ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಮದ್ಯ ಮಾರಾಟ ಮಾಡಲು ವ್ಯಾಟ್ಸಪ್ ಸ್ಟೇಟಸ್ ಐಡಿಯಾ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 12: ಮೈಸೂರಿನಲ್ಲಿ ಮದ್ಯ ಮಾರಾಟ ಮಾಡಲು ಚಾಲಾಕಿಗಳು ಹೊಸ ಐಡಿಯಾ ಹುಡುಕಿಕೊಂಡಿದ್ದು, ವ್ಯಾಟ್ಸಪ್ ಗ್ರೂಫ್ ಹಾಗೂ ವ್ಯಾಟ್ಸಪ್ ಸ್ಟೇಟಸ್ ಹಾಕಿ ಮದ್ಯ ಮಾರಾಟ ಮಾಡುತ್ತಿದ್ದರು.

ಮೈಸೂರಿನಲ್ಲಿ ಅಕ್ರಮ ಮದ್ಯ ಮಾರಾಟಗಾರರನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಗಾಯಿತ್ರಿಪುರಂ ಬಡಾವಣೆಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದ ಸಂದರ್ಭದಲ್ಲಿ ಮನೆಯಲ್ಲಿ ಶೇಖರಿಸಿಟ್ಟಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಕೊರೊನಾದಿಂದ ಮೃತ ಪಟ್ಟವರು 4, ಮದ್ಯ ಸಿಗದೇ ಆತ್ಮಹತ್ಯೆ ಮಾಡಿಕೊಂಡವರು 22: ಹಾಗಾಗಿ..ಕೊರೊನಾದಿಂದ ಮೃತ ಪಟ್ಟವರು 4, ಮದ್ಯ ಸಿಗದೇ ಆತ್ಮಹತ್ಯೆ ಮಾಡಿಕೊಂಡವರು 22: ಹಾಗಾಗಿ..

ವ್ಯಾಟ್ಸಪ್ ಸ್ಟೇಟಸ್ ಹಾಕಿ ಗೆಳೆಯರಿಗೆ ಮದ್ಯ ಮಾರಾಟ ಮಾಡುತ್ತಿದ್ದರು. ಗಾಯಿತ್ರಿಪುರಂನ ಮೀನು ಮಾರಾಟ ಕೇಂದ್ರದ ಬಳಿ ನಿಂತು ಮದ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದರು.

Alcohol Sale In Mysuru: Arrested Of Accused

ಓರ್ವ ವ್ಯಕ್ತಿ ಅಂಗಡಿ ಬಳಿ ನಿಂತು ಮದ್ಯ ಇರುವ ಬಗ್ಗೆ ಮಾಹಿತಿ ನೀಡುತ್ತಿದ್ದನು. ಎಣ್ಣೆ ಬೇಕು ಅಂದವರನ್ನು ಮತ್ತೊಬ್ಬ ವ್ಯಕ್ತಿಯ ಸಂಪರ್ಕಕ್ಕೆ ರವಾನೆ ಮಾಡುತ್ತಿದ್ದ. ಎಲ್ಲ ವ್ಯವಹಾರವು ವ್ಯಾಟ್ಸಪ್ ನಲ್ಲೇ ಡೀಲ್ ಮಾಡುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದರು. ಸುಭಾಷ್, ಶಂಕರಯ್ಯ ಎಂಬ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರಿಂದ ಮನೆಯಲ್ಲಿ ಶೇಖರಿಸಿಟ್ಟಿದ್ದ 13.5 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಅಂದಾಜು 66.720 ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡು, ಇಬ್ಬರು ವ್ಯಕ್ತಿಗಳ ಮೇಲೆ ಕೇಸು ದಾಖಲಿಸಲಾಗಿದೆ.

English summary
The liquor had been seized at the house of Gayatripuram in Mysuru during the raid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X