ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಬಾಳೆತೋಟದಲ್ಲಿ ಅವಿತ ಹುಲಿರಾಯ!

ಬಾಳೆ ತೋಟದ ಮಾಲೀಕ ಬಾಲರಾಜು ಹೇಳುವ ಪ್ರಕಾರ ಶನಿವಾರ ರಾತ್ರಿಯೇ ಹುಲಿ ಬಂದು ಜಮೀನಿನಲ್ಲಿ ವಾಸ್ತವ್ಯ ಹೂಡಿದೆಯಂತೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು: ಎಚ್.ಡಿ.ಕೋಟೆಯ ಹೆಗ್ಗಡಾಪುರ ಮತ್ತು ನಾಗನಹಳ್ಳಿ ನಡವೆ ಇರುವ ಬಾಲರಾಜು ಎಂಬುವರ ತೋಟದಲ್ಲಿ ಹುಲಿಯೊಂದು ಕಾಣಿಸಿಕೊಂಡಿದ್ದು ನಾಗರಿಕರಲ್ಲಿ ಭಯ ಹುಟ್ಟಿಸಿದೆ, ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ.

ಹೆಗ್ಗಡಾಪುರ ಮತ್ತು ನಾಗನಹಳ್ಳಿ ನಡವೆ ಇರುವ ಜಮೀನು ಬಾಲರಾಜು, ಅಂತೋಣಿ, ಜಾನ್ ಸಹೋದರರಿಗೆ ಸೇರಿದ್ದು, ಭಾನುವಾರ ಅಂತೋಣಿ ಪತ್ನಿ ವಿಕ್ಟೋರಿಯ ರಾಣಿ ಅವರು ಎಂದಿನಂತೆ ತಮ್ಮ ತೋಟದಲ್ಲಿ ಬೆಳೆದಿದ್ದ ಕಾಕಡ ಹೂವನ್ನು ಕೀಳುತಿದ್ದರು. ಈ ವೇಳೆ ಹುಲಿ ಮಲಗಿರುವುದನ್ನು ನೋಡಿ ಭಯಭೀತರಾಗಿ, ಓಡಿಬಂದು ಪತಿ ಅಂತೋಣಿ ಮತ್ತು ಪಕ್ಕದ ಜಮೀನಿನವರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಕೆಲ ರೈತರು ಖಾತರಿಪಡಿಸಿಕೊಳ್ಳಲು ಮತ್ತೆ ಹುಲಿಯಿರುವ ಸ್ಥಳಕ್ಕೆ ಹೋಗಿ ನೋಡಿ ಮಲಗಿರುವುದು ಹುಲಿ ಎಂಬುದನ್ನು ಖಚಿತಪಡಿಸಿಕೊಂಡು ಬಳಿಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.[ಮೈಸೂರು: ಬಿಇಎಂಎಲ್ ನೌಕರರ ನಿದ್ದೆಗೆಡಿಸಿದ್ದ ಚಿರತೆ ಅಂದರ್]

A tiger in a banana farm in Mysuru!

ಬಾಳೆ ತೋಟದ ಮಾಲೀಕ ಬಾಲರಾಜು ಹೇಳುವ ಪ್ರಕಾರ ಶನಿವಾರ ರಾತ್ರಿಯೇ ಹುಲಿ ಬಂದು ಜಮೀನಿನಲ್ಲಿ ವಾಸ್ತವ್ಯ ಹೂಡಿದೆಯಂತೆ. ಅಂದು ರಾತ್ರಿ 10 ಗಂಟೆ ಸಮಯದಲ್ಲಿ ನಾಯಿಗಳು ಜೋರಾಗಿ ಬೋಗಳಿವೆ ಆಗ ಎದ್ದು ನೋಡಿದೆ ಏನೂ ಕಾಣಲಿಲ್ಲ ಎಂದು ಗಾಬರಿಯಿಂದಲೇ ಹೇಳುತ್ತಾರೆ ಅಂತೋಣಿ.

ವಿಷಯ ತಿಳಿಯುತ್ತಿದ್ದಂತೆಯೇ ಮೇಟಿಕುಪ್ಪೆ ಅರಣ್ಯಾಧಿಕಾರಿಗಳು ಜಮೀನಿಗೆ ದೌಡಾಯಿಸಿದ್ದು ಜನರ ಶಬ್ದಕ್ಕೆ ಹೆದರಿದ ಹುಲಿಯು ಓಡಿ ಹೋಗಿ ಪಕ್ಕದ ಬಾಳೆ ತೋಟದಲ್ಲಿ ಅವಿತುಕೊಂಡಿತು.
ಮೇಟಿಕುಪ್ಪೆ, ಎಚ್.ಡಿ.ಕೋಟೆ, ಅಂತರಸಂತೆ ವಲಯಗಳ ಹೆಚ್ಚಿನ ಸಿಬ್ಬಂದಿಗಳು ಮತ್ತು ಬೋನ್, ಬಲೆಗಳೊಂದಿಗೆ ಅರಣ್ಯಾಧಿಕಾರಿಗಳು ಸಜ್ಜಾಗಿ ಹುಲಿ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದರು. ಅಲ್ಲದೆ ಹುಲಿಗೆ ಅರವಳಿಕೆ ನೀಡಲು ಪಶುವೈದ್ಯ ಡಾ.ಉಮಾಶಂಕರ್ ರೊಂದಿಗೆ ಹುಲಿ ಇರುವ ಸ್ಥಳಕ್ಕೆ ಸಿಬ್ಬಂದಿಗಳು ಬಲೆಯ ಸಹಿತ ತೆರಳಿದ್ದರು. ಆಗ ಸಮೀಪದಲ್ಲಿದ್ದ ಹುಲಿ ಒಂದು ಕ್ಷಣ ಕಾರ್ಯಾಚರಣೆಗೆ ಬಂದಿದ್ದ ತಂಡದತ್ತ ದಿಟ್ಟಿಸಿ ಸಿಬ್ಬಂದಿಯತ್ತ ಧಾವಿಸಿದೆ ಈ ವೇಳೆ ಸಿಬ್ಬಂದಿ ತನ್ನ ಬಳಿಯಿದ್ದ ದೊಣ್ಣೆಯಿಂದ ತಿವಿದಿದ್ದು, ಹುಲಿಯು ಅಲ್ಲಿಂದ ಓಡಿ ಹೋಗಿ ಮತ್ತೊಂದು ಜಮೀನಿನ ಎತ್ತರವಾಗಿ ಬೆಳೆದಿದ್ದ ಬಾಳೆ ತೋಟದಲ್ಲಿ ಅವಿತು ಕೊಂಡಿದೆ. ಇದೇ ರೀತಿ ಎರಡು ಬಾರಿ ಪ್ರಯತ್ನಿಸಿದಾಗಲು ಹುಲಿ ಸೆರೆ ಸಿಗದೆ ತಪ್ಪಿಸಿಕೊಂಡಿದೆ.

A tiger in a banana farm in Mysuru!

ಭಾನುವಾರ ರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿ ಬಳಿಕ ಸ್ಥಗಿತಗೊಳಿಸಲಾಗಿದೆ. ಸ್ಥಳದಲ್ಲಿಯೇ ಮೊಕ್ಕಾಂ ಹೂಡಿರುವ ಸಿಬ್ಬಂದಿ ಇಂದು ಸಾಕು ಆನೆ ಅಭಿಮನ್ಯುವನ್ನು ಬಳಸಿ ಕಾರ್ಯಾಚರಣೆ ನಡೆಸಲಿದ್ದಾರೆ.
ಕಾರ್ಯಾಚರಣೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಮಣಿಕಂಠನ್, ಡಿಎಫ್ಓ ಕರಿಕಾಳನ್, ವಲಯಾರಣ್ಯಾಧಿಕಾರಿ ಮಧು, ಶರಣಬಸಪ್ಪ, ಮಹೇಶ್ ಮತ್ತು ಎಸ್‍ಟಿಪಿಎಫ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಕ್ಷಿಪ್ರ ಕಾರ್ಯಪಡೆ ಸೇರಿದಂತೆ ನೂರಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದಾರೆ.

English summary
A tiger hiding in a banana farm is creating tension among the people in Heggadapura and Naganahalli region in H.D.Kote Taluk, mysuru district. Forest Department officials trying to catch tiger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X