ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸತ್ತವರನ್ನು ಅಂತ್ಯಕ್ರಿಯೆ ಮಾಡಬೇಕೆಂದರೆ ಇಲ್ಲಿ ಆಧಾರ್ ಕಡ್ಡಾಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 03: ಮೈಸೂರು ಮಹಾನಗರ ವ್ಯಾಪ್ತಿಯಲ್ಲಿ ಯಾರಾದರೂ ಸಾವನ್ನಪ್ಪಿದ್ದರೆ ಅಂತ್ಯಕ್ರಿಯೆ ಮಾಡಲು ರುದ್ರಭೂಮಿ ಅಥವಾ ಚಿತಾಗಾರಗಳಲ್ಲಿ ಮೃತ ವ್ಯಕ್ತಿಯ ಆಧಾರ್ ಕಾರ್ಡ್ ತೋರಿಸುವುದನ್ನು ಮಹಾನಗರ ಪಾಲಿಕೆ ಕಡ್ಡಾಯಗೊಳಿಸಿದೆ.

Recommended Video

Aadhaar card is mandatory even after losing life | Aadhar card | Oneindia Kannada

ಮೃತ ವ್ಯಕ್ತಿಯನ್ನು ಚಿತಾಗಾರ ಅಥವಾ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲು, ಅಲ್ಲಿನ ಸಿಬ್ಬಂದಿಗೆ ಮೃತರ ಸಂಬಂಧಿಕರು ಆ ವ್ಯಕ್ತಿಯ ಆಧಾರ್ ಕಾರ್ಡ್ ಅಥವಾ ಇತರೆ ಭಾವ ಚಿತ್ರವಿರುವ, ಸರ್ಕಾರದಿಂದ ನೀಡಿರುವ ಗುರುತಿನ ಚೀಟಿಯನ್ನು ನೀಡಬೇಕಿದೆ.

ಇನ್ಮುಂದೆ ಆಸ್ತಿ ತೆರಿಗೆ ಪಾವತಿಸಲು ಪಾಲಿಕೆ ಕಚೇರಿಗೆ ಹೋಗಬೇಕಿಲ್ಲಇನ್ಮುಂದೆ ಆಸ್ತಿ ತೆರಿಗೆ ಪಾವತಿಸಲು ಪಾಲಿಕೆ ಕಚೇರಿಗೆ ಹೋಗಬೇಕಿಲ್ಲ

ಇತ್ತೀಚೆಗೆ ಯಾವುದೇ ಕೆಲಸ ಕಾರ್ಯಗಳು ಆಗಬೇಕಾದರೂ ಆಧಾರ್​ ಕಾರ್ಡ್ ಕಡ್ಡಾಯ. ಬದುಕಿದ್ದಾಗ ಎಲ್ಲದಕ್ಕೂ ಆಧಾರ್​ ಕಾರ್ಡ್ ಹಿಡಿದು ಅಲೆದಾಡಿದ ಜನರು, ಸತ್ತ ಮೇಲಾದರೂ ಪರದಾಟ ಕೊನೆಗೊಳ್ಳಬಹುದು ಅಂದರೆ ಇನ್ಮುಂದೆ ಅದೂ ಕೂಡ ಸಾಧ್ಯವಿಲ್ಲ.

Aadhaar Card Is Mandatory For Funerals Of Dead

ಗುರುತಿನ ಚೀಟಿ ಇಲ್ಲದಿದ್ದರೆ, ಪಾಲಿಕೆ ಅಧಿಕಾರಿಗಳು ಮೃತ ವ್ಯಕ್ತಿಯ ಮನೆಗೆ ಹೋಗಿ ಸ್ಥಳ ಪರಿಶೀಲನೆ ನಡೆಸಿದ ನಂತರ ಅಂತ್ಯಕ್ರಿಯೆಗೆ ಅವಕಾಶ ನೀಡಬೇಕು. ಪೊಲೀಸರು ಮನವಿ ಸಲ್ಲಿಸುವ ಪ್ರಕರಣದಲ್ಲಿ ಎಫ್ಐಆರ್ ಅಥವಾ ಸ್ಥಳ ಮಹಜರು ವರದಿಯ ಆಧಾರದ ಮೇಲೆ ಅಂತ್ಯಕ್ರಿಯೆ ನಡೆಸುತ್ತಾರೆ. ಇಲ್ಲಿ ಆಧಾರ್ ಕಡ್ಡಾಯವಿಲ್ಲ ಎಂದು ಪಾಲಿಕೆ ತಿಳಿಸಿದೆ.

ಸತ್ತ ಮೇಲೂ ಆಧಾರ್ ಕಡ್ಡಾಯ ಮಾಡಲು ಕಾರಣವೆನೆಂದರೆ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 38 ರುದ್ರಭೂಮಿ ಮತ್ತು ಚಿತಾಗಾರಗಳಿವೆ. ಈ ಚಿತಾಗಾರಗಳಿಗೆ ಸತ್ತ ವ್ಯಕ್ತಿಯ ಮೃತ ದೇಹವನ್ನು ತಂದು ಪೊಲೀಸರ ಗಮನಕ್ಕೂ ತರದೆ ಅಂತ್ಯಕ್ರಿಯೆ ಮಾಡುವಂತೆ ಕೆಲವು ಸಂದರ್ಭಗಳಲ್ಲಿ ಅಲ್ಲಿನ ಸಿಬ್ಬಂದಿಗೆ ಜನರು ಹೇಳುತ್ತಾರೆ.

Aadhaar Card Is Mandatory For Funerals Of Dead

 ತಾಂಡವಪುರದಲ್ಲಿ ಶಿಕ್ಷಕಿ-ವಿದ್ಯಾರ್ಥಿಗಳ ನಡುವೆ ಜಗಳ; ಕಾಲೇಜಿಗೆ ಎರಡು ದಿನ ರಜೆ ತಾಂಡವಪುರದಲ್ಲಿ ಶಿಕ್ಷಕಿ-ವಿದ್ಯಾರ್ಥಿಗಳ ನಡುವೆ ಜಗಳ; ಕಾಲೇಜಿಗೆ ಎರಡು ದಿನ ರಜೆ

ಇದರಿಂದ ಮೃತ ವ್ಯಕ್ತಿಯ ಅಂತ್ಯಕ್ರಿಯೆ ಮಾಡಿದ ನಂತರ ಕೆಲವು ಕಾನೂನು ತೊಡಕುಗಳು ಉಂಟಾಗುತ್ತವೆ. ಹಾಗಾಗಿ ಮೃತರ ಆಧಾರ್ ನಂಬರ್ ಇದ್ದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಜೊತೆಗೆ ಅಂತ್ಯಕ್ರಿಯೆ ನಡೆಸುವ ಮುನ್ನ ನಿಗದಿಯಾದ ಅರ್ಜಿ ಫಾರಂಗಳನ್ನು ತುಂಬಲು ಅನುಕೂಲ ಆಗುತ್ತದೆ ಎಂದು ಪಾಲಿಕೆಯ ಅಧಿಕಾರಿ ಅನಿಲ್ ಕ್ರಿಸ್ಟಿ ಸ್ಪಷ್ಟನೆ ನೀಡಿದ್ದಾರೆ.

English summary
Mysuru Corporation has made it mandatory for any person found dead in the Mysuru City to show the dead persons Aadhaar card at funerals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X