ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು-ಮಂಗಳೂರು ವಿಮಾನ ಸಂಚಾರಕ್ಕೆ ಚಾಲನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 11: ಮೈಸೂರು ಮತ್ತು ಮಂಗಳೂರು ನಡುವಿನ ವಿಮಾನ ಸೇವೆಗೆ ಚಾಲನೆ ನೀಡಲಾಗಿದೆ. ಅಲೆಯೆನ್ಸ್ ಏರ್ ಕಂಪನಿಯ ವಿಮಾನ ವಾರದಲ್ಲಿ 4 ದಿನಗಳ ಕಾಲ ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.

ಶುಕ್ರವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕೊಚ್ಚಿನ್-ಮೈಸೂರು-ಮಂಗಳೂರು ವಿಮಾನಕ್ಕೆ ಚಾಲನೆ ನೀಡಲಾಯಿತು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ವಿಮಾನ ನಿಲ್ದಾಣದ ಅಧಿಕಾರಿಗಳು ಉಪಸ್ಥಿತರಿದ್ದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಟರ್ಮಿನಲ್ ಆರಂಭ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಟರ್ಮಿನಲ್ ಆರಂಭ

Alliance Air Begins Mysuru Mangaluru Flight Service

ಮೊದಲ ದಿನ ಮೈಸೂರಿನಿಂದ ಮಂಗಳೂರಿಗೆ ಸಂಚಾರ ನಡೆಸಲು 23 ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ್ದರು. ಮಂಗಳೂರಿನಿಂದ ಮೈಸೂರಿಗೆ ಆಗಮಿಸಲು 33 ಟಿಕೆಟ್ ಬುಕ್ ಆಗಿತ್ತು. ಅಲಯನ್ಸ್ ಏರ್ ಕಂಪನಿ ಉಭಯ ನಗರಗಳ ನಡುವೆ ವಿಮಾನ ಹಾರಾಟ ನಡೆಸಲಿದೆ.

ಮೈಸೂರು-ಮಂಗಳೂರು ವಿಮಾನ ಸೇವೆ ಮೈಸೂರು-ಮಂಗಳೂರು ವಿಮಾನ ಸೇವೆ

Alliance Air Begins Mysuru Mangaluru Flight Service

ಮೈಸೂರು-ಮಂಗಳೂರು ನಡುವೆ 2, 303ರೂ. ಗಳಿಗೆ ಸಂಚಾರ ನಡೆಸಬಹುದಾಗಿದೆ. ಬುಧವಾರ, ಶುಕ್ರವಾರ, ಶನಿವಾರ, ಭಾನುವಾರ ಮಾತ್ರ ವಿಮಾನ ಸಂಚಾರ ನಡೆಸಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಪ್ರತಿದಿನದ ಸಂಚಾರವೂ ಆರಂಭವಾಗಲಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ರಸ್ತೆ; ಸರ್ಕಾರದ ಒಪ್ಪಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ರಸ್ತೆ; ಸರ್ಕಾರದ ಒಪ್ಪಿಗೆ

ಉಡಾನ್ ಯೋಜನೆಯಡಿ ಮೈಸೂರು-ಮಂಗಳೂರು ನಡುವೆ ವಿಮಾನ ಹಾರಾಟ ಆರಂಭಿಸುವುದಾಗಿ ಅಲೆಯನ್ಸ್ ಏರ್ ಹೇಳಿತ್ತು. ಅಕ್ಟೋಬರ್‌ನಲ್ಲಿಯೇ ವಿಮಾನ ಸೇವೆ ಆರಂಭವಾಗಬೇಕಿತ್ತು. ಆದರೆ, ವಿಳಂಬವಾಗಿದ್ದು ಡಿಸೆಂಬರ್‌ನಲ್ಲಿ ಹಾರಾಟ ಆರಂಭವಾಗಿದೆ.

ವೇಳಾಪಟ್ಟಿ

English summary
Alliance air began the Mysuru-Mangaluru flight on December 11. Fligh will run 4 days in a week. No flight on Monday, Tuesday, Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X