ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಯಿ ಮೇಲೆ ಅತ್ಯಾಚಾರ ಆರೋಪ; ಯುವಕನ ಬಂಧನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 16: ದೇಶದ ಬಹುತೇಕ ಭಾಗಗಳಲ್ಲಿ ಅತ್ಯಾಚಾರ ಎನ್ನುವ ಅಪರಾಧ ನಿತ್ಯದ ಸುದ್ದಿಯೇ ಆಗಿಬಿಟ್ಟಿದೆ. ಇದರಲ್ಲಿ 6 ತಿಂಗಳ ಮಗುವಿನಿಂದ ಹಿಡಿದು 70ರ ಹರೆಯದ ಸಂತ್ರಸ್ಥೆಯರೂ ಇರುವುದು ಮನುಕುಲವೇ ತಲೆ ತಗ್ಗಿಸುವ ಘಟನೆ ಆಗಿದೆ.

ಸರ್ಕಾರ ಎಷ್ಟೇ ಬಿಗಿ ಕಾನೂನು ಮಾಡಿದರೂ ಅತ್ಯಾಚಾರಿಗಳು ನಿರ್ಭಯವಾಗಿಯೇ ಅತ್ಯಾಚಾರ ನಡೆಸುತ್ತಿರುವುದನ್ನು ನೋಡಿದರೆ ಕಾನೂನು ಇದೆಯೇ ಎಂಬ ಅನುಮಾನ ಮೂಡುತ್ತಿದೆ.

ಕಳುವಾದ ಚಿನ್ನ ಪತ್ತೆಗೆ ಮನೆ ಕೆಲಸದಾಕೆಗೆ ಪೊಲೀಸರ ಹಿಂಸೆ; ಆರೋಪ ಕಳುವಾದ ಚಿನ್ನ ಪತ್ತೆಗೆ ಮನೆ ಕೆಲಸದಾಕೆಗೆ ಪೊಲೀಸರ ಹಿಂಸೆ; ಆರೋಪ

ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರದ ನಂತರ ಇದೀಗ ವಿಕೃತ ಕಾಮುಕರು ಹೆಣ್ಣು ಪ್ರಾಣಿಗಳನ್ನೂ ಬಿಡುತ್ತಿಲ್ಲ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾಮುಕನೊಬ್ಬ ಹೆಣ್ಣು ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿದ ಘಟನೆ ವರದಿ ಆಗಿದ್ದು, ಪೋಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ.

Mysuru: Allegation Of Rape On Street Dog; Detention Of A Young Man

ಸಾಮಾಜಿಕ ತಾಣದಲ್ಲಿ ವ್ಯಕ್ತಿಯೊಬ್ಬ ಬೀದಿ ನಾಯಿಗೆ ಲೈಂಗಿಕ ಕಿರುಕುಳ ನೀಡಿರುವ ವಿಡಿಯೋ ವೈರಲ್ ಆಗಿದ್ದು, ಯುವಕನ ವಿರುದ್ಧ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್​ಎ) ಸಂಸ್ಥೆಯ ಪ್ರಾಣಿ ಕ್ಷೇಮಾಭಿವೃದ್ಧಿ ಅಧಿಕಾರಿ ಕೆ. ಬಿ. ಹರೀಶ್ ಅವರು ದೂರು ನೀಡಿದ್ದರು.

ದುಷ್ಕೃತ್ಯ ಎಸಗಿರುವ ವಿಕೃತ ಯುವಕನ ವಿರುದ್ಧ ಐಪಿಸಿ ಸೆಕ್ಷನ್​ 1860 (ಯು /ಎಸ್ -377: ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ನಡೆಸುವುದು) ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ ಮತ್ತು 1960 ( ಯು/ಇಎಸ್​-11(1)(ಎ)) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಕೃತ ಘಟನೆಯು ಗೋಕುಲಂ 3ನೇ ಹಂತದ ಗಣಪತಿ ದೇವಸ್ಥಾನದ ರಸ್ತೆ ಬಳಿ ಫೆ.11ರ ರಾತ್ರಿ ನಡೆದಿದೆ. ವ್ಯಕ್ತಿಯೊಬ್ಬ ಹೆಣ್ಣುನಾಯಿಯ ಮೇಲೆ ಬಲವಂತವಾಗಿ ಲೈಂಗಿಕ ಕಿರುಕುಳ ನೀಡುವುದನ್ನು ದಾರಿಹೋಕರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದರು. ದುಷ್ಕೃತ್ಯದ ವಿಡಿಯೋವನ್ನು ಈ ಬಳಿಕ ವೈರಲ್ ಮಾಡಿದ್ದರು.

ವಿಡಿಯೋದಲ್ಲಿನ ದೃಶ್ಯಗಳನ್ನು ಆಧರಿಸಿ ಪಿಎಫ್​ಎ ಅಧಿಕಾರಿ ಕೆ.ಬಿ. ಹರೀಶ್ ಪೊಲೀಸರಿಗೆ ದೂರು ನೀಡಿದ್ದಾರೆ. ವಿಡಿಯೋ ಆಧರಿಸಿ ಕೃತ್ಯ ಎಸಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.

ಮಂಗಳವಾರ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ನಾಯಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯ ನಂತರ ಸತ್ಯ ಬಯಲಾಗಲಿದೆ.

English summary
In Mysuru a young man has been reported raping on street dog and the police have arrested a young man.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X