ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿರಪರಾಧಿಗಳ ಬಂಧನವಾಗಿದೆ; ಅಬ್ದುಲ್ ಮಜೀದ್ ಆರೋಪ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 23: "ಶಾಸಕ ತನ್ವೀರ್ ಸೇಠ್ ಕೊಲೆ‌ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಒತ್ತಡ ಹಾಕಲಾಗುತ್ತಿದೆ. ಹೀಗಾಗಿ ಪೊಲೀಸರು ಅಧಿಕೃತ ಮಾಹಿತಿಗಳನ್ನು ಕೊಡುತ್ತಿಲ್ಲ" ಎಂದು ಎಸ್ ಡಿಪಿಐ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.

ತನ್ವೀರ್ ಕತ್ತಿಗೆ ಮಚ್ಚು ಹಾಕುವ ಮುನ್ನ ನಾಯಿ ಕತ್ತು ಸೀಳುತ್ತಿದ್ದುದೇಕೆ?ತನ್ವೀರ್ ಕತ್ತಿಗೆ ಮಚ್ಚು ಹಾಕುವ ಮುನ್ನ ನಾಯಿ ಕತ್ತು ಸೀಳುತ್ತಿದ್ದುದೇಕೆ?

"ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಪರಾಧಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಇಬ್ಬರು ಎಸ್ ಡಿ ಪಿಐ ಕಾರ್ಯಕರ್ತರಿದ್ದಾರೆ. ಅವರನ್ನ ನೋಡಲು ಸಹ ಜೈಲು ಅಧಿಕಾರಿಗಳು ಬಿಡುತ್ತಿಲ್ಲ. ರಾಜ್ಯದಲ್ಲಿ ಮೂರನೇ ರಾಜಕೀಯ ಪಕ್ಷವಾಗಿ ಎಸ್ ಡಿಪಿಐ ಬೆಳೆಯುತ್ತಿದೆ. ಇದಕ್ಕಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಿಎಂ ಯಡಿಯೂರಪ್ಪ ನಮ್ಮ ಪಕ್ಷದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ" ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

Abdul Mazeed Alleges Innocent Arrested In Tanveer Sait Case

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಬಂಧಿಸಿರುವವರು ಕೇವಲ ಆರೋಪಿಗಳಷ್ಟೇ. ಅವರನ್ನು ಅಪರಾಧಿಗಳೆಂದು ಸಾಬೀತುಪಡಿಸಿ. 2009ರಲ್ಲಿ ನಡೆದ ಘಟನೆ ಮರಕಳಿಸಬೇಕೇ?" ಎಂದು ಎಚ್ಚರಿಸಿದ ಅವರು, ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಜೈಲ್ ಭರೋ ಚಳುವಳಿ ಕೈಗೊಳ್ಳಬೇಕಾಗುತ್ತದೆ" ಎಂದು ಎಚ್ಚರಿಸಿದರು.

English summary
"The police are being pressured in tanveer sait assault case. So they arrested the innocent people" alleges sdpi secretary Abdul mazeed in mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X