ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಅ.18ರಿಂದ ವೈನ್ ಮೇಳ

|
Google Oneindia Kannada News

ಮೈಸೂರು, ಅ.10 : ಈ ಬಾರಿಯ ದಸಾರಕ್ಕೆ ಮೈಸೂರಿಗೆ ಆಗಮಿಸಿದ ಪ್ರವಾಸಿಗರು ಕೈಯಲ್ಲಿ ವೈನ್ ಹಿಡಿದು ಮೈಸೂರು ತೊರೆಯಬಹುದು. ನಗರದಲ್ಲಿ ಮೊದಲ ಬಾರಿಗೆ ವೈನ್ ಮೇಳವನ್ನು ಕರ್ನಾಟಕ ವೈನ್ ಬೋರ್ಡ್ ಆಯೋಜಿಸಿದೆ.

ಕರ್ನಾಟಕದ ವೈನ್ ಉದ್ಯಮದ ಕುರಿತು ಪ್ರವಾಸಿಗರಿಗೆ ಮಾಹಿತಿ ನೀಡುತ್ತಾ, ಉದ್ಯಮವನ್ನು ವಿಸ್ತರಿಸಲು ಸರ್ಕಾರ ಈ ವೈನ್ ಮೇಳವನ್ನು ಹಮ್ಮಿಕೊಂಡಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ವೈನ್ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ.

wine

ಅ.18ರಂದು ಆರಂಭವಾಗುವ ಮೇಳ ಮೂರು ದಿನಗಳ ಕಾಲ ನಡೆಯುಲಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಸುಮಾರು ಹದಿನೆಂಟು ವೈನ್ ಕಂಪನಿಗಳು ಮೇಳದಲ್ಲಿ ಭಾಗವಹಿಸಿ, ಪ್ರವಾಸಿಗರಿಗೆ ವೈನ್ ರುಚಿ ತೋರಿಸಲಿವೆ.

ಮೈಸೂರಿನಲ್ಲಿ ದಸರಾ ಸಂದರ್ಭದಲ್ಲಿ ಹೆಚ್ಚು ಪ್ರವಾಸಿಗರಿರುತ್ತಾರೆ. ಆದ್ದರಿಂದ ದಸರಾ ಮುಕ್ತಾಯವಾದ ಬಳಿಕ ಸರ್ಕಾರ ವೈನ್ ಮೇಳ ಆಯೋಜಿಸಿದೆ. ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಕರ್ನಾಟಕ ವೈನ್ ಬೋರ್ಡ್ ನಿರ್ದೇಶ ಬಿ.ಕೃಷ್ಣ ಹೇಳಿದ್ದಾರೆ.

ದಸರಾಕ್ಕೆ ದೇಶ-ವಿದೇಶಗಳಿಂದ ಹಲವಾರು ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೆ ಕರ್ನಾಟಕ ವೈನ್ ಪರಿಚಯಿಸುವುದು ಮೇಳದ ಉದ್ದೇಶ ಆದ್ದರಿಂದ ದಸರಾ ಮುಗಿದ ತಕ್ಷಣ ಮೇಳ ಆಯೋಜಿಸಲಾಗಿದೆ. ಆದರೆ, ಮೇಳದ ಸ್ಥಳ ಇನ್ನೂ ನಿಗದಿಯಾಗಿಲ್ಲ.

ಕರ್ನಾಟಕದಲ್ಲಿ ವೈನ್ ಉದ್ಯಮ ಪ್ರಗತಿ ಹೊಂದುತ್ತಿದೆ. ಮೇಳದ ಮೂಲಕ ಇದನ್ನು ಮತ್ತಷ್ಟು ಜನಪ್ರಿಯಗೊಳಿಸುವುದು ವೈನ್ ಬೋರ್ಡ್ ಉದ್ದೇಶ. 2012-13ನೇ ಸಾಲಿನಲ್ಲಿ 1.44 ಲಕ್ಷ ಕೇಸ್ ವೈನ್ ರಾಜ್ಯದಲ್ಲಿ ಮಾರಾಟವಾಗಿದೆ.

ಬೆಂಗಳೂರಿನಲ್ಲಿ ವೈನ್ ಮೇಳ ಪ್ರತಿವರ್ಷ ನಡೆಯುತ್ತದೆ. ಕರ್ನಾಟಕ ವೈನ್ ಬೋರ್ಡ್ ಬೆಂಗಳೂರಿನ ಹಾಪ್ ಕಾಮ್ಸ್ ನಲ್ಲಿ ವೈನ್ ಮಾರಾಟ ಮಾಡಲು ಬೋರ್ಡ್ ಸಿದ್ಧತೆ ನಡೆಸಿದೆ. ಸದ್ಯ ಮೈಸೂರಿನಲ್ಲಿ ಮೇಳ ಆಯೋಜಿಸಿದೆ. (ಐದು ಹಾಪ್ ಕಾಮ್ಸ್ ನಲ್ಲಿ ವೈನ್ ಸಿಗುತ್ತೆ)

English summary
Even before the grand Dasara festivities end in their town, Mysoreans and visitors will be treated with exquisite wines from the vineyards in Karnataka and Maharashtra. For the first time in Mysore, an exclusive Wine Fest is being held from October 18, offering a glimpse of the State’s wine industry. As many as 16 wineries from Karnataka and Maharashtra are expected to participate in this three-day festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X