ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರಿಗಾಗಿ ಮೈಸೂರು-ಬೆಂಗಳೂರು ನಡುವೆ ಸಂಚರಿಸಲಿದೆ ವಿಶೇಷ ರೈಲು?

|
Google Oneindia Kannada News

ಮೈಸೂರು, ನವೆಂಬರ್. 21: ಕೇವಲ ಮಹಿಳೆಯರಿಗಾಗಿ ಒಂದು ಭೋಗಿ ಮಾತ್ರ ಮೀಸಲಿಟ್ಟಿದ್ದ ರೈಲ್ವೆ ಇಲಾಖೆ, ಹೊಸ ಚಿಂತನೆಯೊಂದು ನಡೆಸಲು ಅಣಿಯಾಗುತ್ತಿದೆ. ಮೈಸೂರು - ಬೆಂಗಳೂರು ನಡುವಿನ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಈ ಹಿನ್ನೆಲೆಯಲ್ಲಿ ಬೆಳಗಿನ ವೇಳೆಯಲ್ಲಿ ಬೆಂಗಳೂರು ಕಡೆಗೆ ಸಂಚರಿಸುವ ಪ್ರಯಾಣಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಇದರಿಂದಾಗಿ ಹೊಸ ರೈಲೊಂದನ್ನು ಮಹಿಳೆಯರಿಗಾಗಿ ಬಿಡಲು ಚಿಂತನೆ ನಡೆಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಅಮೃತಸರ ದುರಂತ: ರೈಲ್ವೆ ಹಳಿ ಬದಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣಅಮೃತಸರ ದುರಂತ: ರೈಲ್ವೆ ಹಳಿ ಬದಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ

ಮಹಿಳೆಯರಿಗಾಗಿ ಪ್ರತ್ಯೇಕ ಕೋಚ್ ಗಳನ್ನು ಮೀಸಲಿಡುವಂತೆ ವ್ಯಾಪಕ ಬೇಡಿಕೆ ಬಂದಿದ್ದು, ಈ ಬಗ್ಗೆ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಮೈಸೂರು ವಿಭಾಗದ ಅಪರ್ಣಾ ಗರ್ಗ್ ಅವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ.

ಮಹಿಳೆಯರಿಗಾಗಿ ಪ್ರತ್ಯೇಕ ಕೋಚ್ ಗಳನ್ನು ವಿಶ್ವಮಾನವ ಎಕ್ಸ್ ಪ್ರೆಸ್, ಚಾಮುಂಡಿ ಎಕ್ಸ್ ಪ್ರೆಸ್ ಮತ್ತು ಟಿಪ್ಪು ಎಕ್ಸ್ ಪ್ರೆಸ್ ಗಳಲ್ಲಿ ಮೀಸಲಿಡಲಾಗಿದೆ.

ಮೈಸೂರು, ಚಾಮರಾಜನಗರ ನಡುವಿನ ರೈಲುಗಳಲ್ಲಿ ಪ್ರತಿನಿತ್ಯ ಪ್ರಯಾಣಿಕರು ಹಾಗೂ ಸೆಕ್ಯೂರಿಟಿ ಆನ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸುತ್ತಿದ್ದಾರೆ. ಇನ್ನು ಮಹಿಳೆಯರಿಗೆ ಪ್ರತ್ಯೇಕವಾಗಿ ರೈಲುಗಳನ್ನು ಪರಿಚಯಿಸುವ ಯೋಜನೆಯಿದ್ದು, ಈ ಯೋಜನೆ ಪ್ರಾಥಮಿಕ ಹಂತದಲ್ಲಿದೆ.

ಬೆಂಗಳೂರು ಸಬರ್ಬನ್ ರೈಲಿನ ಕರಡು ಡಿಪಿಆರ್ ಮಾಸಾಂತ್ಯಕ್ಕೆ ಸಿದ್ಧಬೆಂಗಳೂರು ಸಬರ್ಬನ್ ರೈಲಿನ ಕರಡು ಡಿಪಿಆರ್ ಮಾಸಾಂತ್ಯಕ್ಕೆ ಸಿದ್ಧ

ಈ ರೈಲು ಮೈಸೂರು - ಬೆಂಗಳೂರು ಎರಡೂ ದಿಕ್ಕುಗಳಿಂದ ಪ್ರತಿನಿತ್ಯ ಪ್ರಯಾಣಿಸುವ ಗಾರ್ಮೆಂಟ್ಸ್ ಕಾರ್ಮಿಕರಿಗೆ , ಅದರಲ್ಲೂ ಮೈಸೂರಿನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

 ಚಾಮುಂಡಿ ಎಕ್ಸ್ ಪ್ರೆಸ್

ಚಾಮುಂಡಿ ಎಕ್ಸ್ ಪ್ರೆಸ್

ರೈಲ್ವೆ ಪ್ರಕಾರ ಮಹಿಳೆಯರಿಗಾಗಿ ಬೋಗಿಗಳನ್ನು ಮೀಸಲಿಟ್ಟಿರುವ ಮೂರು ರೈಲುಗಳಲ್ಲಿ ಚಾಮುಂಡಿ ಎಕ್ಸ್ ಪ್ರೆಸ್ ನಲ್ಲಿ ಗರಿಷ್ಠ ಪ್ರಮಾಣದ ಸೀಸನ್ ಟಿಕೆಟ್ ಹೊಂದಿರುವವರು ಪ್ರಯಾಣಿಸುತ್ತಾರೆ. ಪ್ರತಿನಿತ್ಯ ಮೈಸೂರು -ಬೆಂಗಳೂರು ನಡುವೆ ಸುಮಾರು 4 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಾರೆ.

 ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಇದರ ಪರಿಣಾಮವಾಗಿ ಮಹಿಳೆಯರಿಗೆ ರೈಲುಗಳಲ್ಲಿ ಆಸನಗಳು ಸಿಗುವುದು ತುಂಬಾ ಕಷ್ಟದ ಕೆಲಸವಾಗಿದೆ. ಈ ರೈಲುಗಳು ಮಂಡ್ಯ , ಮದ್ದೂರು ಮತ್ತು ಚನ್ನಪಟ್ಟಣ ಸೇರಿದಂತೆ ಎಲ್ಲ ಪ್ರಮುಖ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಮಾಡುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಓವರ್ ಲೋಡ್ ಆಗುತ್ತದೆ.

ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18'ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18'

 ವಾರದ ದಿನಗಳಲ್ಲಿ 15 ಸಾವಿರ ಏರಿಕೆ

ವಾರದ ದಿನಗಳಲ್ಲಿ 15 ಸಾವಿರ ಏರಿಕೆ

ಮೈಸೂರು ಮತ್ತು ಬೆಂಗಳೂರು ನಗರಗಳಿಗೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಂಗಳೂರು ಕಡೆಗೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ವಾರದ ದಿನಗಳಲ್ಲಿ 15 ಸಾವಿರ ಏರಿದೆ. ವಾರಾಂತ್ಯ ಮತ್ತು ರಜೆ ದಿನಗಳಲ್ಲಿ ಗಡಿ ದಾಟಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

 ಲೇಡಿಸ್ ಕಂಪಾರ್ಟ್ ಮೆಂಟ್

ಲೇಡಿಸ್ ಕಂಪಾರ್ಟ್ ಮೆಂಟ್

ಕೆಲವು ವರ್ಷಗಳ ಹಿಂದೆ ಮಹಿಳೆಯರ ರೈಲಿನ ಸಮಸ್ಯೆಗಳನ್ನು ತಿಳಿಸಲು ಹಾಗೂ ಪ್ರತ್ಯೇಕ ರೈಲಿನ ವಿಚಾರವಾಗಿ ಲೇಡಿಸ್ ಕಂಪಾರ್ಟ್ ಮೆಂಟ್ ಎಂಬ ನಾಟಕ ಮೈಸೂರು ನಗರ ಮತ್ತು ಇತರ ಪ್ರದೇಶಗಳಲ್ಲಿ ಪ್ರದರ್ಶನಗೊಂಡಿದ್ದು ಸ್ಮರಿಸಬಹುದು. ಈ ನಾಟಕವು ಮೈಸೂರು ಮತ್ತು ಬೆಂಗಳೂರು ನಡುವೆ ಸಂಚರಿಸುವ ಏಳು ಮಹಿಳೆಯರ ಪ್ರಯಾಣ ಆಧಾರಿತವಾಗಿತ್ತು. ಈ ನಾಟಕವನ್ನು ಅರ್ಥಶಾಸ್ತ್ರ ಉಪನ್ಯಾಸಕಿ ಸುಜಾತ ಅಕ್ಕಿ ಅವರು ನಿರ್ದೇಶಿಸಿ ನಿರ್ಮಿಸಿದ್ದರು.

English summary
A special train will run between Mysore and Bangalore for Women. Railway Department has informed about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X