ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರೆರೆ, ಮೈಸೂರಿನಲ್ಲಿ ಅಲ್ಲಿಂದ ಇಲ್ಲಿಗೆ ಬಂತು ಅರಳಿಮರ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್.29: ಪರಿಸರ ಉಳಿಸುವ ನಿಟ್ಟಿನಲ್ಲಿ ಎನ್‌ಜಿಒ ಸಂಸ್ಥೆಯೊಂದು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಅರಳಿ ಮರವನ್ನು ಯಶಸ್ವಿಯಾಗಿ ಸ್ಥಳಾಂತರಿಸಿದೆ. ಮೈಸೂರಿನ ಅಗ್ರಹಾರದ ಖಾಸಗಿಯವರಿಗೆ ಸೇರಿದ ಜಾಗದಲ್ಲಿದ್ದ ಅರಳಿಮರ ಸುಮಾರು 30 ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆದಿತ್ತು. ಈ ಮರವನ್ನು ಜೆಸಿಬಿ ಹಾಗೂ ಲಾರಿ ಸಹಾಯದಿಂದ ಶುಕ್ರವಾರ ಸ್ಥಳಾಂತರ ಮಾಡಲಾಗಿದೆ.

ಒಂದೆಡೆ ದೆಹಲಿಯಲ್ಲಿ ವಾಯುಮಾಲಿನ್ಯದಿಂದ ಜನರು ಉಸಿರಾಡುವುದಕ್ಕೂ ಕಷ್ಟಪಡುತ್ತಿದ್ದಾರೆ. ಪರಿಸರ ಹಾನಿಗೊಳಿಸುತ್ತಿರುವ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಮರಗಳಿಗೆ ಕೊಡಲಿ ಪೆಟ್ಟು ಕೊಡುತ್ತಿದ್ದಾರೆ.ಇದರ ಮಧ್ಯೆ ಈ ಮರದ ಸ್ಥಳಾಂತರ ಪ್ರಕ್ರಿಯೆ ಪರಿಸರ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.

ಹುಣಸೂರು ಚುನಾವಣಾ ಚಿತ್ರಣ; ವಿಶ್ವನಾಥ್ ಎಲ್ಲರ ಟಾರ್ಗೆಟ್!ಹುಣಸೂರು ಚುನಾವಣಾ ಚಿತ್ರಣ; ವಿಶ್ವನಾಥ್ ಎಲ್ಲರ ಟಾರ್ಗೆಟ್!

ಮಹಾನಗರ ಪಾಲಿಕೆ ಸದಸ್ಯ ಬಿ.ವಿ‌. ಮಂಜುನಾಥ್ ಸಮ್ಮುಖದಲ್ಲಿ ನಡೆದ ಅರಳಿಮರ ಸ್ಥಳಾಂತರ ಕಾರ್ಯ ಯಶಸ್ವಿಯಾಗಿದೆ. ಜೀವಂತ ಮರವನ್ನೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರ ಮಾಡಿದ್ದು ಸಾರ್ವಜನಿಕರ ಗಮನ ಸೆಳೆದಿದೆ.

Achilles Tree Shifted One Place To Another Place In Mysore

ಅರಳಿಮರವನ್ನೇ ಬೇರು ಸಮೇತ ಕಿತ್ತು, ಕ್ರೇನ್‌ ಸಹಾಯದಿಂದ ಲಾರಿಗೆ ತುಂಬಿಸಲಾಯಿತು. ನಂತರ ಅದನ್ನು ಬೇರೆಡೆಗೆ ತೆಗೆದುಕೊಂಡು ಹೋಗಿ ಅಲ್ಲಿ ನೆಡಲಾಯಿತು. ಅರಳಿಮರ ಉಳಿದ ಜಾತಿಯ ಮರಗಳಿಗಿಂತ ಹೆಚ್ಚು ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

"ಮಿ.ಕ್ಲೀನ್, ನಾಳೆ ನಿಮ್ಮ ರಿಯಲ್ ಎಸ್ಟೇಟ್ ದಾಖಲೆ ಬಿಡುಗಡೆ ಮಾಡ್ತೀನಿ"

ಬೇರೆ ಮರಗಳು ಕೇವಲ ಸೂರ್ಯನ ಬೆಳಕಿನಲ್ಲಿ ಮಾತ್ರ ದ್ಯುತಿ ಸಂಶ್ಲೇಷಣಾ ಕ್ರಿಯೆ ನಡೆಸಿದರೆ, ಅರಳಿಮರ ಚಂದ್ರನ ಬೆಳಕಿನಲ್ಲೂ ಈ ಕ್ರಿಯೆ ನಡೆಸುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಇದು ಸಸ್ಯಗಳಲ್ಲೇ ಪ್ರಮುಖ ಪ್ರಬೇಧ. ನಗರದ ವಾಯುಮಾಲಿನ್ಯ ನಿಯಂತ್ರಣದಲ್ಲಿ ಈ ಮರಗಳ ಕೊಡುಗೆ ಮಹತ್ವದ್ದಾಗಿದೆ.

Achilles Tree Shifted One Place To Another Place In Mysore

ವೃಕ್ಷರಾಜ ಎನಿಸಿಕೊಂಡಿರುವ ಈ ಮರವನ್ನು ಸಾಮಾನ್ಯವಾಗಿ ದೇವಾಲಯಗಳಲ್ಲಿ ಬೆಳೆಸುತ್ತಾರೆ. ಈ ಮರ ಬಹು ಗಟ್ಟಿಯಾಗಿದ್ದು ಮಳೆಗಾಳಿಗೆ ಬೀಳುವುದಿಲ್ಲ. ಸೊಂಪಾದ ನೆರಳು ಕೊಡುತ್ತದೆ. ಸಾವಿರಾರು ಹಕ್ಕಿಗಳಿಗೆ ಆಶ್ರಯ ನೀಡುತ್ತದೆ. ಹುಲ್ಲಿಗಿಂತ ಎರಡು ಮೂರು ಪಟ್ಟು ಪ್ರೋಟಿನ್ ಹೆಚ್ಚಾಗಿರುವ ಇದರ ಎಲೆಗಳು ದನಕರುಗಳಿಗೆ, ಆನೆಗಳಿಗೆ ಉತ್ತಮ ಮೇವು. ಮ್ಯಾನ್ಮಾರ್‌ನ ಕೆಲ ಜಾತಿಯ ಪಕ್ಷಿಗಳು ಅರಳಿಮರದ ಎಲೆಗಳನ್ನು ತಿಂದೇ ಬದುಕುತ್ತವೆ.

English summary
Achilles Tree Shifted One Place To Another Place In Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X