಸ್ತವ್ಯಸ್ತಗೊಳಿಸಿದ್ದಾನೆ.

ಭಾರೀ ಮಳೆಯಿಂದಾಗಿ ಇದೀಗ ಮೈಸೂರಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಗೆ ಆಪತ್ತು ಎದುರಾಗಿದೆ. ಕಳೆದ ಕೆಲವು ದಿನಗಳಿಂದ ಎಡಬಿಡದೆ ಸುರಿದ ನಿರಂತರ ಮಳೆಯಿಂದಾಗಿ ಅರಮನೆ ಛಾವಣಿ ಕುಸಿಯುವ ಹಂತ ತಲುಪಿದೆ.

ಅರಮನೆ ಒಳಭಾಗದ ಛಾವಣಿಯ ಗಾರೆ ಚಕ್ಕೆ ಚಕ್ಕೆಯಾಗಿ ಉದುರುತ್ತಿದೆ. ಪ್ರಮುಖವಾಗಿ ರಾಜವಂಶಸ್ಥರು ವಾಸವಿರುವ ಖಾಸಗಿ ಅರಮನೆ ಭಾಗಕ್ಕೆ ಹೆಚ್ಚು ಹಾನಿಯಾಗಿದೆ.

Mysurus Ambavilasa Palace Roof Leakage Due to Heavy Rain; Repair To Be Done Soon

ಅಲ್ಲದೇ, ಸರ್ಕಾರಿ ಸ್ವಾಮ್ಯದ ಅರಮನೆ ಭಾಗವೂ ಶಿಥಿಲಗೊಂಡಿದ್ದು, ಅರಮನೆ ಕಟ್ಟಡದ ಪ್ರಮುಖ ಕಡೆಗಳಲ್ಲಿನ ಛಾವಣಿ ಹಲವು ವರ್ಷಗಳ ಹಿಂದೆಯೇ ಪಾಚಿ ಕಟ್ಟಿ, ಬಿರುಕು ಬಿಟ್ಟಿದ್ದು, ರಿಪೇರಿ ಮಾಡಲು ಸರ್ಕಾರ, ರಾಜವಂಶಸ್ಥರು ಮೀನಾಮೇಷ ಎಣಿಸುತ್ತಿದ್ದಾರೆ. ಈ ನಡುವೆ ಅರಮನೆಯ ಆಯ್ದ ಭಾಗವನ್ನು ಪುನಶ್ಚೇತನಗೊಳಿಸಲು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮುಂದಾಗಿದ್ದಾರೆ.

ಮೈಸೂರಿನಲ್ಲಿ ಹಳೆಯ ಕಟ್ಟಡಗಳು ಕುಸಿಯುತ್ತಿವೆ
ಮೈಸೂರಿನಲ್ಲಿ ಭಾರಿ ಮಳೆಯ ಅವಾಂತರಕ್ಕೆ ಮಂಡಿ ಮೊಹಲ್ಲಾದಲ್ಲಿ ಮನೆಯೊಂದು ಕುಸಿದುಬಿದ್ದಿತ್ತು. ಮನೆಯಲ್ಲಿ ಸಿಲುಕಿದ ಐವರನ್ನು ರಕ್ಷಿಸುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿತ್ತು.

Mysurus Ambavilasa Palace Roof Leakage Due to Heavy Rain; Repair To Be Done Soon

ಮೈಸೂರಿನಲ್ಲಿ ರಾಜಾಡಳಿತ ಇದ್ದಾಗಿನಿಂದಲೂ ಇರುವ ಹಳೆಯ ಕಟ್ಟಡಗಳಿದ್ದು, ಈಗ ಸುರಿದ ಧಾರಾಕಾರ ಮಳೆಗೆ ಅವು ಕುಸಿಯುವ ಹಂತಕ್ಕೆ ತಲುಪಿವೆ. ನಗರದ ತುಂಬೆಲ್ಲಾ ಹಳೆಯ ಕಟ್ಟಡಗಳೇ ಹೆಚ್ಚಾಗಿದ್ದು, ಜಿಟಿಜಿಟಿ ಮಳೆಗೆ ಕುಸಿಯುವ ಭೀತಿ ಎದುರಾಗಿದೆ.

Recommended Video

ಚಳಿಗಾಲದಲ್ಲಿ ಕೊರೊನಾ 3 ನೇ ಅಲೆ ಅಪ್ಪಳಿಸೋದು ಗ್ಯಾರೆಂಟಿ | Oneindia Kannada

English summary
Mysuru's Ambavilasa Palace Roof Leakage due to Heavy Rain; Repair to be done soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X