ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಒಂದು ಲಕ್ಷ ಕೊರೊನಾ ಪರೀಕ್ಷೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 22: ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಇದುವರೆಗೂ 1 ಲಕ್ಷ ಮಾದರಿಗಳ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಕೊರೊನಾ ಆರಂಭದಿಂದ ಅ.20ರವರೆಗೂ ಒಂದು ಲಕ್ಷ ಮಾದರಿಗಳ ಪರೀಕ್ಷೆ ನಡೆಸಿರುವುದಾಗಿ ಸಂಸ್ಥೆಯ ನಿರ್ದೇಶಕ ಹಾಗೂ ಡೀನ್ ಡಾ. ಸಿ.ಪಿ. ನಂಜರಾಜ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಸಂಸ್ತೆಯ ಮೈಕ್ರೊಬಯಾಲಜಿ ಲ್ಯಾಬ್ ನಲ್ಲಿ ಅ.20ರವರೆಗೆ ಜಿಲ್ಲೆಯ 89,589 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಹೊರಜಿಲ್ಲೆಯಿಂದ ಬಂದ 11,024 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಒಟ್ಟು 1,00,613 ಪರೀಕ್ಷೆಗಳನ್ನು ಈ ಸಂಸ್ಥೆಯಲ್ಲೇ ಕೈಗೊಳ್ಳಲಾಗಿದೆ ಎಂದು ಮೈಕ್ರೋ ಬಯಾಲಜಿ ನೋಡೆಲ್ ಅಧಿಕಾರಿ ಡಾ.ಬಿ.ಅಮೃತಾ ಕುಮಾರಿ ಅವರು ತಿಳಿಸಿದ್ದಾರೆ‌.

Mysuru: About One Lakh Corona Test Performed In Medical College And Research Institution

 "ಮೈಸೂರಿನಲ್ಲಿ ಕೊರೊನಾ ಹೆಚ್ಚಾದರೆ ಮುಖ್ಯಮಂತ್ರಿಗಳೇ ನೇರ ಹೊಣೆ"

ಎಂಎಂಸಿಆರ್ ಐನಲ್ಲಿ ಪರೀಕ್ಷೆ ನಡೆಸಲಾದ ಮಾದರಿಗಳಲ್ಲಿ ಮೈಸೂರು ಜಿಲ್ಲೆಯ 8926 ಹಾಗೂ ಇತರ ಜಿಲ್ಲೆಯ 369 ಸೇರಿ ಒಟ್ಟು 9295 ಪಾಸಿಟಿವ್ ಪ್ರಕರಣದ ಫಲಿತಾಂಶ ಈ ಲ್ಯಾಬ್‌ನಿಂದ ಬಂದಿದೆ. ಮಂಡ್ಯ, ಚಾಮರಾಜನಗರ, ಮಡಿಕೇರಿ ಮುಂತಾದ ಜಿಲ್ಲೆಗಳಿಂದ ಬಂದಿರುವ ಮಾದರಿಗಳನ್ನು ಕೂಡ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 2,54,587 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 1,00,613 ಮಾದರಿಗಳ ಪರೀಕ್ಷೆಯು ಈ ಸಂಸ್ಥೆಯಲ್ಲಿ ನಡೆದಿದೆ.

Recommended Video

ಇದನ್ನು ಬಳಸಿ corona ಇಂದ ದೂರ ಇರಿ | Oneindia Kannada

English summary
Till october 20, about one lakh of corona test performed in mysuru medical college and research institution
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X