ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಾಚಾರ್ಯರ ನಿರ್ಲಕ್ಷ್ಯ: ಮೈಸೂರಿನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ

ಕೋರ್ಸ್ ಮುಗಿಸಿ ಎರಡು ವರ್ಷವಾದ್ರೂ ವರ್ಗಾವಣೆ ಪತ್ರ ಮತ್ತು ಅಂಕಪಟ್ಟಿ ಪ್ರಮಾಣ ಪತ್ರ ನೀಡುತ್ತಿಲ್ಲವೆಂದು ಆರೋಪಿಸಿರುವ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿಕ್ಷಣ ಸಚಿವರ ಕ್ಷೇತ್ರ ಮೈಸೂರಿನ ನರಸಿಂಹರಾಜದಲ್ಲಿ ನಡೆದಿದೆ.

By Yashaswini
|
Google Oneindia Kannada News

ಮೈಸೂರು, ಜೂನ್ 1 : ಡಿಎಡ್ ಕೋರ್ಸ್ ಮುಗಿಸಿ ಎರಡು ವರ್ಷವಾದ್ರೂ ವರ್ಗಾವಣೆ ಪತ್ರ ಮತ್ತು ಅಂಕಪಟ್ಟಿ ಪ್ರಮಾಣ ಪತ್ರ ನೀಡುತ್ತಿಲ್ಲವೆಂದು ಆರೋಪಿಸಿರುವ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿಕ್ಷಣ ಸಚಿವರ ತವರು ಕ್ಷೇತ್ರ ಮೈಸೂರಿನ ನರಸಿಂಹರಾಜದಲ್ಲಿ ನಡೆದಿದೆ.

ಇಲ್ಲಿನ ಗೌಸಿಯಾ ನಗರದಲ್ಲಿರುವ ಲೀಡ್ಸ್ ಡಿಎಡ್ ಕಾಲೇಜಿನ ಪ್ರಾಂಶುಪಾಲರಾದ ಜಗದಾಂಬ ಅವರು ತಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಮನನೊಂದಿರುವ ವಿದ್ಯಾರ್ಥಿನಿ ಸಾನೀಯಾ ಕೌಸರ್, ಆತ್ಮಹತ್ಯೆಗೆ ಯತ್ನಿಸಿದ್ದರು.[ಕಾಂಪೌಂಡ್ ಗೆ ಕಾರು ಡಿಕ್ಕಿ: ಮೈಸೂರಿನ ಆಯುರ್ವೇದ ವೈದ್ಯ ಸಾವು]

A Mysuru student attempts to commit suicide

ಕೋರ್ಸ್ ಮುಗಿಸಿ ಎರಡು ವರ್ಷವಾದರೂ ಕಾಲೇಜು ಪಡೆದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಹಾಗೂ ಡಿಎಡ್ ಕೋರ್ಸ್ ಗಳ ಮೂಲ ದಾಖಲಾತಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿನಿ ಸಾನೀಯಾ ಕೌಸರ್ ಆರೋಪಿಸಿದ್ದಾರೆ. ಕಾಲೇಜಿನ ಶುಲ್ಕದ ಜೊತೆಗೆ ಹೆಚ್ಚಿನ ಶುಲ್ಕ ಅಂದ್ರೆ 30 ಸಾವಿರ ನೀಡಬೇಕು. ಹಣ ನೀಡದಿದ್ದರೆ ನಿನಗೆ ಟಿ ಸಿ ಮತ್ತು ಮಾರ್ಕ್ಸ್ ಕಾರ್ಡ್ ನೀಡಲ್ಲ ಎಂದು ಕಾಲೇಜಿನ ಪ್ರಾಂಶುಪಾಲರಾದ ಜಗಾದಾಂಬ ಒತ್ತಡ ಹೇರುತ್ತಿದ್ದಾರೆ ಎಂದು ವಿದ್ಯಾರ್ಥಿನಿ ದೂರಿದ್ದಾಳೆ.[ಮೈಸೂರು ವಿವಿ ಉಪಕುಲಸಚಿವರ ಕಚೇರಿಗೆ ಬೀಗ!]

ಒಂದು ಕಡೆ ಕಿತ್ತು ತಿನ್ನುವ ಬಡತನ, ಮತ್ತೊಂದು ಕಡೆ ನಿರುದ್ಯೋಗ ಇದರ ಮಧ್ಯೆ ಪೂರ್ಣಗೊಳಿಸಿದ ಕೋರ್ಸ್ ಗಳ ಮಾರ್ಕ್ಸ್ ಕೂಡ ಇಲ್ಲ, ಪ್ರಮಾಣ ಪತ್ರಕ್ಕಾಗಿ ಸಾನೀಯಾ ಕೌಸರ್ ಎರಡು ವರ್ಷದಿಂದ ಕಾಲೇಜಿಗೆ ಅಲೆಯುತ್ತಿದ್ದಾರೆ. ಆದರೆ ಕಾಲೇಜು ಅಂಕಪಟ್ಟಿ ಮತ್ತು TC ನೀಡದೆ ಸತಾಯಿಸುತ್ತಿದೆ. ಹೀಗಾಗಿ ನ್ಯಾಯ ಕೊಡಿಸುವಂತೆ ಕಾಲೇಜಿನ ಮುಂದೆ ನಿಂತು ಸಾನೀಯಾ ತೋಡಿಕೊಂಡಿದ್ದಾಳೆ.
ಇದು ಕೇವಲ ಸಾನಿಯಾ ಗಲ್ಲದೇ ಸಾದಿಯಾ ಖಾನಂ ಎಂಬ ವಿದ್ಯಾರ್ಥಿಗೂ ಕಾಲೇಜಿನಿಂದ ಮೋಸವಾಗಿದೆ ಎಂದು ಹೇಳಲಾಗುತ್ತಿದೆ.

English summary
A student attempts to commit suicide for not giving her DEd cirtificate. I am fed up by DEd college principle's response. The principle Jagadampa is not responding properly for our problems, the student told. The incident took place in Mysuru today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X