• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುವ ದಸರಾದಲ್ಲಿ ಯಶ್ ಪಂಚಿಂಗ್ ಡೈಲಾಗ್'ಗೆ ಪಡ್ಡೆಗಳು ಫುಲ್ ಫಿದಾ

|
   Mysore Yuva Dasara 2018 : ಮೈಸೂರು ಯುವ ದಸರಾದಲ್ಲಿ ಯಶ್ ಪಂಚಿಂಗ್ ಡೈಲಾಗ್ ಗೆ ಫ್ಯಾನ್ಸ್ ಫಿದಾ

   ಮೈಸೂರು, ಅಕ್ಟೋಬರ್. 18: ಚಂದನವನದ ತಾರೆಯರ ಸೊಬಗಿನ ನೃತ್ಯ, ನೇಹ ಕಕ್ಕರ್ ಇಂಪಾದ ಗಾಯನಕ್ಕೆ ಯುವ ದಸರೆಯ ಸಂಭ್ರಮ ಮೇರೆ ಮೀರಿತ್ತು. ರಾಕಿಂಗ್ ಸ್ಟಾರ್ ಯಶ್ ಯುವ ದಸರೆಗೆ ರಂಗು ತುಂಬಿದರು.

   ಮಹಾರಾಜ ಕಾಲೇಜಿನ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಯುವಕ-ಯುವತಿಯರು ಯುವ ದಸರೆಯ ಕೊನೇ ದಿನದಂದು ಬುಧವಾರ (ಅ.17) ನರ್ತಿಸಿದ ಕಲಾವಿದರನ್ನು ಮನಸಾರೆ ಪ್ರೋತ್ಸಾಹಿಸಿದರು.

   ಮೈಸೂರು ದಸರಾ - ವಿಶೇಷ ಪುರವಣಿ

   ರಾಕಿಂಗ್ ಸ್ಟಾರ್ ಯಶ್ ಶೆರ್ವಾನಿ ತೊಟ್ಟು ಕಂಗೊಳಿಸುತ್ತಿದ್ದರು. ಅಣ್ತಮ್ಮಾ...ಎನ್ನುತ್ತ ವೇದಿಕೆ ಏರುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ಒಂದು ರೀತಿಯ ಸಂಚಾರ ವ್ಯಕ್ತವಾಯಿತು. ಸಂಭ್ರಮದ ಜೈಕಾರ ಮಾರ್ದನಿಸಿತು. ಮೆಚ್ಚಿನ ನಟನನ್ನು ಕಂಡ ಯುವ ಸಮೂಹ ಹರ್ಷ ವ್ಯಕ್ತಪಡಿಸಿತು.

   ಮೈಸೂರು ಯುವ ದಸರಾ: ಸೆಲೆಬ್ರಿಟಿಗಳು ಪಡೆಯುತ್ತಿರುವ ಸಂಭಾವನೆ ಎಷ್ಟು?

   ಕುಕ್ಕರಹಳ್ಳಿ ಕೆರೆಯಲ್ಲಿ ಓಡಾಡುತ್ತ, ಪಡುವಾರಹಳ್ಳಿಯಲ್ಲಿ ಬೆಳೆದ ನಾನು ನಿಮ್ಮ ಹುಡ್ಗ. ಮೈಸೂರಿನವನು ಎಂದು ಯಶ್ ಹೇಳುತ್ತಿದ್ದಂತೆಯೇ ಮತ್ತಷ್ಟು ಸಂಭ್ರಮ ಮನೆ ಮಾಡಿತು. ರಾಜಾಹುಲಿ, ರಾಮಾಚಾರಿ ಸಿನಿಮಾಗಳ ಕೆಲವು ಡೈಲಾಗ್ ಹೇಳುವುದರ ಜೊತೆಗೆ ಹಾಡೊಂದನ್ನು ಹಾಡಿ ನೆರೆದಿದ್ದ ಜನಸ್ತೋಮ ಸಂಭ್ರಮಿಸುವಂತೆ ಮಾಡಿದರು. ಮುಂದೆ ಓದಿ...

    ಸಂತೋಷ ಹಂಚಿಕೊಂಡ ಯಶ್

   ಸಂತೋಷ ಹಂಚಿಕೊಂಡ ಯಶ್

   "ನಾನು ಹುಡುಗನಾಗಿದ್ದಾಗ ಇದೇ ಯುವ ದಸರಾದ ಪಾಸ್ ಬೇಕು ಎಂದು ಕೇಳಿಕೊಳ್ಳುತ್ತಿದ್ದೆ. ಆದರೆ ಇಂದು ಇದೇ ವೇದಿಕೆಯ ಮೇಲೆ ನಿಂತಿದ್ದೇನೆ. ಇದಕ್ಕೆಲ್ಲ ನಿಮ್ಮ ಪ್ರೀತಿ, ಪ್ರೋತ್ಸಾಹವೇ ಕಾರಣ. ನನಗೆ ಮೈಸೂರಿಗೆ ಬರುವುದೆಂದರೆ ತುಂಬಾ ಖುಷಿ. ಸಾಕಷ್ಟು ಊರು, ದೇಶ ನೋಡಿದ್ದೇನೆ, ಆದರೆ ಮೈಸೂರಂತ ಊರನ್ನು ಎಲ್ಲಿಯೂ ನೋಡಿಲ್ಲ. ನನಗೆ ಮೈಸೂರಿಗೆ ಬಂದ್ರೆ ನನ್ನ ಹಳೆಯ ನೆನಪುಗಳು ಕಣ್ಣ ಮುಂದೆ ಬರುತ್ತವೆ" ಎಂದು ಯಶ್ ಸಂತೋಷ ಹಂಚಿಕೊಂಡರು.

    ನೇಹ ಕಕ್ಕರ್ ಗಾಯನ

   ನೇಹ ಕಕ್ಕರ್ ಗಾಯನ

   ಖ್ಯಾತ ಹಿನ್ನೆಲೆ ಗಾಯಕಿ ನೇಹ ಕಕ್ಕರ್ ಗಾಯನದ ಮೂಲಕ ಯುವ ದಸರೆಗೆ ಅದ್ಧೂರಿಯಾಗಿ ತೆರೆ ಎಳೆಯಲಾಯಿತು. ಮಿಲೇ ಹೋ ತುಮ್ ಹಮ್ ಸೇ, ಬಡೇ ನಶೀಬೋ ಸೇ.. ಸೇರಿದಂತೆ ಹಿಂದಿ ಹಾಡುಗಳಿಗೆ ಶ್ರೋತೃಗಳು ಕಿವಿಯಾದರು.

   ಮೈಸೂರಿನಲ್ಲಿ ಶುರುವಾಯ್ತು ಮಳೆ: ಏನೆಲ್ಲಾ ಅವಾಂತರ ಸೃಷ್ಟಿಸಿದೆ ಗೊತ್ತಾ?

    ರಚಿತಾ ನೃತ್ಯ

   ರಚಿತಾ ನೃತ್ಯ

   ಗುಳಿಕೆನ್ನೆಯ ಚೆಲುವೆ ರಚಿತಾ ರಾಮ್ ನರ್ತಿಸಿ ನೆರೆದಿದ್ದ ಯುವಕರನ್ನು ಸಂಭ್ರಮದಲ್ಲಿ ತೇಲುವಂತೆ ಮಾಡಿದರು. ನಟಿಯರಾದ ಮೇಘನಾ ಗಾಂವ್ಕರ್, ಅನುಪಮಾ ಗೌಡ, ಜಯಶ್ರೀ, ಕಿರುತೆರೆಯ ವೈಷ್ಣವಿ ಕನ್ನಡ ಹಾಡುಗಳಿಗೆ ನೃತ್ಯ ಮಾಡಿ ಪಡ್ಡೆ ಹುಡುಗರ ಮನಸ್ಸು ಗೆದ್ದರು. ನೃತ್ಯ ಸಂಯೋಜಕ ಎ.ಹರ್ಷ ಮತ್ತು ತಂಡದವರ ನೃತ್ಯ ಮನಸೂರೆಗೊಳಿಸಿತು.

    ನಿಂತೇ ಕಾರ್ಯಕ್ರಮ ವೀಕ್ಷಿಸಿದರು

   ನಿಂತೇ ಕಾರ್ಯಕ್ರಮ ವೀಕ್ಷಿಸಿದರು

   ಢಮರುಗ ಬಿಡ್ಸ್ ಸಂಗೀತಗಾರರು ಪಾಶ್ಚಿಮಾತ್ಯ ಸಂಗೀತಕ್ಕೆ ಭಾರತೀಯ ಸಂಗೀತದ ರಿದಂ ಸೇರಿಸಿ ಡ್ರಮ್, ತಮಟೆ, ನಗಾರಿಯ ಮೂಲಕ ಹೊಸ ನಾದವನ್ನು ಹೊಮ್ಮಿಸಿ ಚಪ್ಪಾಳೆ ಗಿಟ್ಟಿಸಿದರು. ಅನೀಶ್ ಮತ್ತು ಹರೀಶ್ ಹಾಸ್ಯ ಕಾರಂಜಿ ಚಿಮ್ಮಿಸಿದರು. ಅನುಪಮಾ ವಿಶಿಷ್ಟವಾಗಿ ನಿರೂಪಿಸಿದರು.

   ನಟ ಯಶ್ ಹಾಗೂ ಗಾಯಕಿ ನೇಹ ಕಕ್ಕರ್ ಅವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರಿಂದ ನೂಕು ನುಗ್ಗಲು ಉಂಟಾಗಿ ಜನ ತೊಂದರೆ ಅನುಭವಿಸಿದರು. ನಿರೀಕ್ಷೆಗಿಂತ ಹೆಚ್ಚಿನ ಜನ ಸೇರಿದ್ದರಿಂದ ವಿಐಪಿ, ವಿವಿಐಪಿ ಸ್ಥಳಗಳು ಸಂಪೂರ್ಣ ಭರ್ತಿಯಾಗಿದ್ದರಿಂದ ಅನೇಕರು ಸ್ಥಳಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದರು. ನಿಂತೇ ಕಾರ್ಯಕ್ರಮ ವೀಕ್ಷಿಸುತ್ತ ಖುಷಿಪಟ್ಟರು.

   ಯುವ ದಸರಾದಲ್ಲಿ ಅರ್ಮಾನ್ ಮಲ್ಲಿಕ್ ಹಾಡಿಗೆ ಹುಚ್ಚೆದ್ದು ಕುಣಿದ ಪಡ್ಡೆಹೈಕ್ಳು

   English summary
   Actor Yash, Actress Rachita Ram and Singer Neha Kakkar participated in the Yuva Dasara program on Wednesday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X