• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು: ನಗರಪಾಲಿಕೆ ಸಹಾಯಕ ಆಯುಕ್ತರ ಮನೆ ಮೇಲೆ ಎಸಿಬಿ ದಾಳಿ

By ಮೈಸೂರು ಪ್ರತಿನಿಧಿ
|

ಮೈಸೂರು, ಆಗಸ್ಟ್ 26: ಮೈಸೂರು ನಗರಪಾಲಿಕೆ ಅಧಿಕಾರಿಯೊಬ್ಬರ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆಂಬ ಆರೋಪದ ಮೇಲೆ ನಗರಪಾಲಿಕೆ ಅಭಿವೃದ್ಧಿ ಅಧಿಕಾರಿ, ವಲಯ ಕಚೇರಿ 6ರ ಪ್ರಭಾರ ಸಹಾಯಕ ಆಯುಕ್ತ ನಾಗರಾಜು ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರರಿಂದ 5 ಸಾವಿರ ಕೋಟಿ ರೂ. ಲೂಟಿ: ಕಾಂಗ್ರೆಸ್ ಆರೋಪಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರರಿಂದ 5 ಸಾವಿರ ಕೋಟಿ ರೂ. ಲೂಟಿ: ಕಾಂಗ್ರೆಸ್ ಆರೋಪ

ಮೈಸೂರಿನ ಕುವೆಂಪು ನಗರ ನಿವಾಸ, ಪಾಲಿಕೆ ಕಚೇರಿ ಹಾಗೂ ರಾಮನಗರದ ಸಂಬಂಧಿಕರ ಮನೆಯಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ. ರಾಮನಗರ ಡಿವೈಎಸ್ಪಿ ನೇತೃತ್ವದಲ್ಲಿ ಬೆಂಗಳೂರು ತಂಡದಿಂದ ದಾಳಿ ನಡೆಸಲಾಗಿದ್ದು, ದಾಖಲೆಗಳನ್ನು ಪರಿಶೀಲಿಸಿ, ಮಾಹಿತಿ ಕಲೆ ಹಾಕುತ್ತಿದ್ದಾರೆ.

English summary
ACB officials raided the house of a Mysuru City Municipal Officer this morning and are reviewing the documents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X