ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಬೈಲ್ ಸ್ಫೋಟ : ಬೆಂದುಹೋಯ್ತು ಬಾಲಕನ ಮುಖ

By Kiran B Hegde
|
Google Oneindia Kannada News

ಮೈಸೂರು, ಫೆ. 5: ಯುವಜನತೆ ಮೊಬೈಲ್ ಹಿಡಿದು ಮೈಮರೆಯುತ್ತಾರೆ. ಆದರೆ, ಮೊಬೈಲ್ ಎಷ್ಟು ಪ್ರಯೋಜಕಾರಿಯೋ ಅಷ್ಟೇ ಅಪಾಯಕಾರಿ. ಸೂಕ್ತ ಮುನ್ನೆಚ್ಚರಿಕೆ ಪಾಲಿಸದಿದ್ದರೆ ಅಪಾಯ ತಪ್ಪಿದ್ದಲ್ಲ.

ಚಾರ್ಜಿಂಗ್ ಸಮಯದಲ್ಲೇ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಮೈಸೂರು- ಬೆಂಗಳೂರು ಹೆದ್ದಾರಿ ಟೋಲ್‌ ಗೇಟ್‌ ಸಮೀಪದ ನಿವಾಸಿ ಯುವಕನೋರ್ವ ಮೊಬೈಲ್ ಸ್ಫೋಟಗೊಂಡು ಮುಖ ಸುಟ್ಟುಕೊಂಡಿದ್ದಾನೆ. [ಮೊಬೈಲ್ ನಲ್ಲಿ ಇಡೀ ಜಗತ್ತು]

A youth injured as his mobile explodes while in charging

ಬಿಹಾರ ಮೂಲದ ಸೀತಾರಾಂ (18) ಮುಖ ಸುಟ್ಟುಕೊಂಡ ಬಾಲಕ. ಖಾಸಗಿ ಕಂಪನಿಯೊಂದರಲ್ಲಿ ಈತ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಬುಧವಾರ ಸಂಜೆ ಕಂಪನಿ ಕೆಲಸ ಮುಗಿಸಿ ನಿವಾಸ ಸ್ಥಳಕ್ಕೆ ವಾಪಸ್ಸಾದ ಸೀತಾರಾಂ ಮೊಬೈಲನ್ನು ಚಾರ್ಜಿಂಗ್‌ ಎಂದು ಇಟ್ಟಿದ್ದ.

ಸ್ವಲ್ಪ ಸಮಯದ ನಂತರ ಕಾಲ್ ಬಂದಿತ್ತು. ಮೊಬೈಲ್ ಚಾರ್ಜಿಂಗ್ ಮೋಡ್‌ನಲ್ಲಿ ಇದ್ದಾಗಲೇ ಕಾಲ್ ರಿಸೀವ್ ಮಾಡಿದ ಸೀತಾರಾಂ ಮಾತನಾಡಲು ಅನುವಾದ. ಆಗಲೇ ಸಾಕಷ್ಟು ಬಿಸಿಯಾಗಿದ್ದ ಮೊಬೈಲ್ ಕಾಲ್ ಬರುತ್ತಿದ್ದಂತೆ ಸ್ಫೋಟಗೊಂಡಿತು. ಇದರಿಂದ ಆತನ ಮುಖಕ್ಕೆ ತೀವ್ರ ಗಾಯಗಳಾದವು. [ಮೋದಿ ಹಾದಿಯಲ್ಲಿ ಸಿದ್ದರಾಮಯ್ಯ]

ತಕ್ಷಣ ಸೀತಾರಾಂ ಅವರ ತಂದೆ ಪಂಡೋಖಾ ತಕ್ಷಣ ಇತರ ಸಿಬ್ಬಂದಿಗೆ ವಿಷಯ ತಿಳಿಸಿ ಹತ್ತಿರದ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಿದರು. ಸೀತಾರಾಂ ಪ್ರಸ್ತುತ ಅಪಾಯದಿಂದ ಹೊರಬಂದಿದ್ದಾರೆ. ಆದರೆ, ಮುಖವನ್ನು ಮೂಲರೂಪಕ್ಕೆ ತರುವುದು ಕಷ್ಟಕರ ಎಂದಿದ್ದಾರೆ.

English summary
A mobile has exploded when a youth started conversation while charging in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X