ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಷಿಂಗ್ ಮೆಶಿನ್ ಒಳಗಿಂದ ಬುಸ್ ಎಂದ ನಾಗ

|
Google Oneindia Kannada News

ಮೈಸೂರು, ಆಗಸ್ಟ್ 19: ಮಳೆಗಾಲ ಬರುತ್ತಿದ್ದಂತೆ ಹಾವುಗಳು ಅಲ್ಲಲ್ಲಿ ಕಾಣಿಸಿಕೊಳ್ಳುವುದು ಸಹಜ. ಆದರೆ ಇಲ್ಲೊಬ್ಬರ ಮನೆಯಲ್ಲಿ ಬಟ್ಟೆ ಒಗೆಯಲೆಂದು ವಾಷಿಂಗ್ ಮೆಷಿನ್ ತೆಗೆಯುತ್ತಿದ್ದಂತೆ ನಾಗ ಬುಸುಗುಟ್ಟಿದ್ದಾನೆ.

ಕಳೆ ತೆಗೆಯುವಾಗ ಕಾಣಿಸಿಕೊಂಡ 12 ಅಡಿ ಹೆಬ್ಬಾವುಕಳೆ ತೆಗೆಯುವಾಗ ಕಾಣಿಸಿಕೊಂಡ 12 ಅಡಿ ಹೆಬ್ಬಾವು

ಮಳೆಗಾಲದಲ್ಲಿ ಹಾವುಗಳು ಬೈಕ್, ಶೂಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ. ಆದರೆ ಮೈಸೂರಿನಲ್ಲಿ ಬಟ್ಟೆ ತೊಳೆಯುವ ವಾಷಿಂಗ್ ಮೆಷಿನ್ ಒಳಗೆಯೇ ನಾಗರಹಾವು ಕಾಣಿಸಿಕೊಂಡಿದೆ. ಅದನ್ನು ಸ್ನೇಕ್ ಶ್ಯಾಮ್ ಹಿಡಿದು ಕಾಡಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಶ್ರೀ ಶಿವರಾತ್ರೀಶ್ವರ ನಗರದ ನಿವಾಸಿ ಸ್ಟಾಲಿನ್ ಕೆ.ಪೌಲ್ ಅವರ ಮನೆಯ ವಾಷಿಂಗ್ ಮೆಷಿನ್ ಒಳಗೆ ಹಾವು ಸೇರಿಕೊಂಡಿದ್ದು, ಸ್ಟಾಲಿನ್ ಅವರ ಪತ್ನಿ, ಅದರೊಳಗೆ ಬಟ್ಟೆ ಹಾಕಲು ಹೋದಾಗ ನಾಗರಹಾವು ಕಾಣಿಸಿಕೊಂಡಿದೆ.

A Snake catches in Washing machine at Mysuru

ಮೆಷಿನ್ ಒಳಗೆ ಹಾವು ಕಂಡು ಗಾಬರಿಯಾದ ಮಹಿಳೆ ತಕ್ಷಣ ಗಂಡನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪತಿ ಕೂಡಲೇ ಈ ವಿಷಯವನ್ನು ಉರಗ ತಜ್ಞ ಸ್ನೇಕ್ ಶ್ಯಾಂ ಅವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಶ್ಯಾಂ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದು ಮನೆಯ ಜನರು ನಿಟ್ಟುಸಿರುಬಿಟ್ಟಿದ್ದಾರೆ.

English summary
A cobra which had entered into a washing machine at a house in Mysur city created a flutter for some time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X