ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾವೇರಿ ಕೃಪೆ: ಈ ಬಾರಿ ನೀರಿನ ಗದ್ದಲವಿರಲಿಕ್ಕಿಲ್ಲ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ.26: ನಗರದಲ್ಲಿ ಕಾವೇರಿ ಜಲನಿಗಮದ ಮೂಲಗಳ ಪ್ರಕಾರ ಈ ಬಾರಿ ಕಾವೇರಿ ಖ್ಯಾತೆಯ ತಲೆನೋವಿಲ್ಲ. ಏಕೆಂದರೆ, ಸೆಪ್ಟೆಂಬರ್ ವರೆಗೆ ಹರಿಸಬೇಕಾದ ನೀರು ಜುಲೈ ಮಧ್ಯಂತರದ ವೇಳೆಗೆ ತಮಿಳುನಾಡು ದಾಟಿದೆ.

ಅಧಿಕಾರಿಗಳ ಪ್ರಕಾರ ಜೂನ್ 1ರಿಂದ ಸೆಪ್ಟೆಂಬರ್ ಅಂತ್ಯದವರೆಗೆ ರಾಜ್ಯ 123 ಟಿಎಂಸಿ ನೀರು ಬಿಡುಗಡೆ ಮಾಡಬೇಕಿತ್ತು. ಆದರೆ ಈಗಾಗಲೇ 110 ಟಿಎಂಸಿಗೂ ಅಧಿಕ ನೀರು ಹರಿದಿದೆ. ಹೀಗಾಗಿ ಈ ಬಾರಿ ನೀರಿನ ತಲೆ ನೋವಿಲ್ಲ.

ಭದ್ರಾ ಜಲಾಶಯದಿಂದ ನಾಲ್ಕು ಕ್ಲಸ್ಟರ್ ಗೇಟ್ ಗಳ ಮೂಲಕ ನೀರು ಬಿಡುಗಡೆಭದ್ರಾ ಜಲಾಶಯದಿಂದ ನಾಲ್ಕು ಕ್ಲಸ್ಟರ್ ಗೇಟ್ ಗಳ ಮೂಲಕ ನೀರು ಬಿಡುಗಡೆ

"ಆಗಸ್ಟ್ ನಲ್ಲಿ ಮತ್ತೆ ಕೊಡಗಿನಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿ ತಮಿಳುನಾಡಿಗೆ ನ್ಯಾಯಾಲಯ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ನೀರು ಹರಿಯುವ ಸಾಧ್ಯತೆ ಇದೆ" ಎನ್ನುತ್ತಾರೆ ಅಧಿಕಾರಿಗಳು.

Already 110 tmc of water has been released to Tamil Nadu

ಒಟ್ಟಾರೆ ತಮಿಳುನಾಡಿಗೆ ಕರ್ನಾಟಕ 177.5 ಟಿಎಂಸಿ ನೀರು ಹರಿಸಬೇಕಿದೆ. ಈ ಪೈಕಿ 123 ಟಿಎಂಸಿ ಮಳೆಗಾಲದಲ್ಲಿ ಹರಿಸಬೇಕಿದೆ. 1993ರ ಬಳಿಕ ಇದೇ ಮೊದಲ ಬಾರಿಗೆ ಕೆಆರ್ ಎಸ್ ಅಣೆಕಟ್ಟು ಜುಲೈ ತಿಂಗಳಲ್ಲೇ ತುಂಬಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ಮಳೆರಾಯನ ಕೃಪೆ: ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚಿನ ನೀರುಮಳೆರಾಯನ ಕೃಪೆ: ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚಿನ ನೀರು

ಸಿಎಂ ಎಚ್‍ಡಿಕೆ ಜುಲೈ 20ರಂದು ಅಣೆಕಟ್ಟಿಗೆ ಬಾಗಿನ ಸಮರ್ಪಿಸಿದ್ದರು. ಕಾವೇರಿ ಜಲಾನಯನದ ಹೇಮಾವತಿ, ಹಾರಂಗಿ ಹಾಗೂ ಕಬಿನಿ ಜಲಾಶಯಗಳೂ ಈ ಬಾರಿ ತುಂಬಿದ್ದು, ರೈತರ ಮೊಗದಲ್ಲಿ ಸಂತಸದ ಅಲೆಯುಕ್ಕಿಸಿದೆ.

English summary
This time Tamil Nadu has more water. According to officials, the state had to release 123 TMC water from June 1 to September.But already 110 tmc of water has been released.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X