ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಫ್ರೀ ಕಾಶ್ಮೀರ' ಭಿತ್ತಿಪತ್ರ ಪ್ರದರ್ಶಿಸಿದವರ ಬಂಧನಕ್ಕೆ ಎಬಿವಿಪಿ ಒತ್ತಾಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 10: ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ವೇಳೆ "ಫ್ರಿ ಕಾಶ್ಮೀರ' ಪ್ಲೇ ಕಾರ್ಡ್ ಪ್ರದರ್ಶನ ಮಾಡಿದವರನ್ನು ಕೂಡಲೇ ಪೋಲಿಸರು ಬಂಧಿಸಬೇಕೆಂದು ಎಬಿವಿಪಿ ಕಾರ್ಯಕರ್ತರು ಒತ್ತಾಯಿಸಿದರು.

"ಫ್ರೀ ಕಾಶ್ಮೀರ' ಭಿತ್ತಿಪತ್ರ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಹಾಕಲಾದ ವಿದ್ಯಾರ್ಥಿ ಮುಖಂಡರನ್ನು ಕೂಡಲೇ ಬಂಧಿಸಬೇಕು ಎಂದು ಮೈಸೂರಿನ ಜೆಎಸ್ಎಸ್ ವಿದ್ಯಾಪೀಠದ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಜೆಎನ್ ಯು ಗಾಳಿ ಮೈಸೂರಿಗೂ ಬೀಸಿರುವುದು ದೊಡ್ಡ ದುರಂತ: ಎಸ್.ಎಲ್.ಭೈರಪ್ಪಜೆಎನ್ ಯು ಗಾಳಿ ಮೈಸೂರಿಗೂ ಬೀಸಿರುವುದು ದೊಡ್ಡ ದುರಂತ: ಎಸ್.ಎಲ್.ಭೈರಪ್ಪ

ಜೆಎನ್ ಯುನಲ್ಲಿ ನಡೆದ ಹಲ್ಲೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಕಾಶ್ಮೀರ ಪ್ರತ್ಯೇಕತೆ ಬಗ್ಗೆ ವಿದ್ಯಾರ್ಥಿಗಳು ದನಿ ಎತ್ತಿದ್ದಾರೆ. ಪ್ರತಿಭಟನೆಯ ಮೂಲ ಉದ್ದೇಶ ಬಿಟ್ಟು ಫ್ರೀ ಕಾಶ್ಮೀರ್ ಬಗ್ಗೆ ವಿದ್ಯಾರ್ಥಿಗಳಿಂದ ಪೋಸ್ಟರ್ ಪ್ರದರ್ಶನದ ಹಿಂದೆ ಯಾರ ಕೈವಾಡವಿದೆ ಎಂಬ ಪ್ರಶ್ನೆ ಎದುರಾಗಿದೆ.

ABVP insists Arrest of Who Display Free Kashmir Poster

ಈ ಕುರಿತು ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು, ನಾಮ ಫಲಕ ಪ್ರದರ್ಶನ ವಿಚಾರವಾಗಿ ಪ್ರತಿಭಟನೆ ಆಯೋಜಿಸಿದ್ದ ಆಯೋಜಕರನ್ನು ಆರೋಪಿಯನ್ನಾಗಿಸಿದ್ದಾರೆ. ಯಾವ ಸಂಘಟನೆಯ ಪ್ರತಿಭಟನೆಗೆ ಕರೆ ಕೊಡಲಾಗಿತ್ತು ಆ ಸಂಘಟನೆಯ ಮುಖ್ಯಸ್ಥರು ಹಾಗೂ ಸದಸ್ಯರ ಮೇಲೆ ದೂರು ದಾಖಲಾಗಿದೆ.

ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಯರನ್ನೊಳಗೊಂಡ ಬೃಹತ್ ಪ್ರತಿಭಟನೆಯಲ್ಲಿ ಎಬಿವಿಪಿ ಕಾರ್ಯಕರ್ತರು, ಪ್ರಕರಣ ದಲ್ಲಿ ಎಫ್‌ಐಆರ್ ದಾಖಲಾದ ಮೈಸೂರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿನಿ ಹಾಗೂ ಕೆಲ ದೇಶದ್ರೋಹಿ ವಿದ್ಯಾರ್ಥಿ ಮುಖಂಡರನ್ನು ಶೀಘ್ರವೇ ಎಲ್ಲಿ ಅಡಗಿದ್ದಾರೆ ಎಂದು ಪತ್ತೆ ಹಚ್ಚಿ ಬಂಧಿಸುವಂತೆ ಪ್ರತಿಭಟನೆಯಲ್ಲಿ ಕೂಗಿದರು.

ಮೈಸೂರು ವಿವಿ ಪ್ರತಿಭಟನೆಯಲ್ಲಿ ಮೈಸೂರು ವಿವಿ ಪ್ರತಿಭಟನೆಯಲ್ಲಿ "ಫ್ರೀ ಕಾಶ್ಮೀರ" ಫಲಕ; ಎಚ್ಚೆತ್ತ ಪೊಲೀಸರು

ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಫಲಕ ಹಿಡಿದು ಘೋಷಣೆ ಮಾಡಿದರು. ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ಎಫ್‌ಐಆರ್ ದಾಖಲಾಗಿರುವ ವಿದ್ಯಾರ್ಥಿ ಮುಖಂಡರನ್ನು ಕ್ಯಾಂಪಸ್ ನಿಂದ ಹೊರ ಹಾಕಬೇಕು ಎಂದು ಎಬಿವಿಪಿ ಸಂಚಾಲಕ ಗೌತಮ್ ಒತ್ತಾಯಿಸಿದರು.

English summary
ABVP insists on Arrest of Who Display Free Kashmir Play card In Mysuru University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X