ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ನಗರದಲ್ಲಿ ಎಲ್ಲಾ ಟೀ ಅಂಗಡಿಗಳು ಬಂದ್

|
Google Oneindia Kannada News

ಮೈಸೂರು, ಜುಲೈ 16 : ಮೈಸೂರು ನಗರದಲ್ಲಿ ಕೋವಿಡ್ - 19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1320ಕ್ಕೆ ಏರಿಕೆಯಾಗಿದೆ. ಮಹಾನಗರ ಪಾಲಿಕೆ ಸೋಂಕು ತಡೆಯಲು ಶ್ರಮಿಸುತ್ತಿದೆ.

ಮೈಸೂರು ನಗರದ ಟೀ ಅಂಗಡಿಗಳಲ್ಲಿ ಮತ್ತು ಫುಟ್‌ಪಾತ್‌ನ ಟೀ ವ್ಯಾಪಾರಿ ಸ್ಥಳಗಳಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಅನಗತ್ಯವಾಗಿ ಗುಂಪು ಸೇರುತ್ತಿದ್ದಾರೆ.

ಮೈಸೂರು: MSIL ಮದ್ಯದಂಗಡಿ ತೆರೆಯಲು ಸ್ಥಳೀಯರ ವಿರೋಧಮೈಸೂರು: MSIL ಮದ್ಯದಂಗಡಿ ತೆರೆಯಲು ಸ್ಥಳೀಯರ ವಿರೋಧ

ಟೀ ಅಂಗಡಿಗಳ ಮುಂದೆ ಜನರು ಗುಂಪು ಸೇರಿ ಬೀಡಿ, ಸಿಗರೇಟ್ ಸೇವನೆ ಮಾಡುತ್ತಿದ್ದಾರೆ. ಇದರಿಂದಾಗಿ ಕೊರೊನಾ ವೈರಸ್ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಅಲ್ಲದೇ ಜನರು ಮಾಸ್ಕ್ ಧರಿಸದಿರುವ ಪ್ರಕರಣಗಳು ಪತ್ತೆಯಾಗಿವೆ.

 ಮೈಸೂರು ಲಾಕ್ ಡೌನ್ ಕುರಿತು ಸಿಎಂಗೆ ಸಾರಾ ಮಹೇಶ್ ಪತ್ರ ಮೈಸೂರು ಲಾಕ್ ಡೌನ್ ಕುರಿತು ಸಿಎಂಗೆ ಸಾರಾ ಮಹೇಶ್ ಪತ್ರ

All Tea Stall In Mysuru City To Close

ಹೆಚ್ಚಿನ ವ್ಯಾಪಾರಿಗಳು ಶುಚಿತ್ವವನ್ನು ಸಹ ಕಾಪಾಡುತ್ತಿಲ್ಲ. ಈ ಎಲ್ಲಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಜುಲೈ 16ರಿಂದ ಜಾರಿಗೆ ಬರುವಂತೆ ಮುಂದಿನ ಆದೇಶದ ತನಕ ಟೀ ಅಂಗಡಿಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ.

ಮೈಸೂರು ಜಿಲ್ಲೆಯ ಲಾಕ್ ಡೌನ್ ಗೊಂದಲಕ್ಕೆ ತೆರೆ ಎಳೆದ ಡಿಸಿ ಮೈಸೂರು ಜಿಲ್ಲೆಯ ಲಾಕ್ ಡೌನ್ ಗೊಂದಲಕ್ಕೆ ತೆರೆ ಎಳೆದ ಡಿಸಿ

ಮೈಸೂರು ಮಹಾನಗರ ಪಾಲಿಕೆ ಈ ಕುರಿತು ಆದೇಶ ಹೊರಡಿಸಿದೆ. ನಗರದ ಎಲ್ಲಾ ಟೀ ಅಂಗಡಿ, ಎಲ್ಲಾ ಫುಟ್‌ಪಾತ್ ಟೀ ಅಂಗಡಿಗಳನ್ನು ಸಹ ಮುಂದಿನ ಆದೇಶದ ತನಕ ಮುಚ್ಚಬೇಕು ಎಂದು ಸೂಚಿಸಲಾಗಿದೆ.

ಮೈಸೂರು ನಗರದ ಎಲ್ಲಾ ಟೀ ಅಂಗಡಿಗಳು ಹಾಗೂ ಎಲ್ಲಾ ಪುಟ್ ಪಾತ್ ಟೀ ಅಂಗಡಿಗಳನ್ನು ಸಹ ನಿರ್ಬಂಧಿಸಿ ಆದೇಶಿಸಿದೆ. ಮೈಸೂರು ನಗರದಲ್ಲಿ ಇಂದು ಸಹ 130 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ.

English summary
Mysuru city corporation ordered to close all tea stall including footpath tea shop in the city to control spread of Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X