ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; ಭ್ರಷ್ಟ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ ಎಸಿಬಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 18: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ದೂರುಗಳ ಬಂದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದದಾರೆ. 5 ಕಡೆ ಏಕಕಾಲದಲ್ಲಿ ದಾಳಿ ನಡೆಸಿದೆ.

ಶುಕ್ರವಾರ ಬೆಳಗ್ಗೆ ಭ್ರಷ್ಟಚಾರ ನಿಗ್ರಹ ದಳದ ಅಧಿಕಾರಿಗಳು ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಮನೆಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಎಸಿಬಿ ದಾಳಿಯಲ್ಲಿ ಸಿಗಬೇಕಿದ್ದ ನೋಟುಗಳು ಗಾಳಿಯಲ್ಲಿ ಹಾರಾಟಎಸಿಬಿ ದಾಳಿಯಲ್ಲಿ ಸಿಗಬೇಕಿದ್ದ ನೋಟುಗಳು ಗಾಳಿಯಲ್ಲಿ ಹಾರಾಟ

ಶಿವಶಂಕರ್ ಅವರ ಮನೆಯಲ್ಲಿ ಶೋಧ ಕಾರ್ಯವನ್ನು ಅಧಿಕಾರಿಗಳು ಮುಂದುವರೆಸಿದ್ದಾರೆ. ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದ ಹಿನ್ನಲೆಯಲ್ಲಿ ದಾಳಿಯನ್ನು ನಡೆಸಲಾಗಿದೆ.

ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದ ನಿವೃತ ಕಾರ್ಮಿಕ ಅಧಿಕಾರಿ !ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದ ನಿವೃತ ಕಾರ್ಮಿಕ ಅಧಿಕಾರಿ !

Mysuru : ACB Conducts Raid on Residence of Assistant Forest Conservator

ಮೈಸೂರು ಅರಣ್ಯ ಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಶಂಕರ್ ಮನೆ ಸೇರಿ ಏಕ ಕಾಲದಲ್ಲಿ 5 ಕಡೆ ಶೋಧ ಕಾರ್ಯಾಚರಣೆ ನಡೆದಿದೆ. ನಜರ್ ಬಾದ್, ಸರಸ್ವತಿಪುರಂ, ಜೆ. ಸಿ. ಬಡಾವಣೆ, ಮಳವಳ್ಳಿಯಲ್ಲಿ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.

ಎಸಿಬಿ ಬಲೆಗೆ ಬಿದ್ದ ಪಿಸಿಬಿ ಅಧಿಕಾರಿಗಳು !ಎಸಿಬಿ ಬಲೆಗೆ ಬಿದ್ದ ಪಿಸಿಬಿ ಅಧಿಕಾರಿಗಳು !

ಗೃಹಿಣಿ ಆತ್ಮಹತ್ಯೆ; 7 ತಿಂಗಳ ಹಿಂದೆ ವಿವಾಹವಾಗಿದ್ದ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡು ತಾಲೂಕಿನ ದೇವನೂರು ಗ್ರಾಮದಲ್ಲಿ ನಡೆದಿದೆ.

ಕೌಟುಂಬಿಕ ಕಲಹದಿಂದ ಬೇಸತ್ತು ಗಾಯತ್ರಿ (30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 7 ತಿಂಗಳ ಹಿಂದೆ ಗಾಯತ್ರಿ ವಿವಾಹ ಯೋಗೇಂದ್ರ ಎಂಬವರೊಂದಿಗೆ ನಡೆದಿತ್ತು. ನಂತರ ಇಬ್ಬರ ನಡುವೆ ಹೊಂದಾಣಿಕೆ ಆಗದೆ ಪದೇ ಪದೇ ಜಗಳ ಆಗುತಿತ್ತು.

women

ಇದರಿಂದ ಬೇಸತ್ತಿದ್ದ ಗಾಯತ್ರಿ ಗುರುವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ದೊಡ್ಡಕವಲಂದೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
The Anti Corruption Bureau police have conducted raid on the residence of assistant forest conservator in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X