ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಗ್ಗಿಲ್ಲದೇ ರಸ್ತೆಯಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ

|
Google Oneindia Kannada News

ಮೈಸೂರು, ಅಕ್ಟೋಬರ್. 25: ಸಾರ್ವಜನಿಕವಾಗಿ ಎಗ್ಗಿಲ್ಲದೇ ರಸ್ತೆಯಲ್ಲೇ ಗಾಂಜಾ ಮಾರುತ್ತಿದ್ದ ಯುವಕನೊಬ್ಬನನ್ನು ಖುದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಹೌದು, ಸಾರ್ವಜನಿಕವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಉದಯಗಿರಿ ಪೊಲೀಸರು, ಆತನಿಂದ 50 ಸಾವಿರ ರೂ.ಮೌಲ್ಯದ 1 ಕೆಜಿ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿ ನಗರದ ಗೌಸಿಯಾನಗರ ನಿವಾಸಿ ಕಲೀಂಪಾಷ (30).

ಮಂಗಳೂರಲ್ಲಿ 'ಮಾದಕ' ಪ್ರೇಮ: ಪ್ರಿಯನಿಗಾಗಿ ಜೈಲಿಗೆ ಗಾಂಜಾ ತಂದ ಯುವತಿಮಂಗಳೂರಲ್ಲಿ 'ಮಾದಕ' ಪ್ರೇಮ: ಪ್ರಿಯನಿಗಾಗಿ ಜೈಲಿಗೆ ಗಾಂಜಾ ತಂದ ಯುವತಿ

ಮಂಗಳವಾರ (ಅ.23) ಸಂಜೆ ಉದಯಗಿರಿ ಪೊಲೀಸ್ ಠಾಣೆಯ ಎಎಸ್ ಐ ಕೆ.ಸಿ.ಬೀರಪ್ಪ ಅವರು ಗರುಡದಲ್ಲಿ ಗಸ್ತು ಮಾಡಿಕೊಂಡು ಸಾತಗಳ್ಳಿ ಬಸ್ ಡಿಪೋ ಹಿಂಭಾಗದಲ್ಲಿರುವ ವರ್ತುಲ ರಸ್ತೆ ಬಳಿ ಹೋಗುತ್ತಿದ್ದರು. ಈ ವೇಳೆ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು.

A man who was selling ganja in public was arrested

 ಚೀನಿಕಾಯಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಭೂಪನ ಬಂಧನ ಚೀನಿಕಾಯಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಭೂಪನ ಬಂಧನ

ಹೀಗಾಗಿ ಪೊಲೀಸರು ಅವರ ಬಳಿ ತೆರಳಿದಾಗ ಒಬ್ಬಾತ ಓಡಿ ಹೋಗಿದ್ದು, ಮತ್ತೊಬ್ಬನನ್ನು ಹಿಡಿದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಆತನ ಕೈಯ್ಯಲ್ಲಿದ್ದ ಬಿಳಿಯ ಪ್ಲಾಸ್ಟಿಕ್ ಕವರ್ ನಲ್ಲಿ 9 ಚಿಕ್ಕ ಪೊಟ್ಟಣಗಳಲ್ಲಿ ಗಾಂಜಾ ಸೊಪ್ಪು ಕಂಡುಬಂದಿದೆ. ಕೂಡಲೇ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನ್ಯಾಯಾಲಯದ ಆವರಣದಲ್ಲೇ ಗಾಂಜಾ ಮಾರುತ್ತಿದ್ದ ಭೂಪನ ಬಂಧನನ್ಯಾಯಾಲಯದ ಆವರಣದಲ್ಲೇ ಗಾಂಜಾ ಮಾರುತ್ತಿದ್ದ ಭೂಪನ ಬಂಧನ

ಹೆಚ್ಚಿನ ವಿಚಾರಣೆಗೊಳಪಡಿಸಿದ ವೇಳೆ ಆತ ಹಳೆಯ ಅಪರಾಧಿಯಾಗಿದ್ದು, ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ 8 ಅಪರಾಧ ಪಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ತಕ್ಷಣವೇ ಆತನ ವಿರುದ್ಧ ಪಕರಣ ದಾಖಲಿಸಿದ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

English summary
A man who was selling ganja in public was arrested.This incident took place in Mysore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X