ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಭಿನಂದನ್ ನಿಜವಾದ ಹೀರೋ, ನಾವು ಅವರ ಮುಂದೆ ಡಮ್ಮಿ:ನಟ ದರ್ಶನ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 01: ವಿಶ್ವ ವನ್ಯಜೀವಿ ದಿನ ಹಿನ್ನೆಲೆಯಲ್ಲಿ ನಟ ದರ್ಶನ್ ಸೆರೆ ಹಿಡಿದ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನ ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಮೂರು ದಿನಗಳ ಕಾಲ ನಡೆಯಲಿದ್ದು, ದರ್ಶನ್ ಕಾಡಿನಲ್ಲಿ ಸೆರೆ ಹಿಡಿದ 75 ಆಯ್ದ ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಅಷ್ಟೇ ಅಲ್ಲ, ದರ್ಶನ್ ವನ್ಯಜೀವಿ ಸಂರಕ್ಷಣಾ ನಿಧಿಗೆ ಹಣ ಸಂಗ್ರಹಿಸಲು ಮುಂದಾಗಿದ್ದು, ತಮ್ಮ ಚಿತ್ರಗಳ ಪ್ರದರ್ಶನದ ಜೊತೆಗೆ ಮಾರಾಟಕ್ಕೆ ಮುಂದಾಗಿದ್ದಾರೆ. ಪ್ರತಿ ಚಿತ್ರಕ್ಕೆ 2,000 ಬೆಲೆ ನಿಗದಿಪಡಿಸಲಾಗಿದೆ. ಫೋಟೋ ಜೊತೆಗೆ ದರ್ಶನ್ ಆಟೋಗ್ರಾಫ್ ಪಡೆಯಲು 500 ಹೆಚ್ಚುವರಿ ಹಣ ಕೊಡಬೇಕಾಗಿದೆ.

ಅಭಿನಂದನ್ ಸ್ವದೇಶಕ್ಕೆ ಮರಳುತ್ತಿರುವುದಕ್ಕೆ ರಾಜ್ಯದ ವಿವಿಧೆಡೆ ಸಂಭ್ರಮಾಚರಣೆಅಭಿನಂದನ್ ಸ್ವದೇಶಕ್ಕೆ ಮರಳುತ್ತಿರುವುದಕ್ಕೆ ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ

ಮೂರು ದಿನಗಳ ಕಾಲ ಪ್ರದರ್ಶನದ ಜಾಗದಲ್ಲಿ ದರ್ಶನ್ ಇದ್ದು, ಆಟೋಗ್ರಾಫ್ ನೀಡಲಿದ್ದಾರೆ. ದರ್ಶನ್ ತೆಗೆದಿರುವ ವನ್ಯಜೀವಿ ಛಾಯಚಿತ್ರ ಪ್ರದರ್ಶನ ಮಾರಾಟಕ್ಕೆ ಮೃಗಾಲಯ ಪ್ರಾಧಿಕಾರ ಕಾರ್ಯದರ್ಶಿ ಬಿ.ಪಿ.ರವಿ ಚಾಲನೆ ನೀಡಿದ್ದಾರೆ.

Abhinandan is a real hero, we are Dummy: Darshan

ಛಾಯಚಿತ್ರ ಪ್ರದರ್ಶನ ಚಾಲನೆ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅರಣ್ಯ ಅಧಿಕಾರಿಗಳಾದ ಎಡುಕುಂಡಲು, ಮೃಗಾಲಯ ಸಿಇಓ ಅಜಿತ್ ಕುಲಕರ್ಣಿ, ಡಿಎಫ್ ಓಗಳಾದ ಸಿದ್ದರಾಮಪ್ಪ, ಪ್ರಶಾಂತ್ ಉಪಸ್ಥಿತರಿದ್ದರು.

 ಅಭಿನಂದನ್ ಬಿಡುಗಡೆ LIVE: ವಿಂಗ್ ಕಮಾಂಡರ್ ಆಗಮನಕ್ಕೆ ದೇಶದೆಲ್ಲೆಡೆ ಕಾತರ ಅಭಿನಂದನ್ ಬಿಡುಗಡೆ LIVE: ವಿಂಗ್ ಕಮಾಂಡರ್ ಆಗಮನಕ್ಕೆ ದೇಶದೆಲ್ಲೆಡೆ ಕಾತರ

ಛಾಯಚಿತ್ರ ಪ್ರದರ್ಶನ ವೀಕ್ಷಣೆ ಮಾಡಿದ ನಟ ದರ್ಶನ್, ವಿಂಗ್ ಕಮಾಂಡರ್ ಅಭಿನಂದನ್ ಬಗ್ಗೆ ಮಾತನಾಡಿ, ಅಭಿನಂದನ್ ನಿಜವಾದ ಹೀರೊ, ನಾವು ಅವರ ಮುಂದೆ ಡಮ್ಮಿ ಎಂದುಅಭಿನಂದನ್ ಗೆ ಸೆಲ್ಯೂಟ್ ಸಲ್ಲಿಸಿದರು.

ಇನ್ನೊಬ್ಬರ ನೆಲದಲ್ಲಿ ನಿಂತು ಮಾತನಾಡಲೂ ಗಡ್ಸ್ ಬೇಕು.ನಾನು ಅವರ ಮಾತುಗಳನ್ನು ನೋಡಿದ್ದೇನೆ. ಅವರೇ ನಿಜವಾದ ಹೀರೋ. ಅಭಿನಂದನ್ ಸುರಕ್ಷಿತಾಗಿ ಬರುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ದರ್ಶನ್ ಮಾಧ್ಯಮಗಳ ಬಳಿ ಪ್ರತಿಕ್ರಯಿಸಿದರು.

English summary
Exhibition of Wildlife Photographs will be held for three days at Sandesh Prince Hotel, Mysore. Kannada actor Darshan spoke in this exhibition, Abhinandan is a real hero, we are Dummy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X