ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ಎಸ್ ಎಲ್ ಸಿ ಫಲಿತಾಂಶದಲ್ಲೂ ಹಿಂದುಳಿದ ಸಾಂಸ್ಕೃತಿಕ ನಗರಿ

|
Google Oneindia Kannada News

ಮೈಸೂರು, ಮೇ 13: ಪಿಯುಸಿ ಫಲಿತಾಂಶಲ್ಲಂತೂ ಕಳಪೆ ಪ್ರದರ್ಶನವಾಯ್ತು, ಇದೀಗ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲೂ ಸಾಂಸ್ಕೃತಿಕ ನಗರಿ ಮೈಸೂರು ಕಳಪೆ ಪ್ರದರ್ಶನ ನೀಡಿದೆ.

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಕಳೆದ ವರ್ಷ ರಾಜ್ಯಕ್ಕೆ 8ನೇ ಸ್ಥಾನದಲಿದ್ದ ಮೈಸೂರು ಈ ಬಾರಿ 21 ನೇ ಸ್ಥಾನಕ್ಕೆ ಕುಸಿದಿರುವುದು ಇದಕ್ಕೆ ಪ್ರತ್ಯಕ್ಷ ಉದಾಹರಣೆ.

After PUC, now dismal show of Mysore in SSLC results also

ಇತ್ತೀಚೆಗಷ್ಟೇ, ಕೇಂದ್ರ ಸರ್ಕಾರ ಪ್ರತಿ ವರ್ಷ ಬಿಡುಗಡೆಗೊಳಿಸುವ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ಮೈಸೂರು ತನ್ನ ಮೊದಲ ಸ್ಥಾನ ಕಳೆದುಕೊಂಡಿದ್ದು ನಾಗರಿಕರಿಗೆ ಬೇಸರ ತರಿಸಿತ್ತು. ಈಗ, ಪಿಯುಸಿ, ಎಸ್ಎಸ್ಎಲ್ ಸಿ ಪರೀಕ್ಷೆಗಳ ಫಲಿತಾಂಶಗಳಲ್ಲೂ ಕಳಪೆ ಸಾಧನೆ ತೋರಿರುವುದು ನಾಗರಿಕರಿಗೆ ಮತ್ತಷ್ಟು ಬೇಸರ ತರಿಸಿದೆ.

ಕಳೆದ ವರ್ಷ 8ನೇ ಸ್ಥಾನದಲಿದ್ದ ಮೈಸೂರು ಈ ಬಾರಿ 21 ನೇ ಸ್ಥಾನಕ್ಕೆ ಕುಸಿದಿದೆ. ಪ್ರತಿ ವರ್ಷವೂ ಎಸ್ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂಕಗಳನ್ನ ಪಡೆಯುತ್ತಿದ್ದ ಜಿಲ್ಲೆ ಎಂದು ಖ್ಯಾತಿ ಪಡೆದಿದ್ದ ಮೈಸೂರು ಈ ಬಾರಿ . ಶೇ 73.03 ಫಲಿತಾಂಶ ಪಡೆದಿದೆ. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ 11 ಸ್ಥಾನಗಳ ಕುಸಿತ ಕಂಡಿದೆ.

ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಶಿಕ್ಷಣಾಧಿಕಾರಿಗಳು, ಮೈಸೂರಿನಲ್ಲಿ ಶಾಲಾ ಶಿಕ್ಷಕರ ಕೊರತೆ ಎದ್ದು ಕಾಣುತ್ತಿರುವುದೇ ಈ ಹಿನ್ನೆಡೆಗೆ ಪ್ರಮುಖ ಕಾರಣ ಎನ್ನುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಹಳೇ ಮೈಸೂರು ಪ್ರಾಂತ್ಯದಲ್ಲಿ ಶಿಕ್ಷಣಕ್ಕೆ ತನ್ನದೇ ಆದ ಘನತೆಯನ್ನು ಹೊಂದಿರುವ ಮೈಸೂರು ಈ ಬಾರಿ ಕಳಪೆ ಸಾಧನೆ ತೋರಿರುವುದು ಬೇಸರದ ಸಂಗತಿ.

English summary
In recent SSLC results, Mysore slips to 21st place in the state. In PUC results also Mysore was in 8th place. This dismal show create disappointments among civilians of this cultural city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X