ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಟಿ ಭಾವನಾಗೆ ಟೆಕ್ಕಿಗಳ ಕಾರ್ಯಕ್ರಮದಲ್ಲಿ ಅವಮಾನ ಅಯ್ತಂತೆ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 19: ನಟಿಯರನ್ನು ಹಗುರವಾಗಿ ಕಾಣುವ ಮನೋಭಾವ ಬದಲಾಗಬೇಕು ಎಂದು ಬಾಲಭವನದ ಅಧ್ಯಕ್ಷೆ ಹಾಗೂ ನಟಿ ಭಾವನಾ ಟೆಕ್ಕಿಗಳ ಕಾರ್ಯಕ್ರಮದಲ್ಲಿ ಆದ ಅವಮಾನವನ್ನು ಬಿಚ್ಚಿಟ್ಟಿದ್ದಾರೆ.

ಜಿಲ್ಲಾ ಪತ್ರಕರ್ತರ ಸಂಘ, ಹುಣಸೂರು ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಹುಣಸೂರು ತಾಲೂಕಿನ ನಾಗಾಪುರ ಗಿರಿಜನ ಆಶ್ರಮ ಶಾಲೆಯಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿಗಳ ಪ್ರದಾನ ಮತ್ತು ಹಿರಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಟೆಕ್ಕಿಗಳ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ತಮಗಾದ ಅನುಭವವನ್ನು ತೆರೆದಿಟ್ಟರು.[ಜೀ ಕನ್ನಡ ವಿರುದ್ಧ ಪ್ರೆಸ್ ಮೀಟ್ ಮಾಡಿ ನಟಿ ಭಾವನಾ ಗರಂ ಆಗಿದ್ದೇಕೆ.?]

ಮನಸಿಗೆ ಘಾಸಿ

ಮನಸಿಗೆ ಘಾಸಿ

ನಾನು ನಟಿ ಎಂದಾಗ ಟೆಕ್ಕಿಗಳು ಹಗುರವಾಗಿ ಕಂಡರು. ಇದು ನನ್ನ ಮನಸ್ಸಿಗೆ ಘಾಸಿಯನ್ನುಂಟು ಮಾಡಿತು. ನಟನೆಯ ಮಹತ್ವ ಅರಿಯದ ವಿದ್ಯಾವಂತರು ನನ್ನನ್ನು ಕೇವಲವಾಗಿ ನೋಡಿದ್ದು ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿತು.

ಮರೆತ ಮಾನವೀಯತೆ

ಮರೆತ ಮಾನವೀಯತೆ

ಇಂದಿನ ವಿದ್ಯಾವಂತರರು ಮಾನವೀಯತೆ ಮತ್ತು ಸಂಸ್ಕೃತಿ ಮರೆಯುತ್ತಿದ್ದಾರೆ ಇದು ಸಮಾಜದ ಮೇಲೆ ಭಾರೀ ಪರಿಣಾಮನ್ನುಂಟು ಮಾಡಲಿದೆ

ಅನಕ್ಷರಸ್ಥರಲ್ಲಿ ಅಂತಃಕರಣ

ಅನಕ್ಷರಸ್ಥರಲ್ಲಿ ಅಂತಃಕರಣ

ಗ್ರಾಮೀಣ ಅನಕ್ಷರಸ್ಥರಲ್ಲಿ ನಟನೆ ಮಾಡುವವರ ಮೇಲೆ ಅಂತಃಕರಣವಿದ್ದು, ಇದು ಸಮಾಧಾನದ ಸಂಗತಿಯಾಗಿದೆ. ಯುವ ಪೀಳಿಗೆ ನಮ್ಮ ಆಚಾರ, ವಿಚಾರ, ಸಂಸ್ಕೃತಿ ಮರೆಯುತ್ತಿರುವುದು ಒಳ್ಳೆ ಬೆಳವಣಿಗೆಯಲ್ಲ. ಇದನ್ನು ಅಳವಡಿಸಿಕೊಂಡು ಮುನ್ನಡೆಯಬೇಕು.

ಸಂಸ್ಕೃತಿ ಕಲಿಸಿ

ಸಂಸ್ಕೃತಿ ಕಲಿಸಿ

ಶಿಕ್ಷಣ ಅಂದರೆ ಬರೀ ಓದನ್ನು ಕಲಿಸುವ, ಉದ್ಯೋಗ ಪಡೆಯಲು ಮಾತ್ರಲ್ಲ. ಎಲ್ಲ ಸ್ತರದ ವೃತ್ತಿಯನ್ನು ಗೌರವಿಸುವ, ನಮ್ಮಂತೆ ಇತರರು ಎಂಬ ಭಾವನೆ ತುಂಬುವ, ಸಂಸ್ಕೃತಿಯನ್ನು ಕಲಿಸುವ ಪ್ರವೃತ್ತಿಯನ್ನು ಬೆಳೆಸುವ ಶಾಲೆಗಳಾಗಬೇಕು. ಆಗ ಮಾತ್ರ ಯುವ ಪೀಳಿಗೆ ಸಮಾಜಕ್ಕೆ ಕೊಡುಗೆಯಾಗಲು ಸಾಧ್ಯ

English summary
Techies insulted me in programme, said by actress and Balabhavana president Bhavana. Perception towards actress should change, every profession should respected by people, she suggested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X