ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗಾಯಣಕ್ಕೆ ಸಂಘರ್ಷ ಮಾಡಲು ಬಂದಿಲ್ಲ: ನಿರ್ದೇಶಕ ಅಡ್ಡಂಡ ಕಾರ್ಯಪ್ಪ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 20: ನಾನು ರಂಗಾಯಣಕ್ಕೆ ಸಂಘರ್ಷ ಮಾಡಲು ಬಂದಿಲ್ಲ, ಸಮನ್ವಯತೆ ಸಾಧಿಸಲು ಬಂದಿದ್ದೇನೆ. ನಾನು ಬಂದಿರುವುದು ರಂಗಾಯಣಕ್ಕಾಗಿ, ಯಾವುದೇ ಪಕ್ಷದ ಬಾವುಟ ಹಾರಿಸಲು ಅಲ್ಲ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.

ಈ ಬಾರಿಯ "ಗಾಂಧಿ ಪಥ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ' ಯಶಸ್ವಿಯಾಗಿ ತೆರೆಕಂಡಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಬಾರಿ ಗಾಂಧಿ ಪಥ ಮನೆ ಮನೆಗಳನ್ನು ತಲುಪಿದೆ ಎಂದು ತಿಳಿಸಿದರು.

ಶಿವರಾತ್ರಿಗೆ ಮೈಸೂರಿನ ತ್ರಿನೇಶ್ವರನಿಗೆ 11 ಕೆ.ಜಿ ಚಿನ್ನದ ಮುಖವಾಡಶಿವರಾತ್ರಿಗೆ ಮೈಸೂರಿನ ತ್ರಿನೇಶ್ವರನಿಗೆ 11 ಕೆ.ಜಿ ಚಿನ್ನದ ಮುಖವಾಡ

ಈ ಬಾರಿ ಜನಸಾಮಾನ್ಯರು ಕೂಡ ಬಹುರೂಪಿಯಲ್ಲಿ ಭಾಗವಹಿಸಿದ್ದರು. ಪಂಥಗಳನ್ನು ಮೀರಿ ಪಥಗಳತ್ತ ಹೆಜ್ಜೆ ಹಾಕಿದ್ದೇವೆ. ಎಡ ಪಂಥಿಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಯಶಸ್ಸು ನಮ್ಮ ಎಲ್ಲಾ ತಂಡಕ್ಕೂ ಸಲ್ಲುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

Addanda Karyappa React On conflict In Rangayana

ಟಿಪ್ಪು ಒಬ್ಬ ಮತಾಂಧ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅಡ್ಡಂಡ ಕಾರ್ಯಪ್ಪ, ನನ್ನ ಮಾತು ಸ್ವಲ್ಪ ಒರಟು, ಕೊಡವರ ಮಾತೇ ಹಾಗೆ. ಅಷ್ಟಿಲ್ಲದಿದ್ದರೆ ಕೊಡವರು ದೇಶವನ್ನು ಕಾಯುವುದಕ್ಕೆ ಹೋಗುತ್ತಿರಲಿಲ್ಲ. ನೀವು ಪತ್ರಕರ್ತರು ಬೇಕಿದ್ದರೆ ಟೀ ಕುಡಿದು ನನ್ನ ಬಗ್ಗೆ ಟೀಕಿಸಿ ಬರೆಯಿರಿ ಎಂದು ಹೇಳಿದರು.

ನಾನು ಹೇಳಿದ್ದು, ಕೊಡವರಿಗೆ ಟಿಪ್ಪು ಎಂದರೆ ಒಬ್ಬ ಮತಾಂಧ. ಮೈಸೂರಿಗರಿಗೆ ಹೆಮ್ಮೆ ಎಂದು. ಟಿಪ್ಪು ಕೊಡಗಿನಲ್ಲಿ 12000 ಜನರನ್ನು ಮತಾಂತರ ಮಾಡಿದ್ದ ಎಂದು ಅಡ್ಡಂಡ ಕಾರ್ಯಪ್ಪ ಆರೋಪಿಸಿದರು.

English summary
I have come for Rangayana, not for any party flag hosting, said Rangayana director Addanda Karyappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X