ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

PWD ಎಂಜಿನಿಯರ್ ರಂಗನಾಥ್ ಮನೆಯಲ್ಲಿ 60 ಕೋಟಿಗೂ ಮಿಕ್ಕಿ ಆಸ್ತಿ ಪತ್ತೆ?

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಮೈಸೂರು ಪಿಡಬ್ಲ್ಯೂಡಿ ಇಂಜಿನಿಯರ್ ರಂಗನಾಥ ನಾಯಕ್ ಗೆ ಸೇರಿದ ಬೆಂಗಳೂರು ಹಾಗೂ ಮೈಸೂರು ಮನೆಗಳ ಮೇಲೆ ಎ.ಸಿ.ಬಿ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 3: ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಮೈಸೂರು ಪಿಡಬ್ಲ್ಯೂಡಿ ಇಂಜಿನಿಯರ್ ರಂಗನಾಥ ನಾಯಕ್ ಗೆ ಸೇರಿದ ಮನೆ ಮತ್ತು ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರು ಹಾಗೂ ಮೈಸೂರಿನ ಮನೆ, ಕುವೆಂಪು ನಗರದ ಕಛೇರಿ ಮತ್ತು ಚಿಕ್ಕಮಗಳೂರಿನ ಸ್ವಗ್ರಾಮ ಸೇರಿ ನಾಲ್ಕು ಕಡೆ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಆಸ್ತಿಪಾಸ್ತಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರು ನಗರ ನೀರು ಸರಬರಾಜು ಮತ್ತು ನೈರ್ಮಲ್ಯ ಮಂಡಳಿ ಅಧೀಕ್ಷಕ (ಸುಪರಿಂಟೆಂಡೆಂಟ್) ಎಂಜಿನಿಯರ್ ಆಗಿರುವ ರಂಗನಾಥ್ ಗೆ ಸೇರಿದ ಮೈಸೂರಿನ ಯೋಗ ನರಸಿಂಹ ದೇವಸ್ಥಾನದ ಬಳಿ ಇರುವ ಮನೆ ಹಾಗೂ ಬೆಂಗಳೂರಿನ ವಿಜಯನಗರ ಮೊದಲನೇ ಹಂತದದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದಾರೆ.[ಈ ಸಪ್ತ ಭ್ರಷ್ಟರ ಆಸ್ತಿ ವಿವರ ಕೇಳಿದರೆ ಬೆಚ್ಚಿ ಬೀಳುತ್ತೀರಿ!]

ACB raids on PWD engineer S Ranganatha Naik's houses

ಮೈಸೂರು ಎಸಿಬಿ ಎಸ್ಪಿ ಕವಿತಾ ಮತ್ತು ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆಸಿದ್ದು ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.[ಬೀದರ್: ತಾಲೂಕು ಪಂಚಾಯಿತಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ]

ACB raids on PWD engineer S Ranganatha Naik's houses

ರಂಗನಾಥ್ ಬೆಂಗಳೂರಿನಲ್ಲಿ ಮಡದಿ ಹೆಸರಿನಲ್ಲಿ ಹೊಸ ಅಪಾರ್ಟ್ಮೆಂಟ್ ಕಟ್ಟಿಸುತ್ತಿದ್ದರು ಎನ್ನಲಾಗಿದೆ. ಈಗಾಗಲೇ ಅಧಿಕಾರಿಗಳು 35ಲಕ್ಷ ರೂಪಾಯಿ, ಒಂದು ಕೆಟಿಎಂ ಬೈಕ್, ಮೂರು ಐಶಾರಾಮಿ ಕಾರುಗಳು, ಅಪಾರ ಪ್ರಮಾಣದ ದಾಖಲೆ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು 60 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಪತ್ತೆಯಾಗಿದೆ ಎನ್ನಲಾಗಿದೆ.

ಮೈಸೂರಿನ ಅಪಾರ್ಟ್ಮೆಂಟ್, ಕುವೆಂಪು ನಗರದ ಕಛೇರಿ ಮತ್ತು ಚಿಕ್ಕಮಗಳೂರಿನ ಸ್ವಗ್ರಾಮ ಸೇರಿ ಮೂರು ಕಡೆ ಏಕಕಾಲದಲ್ಲಿ ಮಂಡ್ಯ, ಮಡಿಕೇರಿ, ಚಾಮರಾಜನಗರ, ಹಾಸನ ಹಾಗೂ ಮೈಸೂರು ಜಿಲ್ಲೆಗಳ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

English summary
Karnataka ACB carry out raids on S Ranganatha Naik's houses in Bengaluru n Mysuru. Naik is superintending engineer in PWD.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X