ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್.ಡಿ.ಕೋಟೆಯಲ್ಲಿ ಹಾವು ಹಿಡಿಯಲು ಹೋಗಿ ಸಾವು ತಂದುಕೊಂಡ ವ್ಯಕ್ತಿ

|
Google Oneindia Kannada News

ಮೈಸೂರು, ಏಪ್ರಿಲ್ 28:ಎಚ್.ಡಿ.ಕೋಟೆ ಪಟ್ಟಣದ ಹ್ಯಾಂಡ್ ಪೋಸ್ಟ್ ಆರ್.ಪಿ. ಸರ್ಕಲ್‌ನ ಅಂಗಡಿಯಲ್ಲಿದ್ದ ಹಾವನ್ನು ಹಿಡಿಯಲು ಹೋಗಿ ವೇಣು (53) ಎಂಬುವವರು ಸಾವನ್ನಪ್ಪಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ವೇಣು ಮೃತಪಟ್ಟಿದ್ದಾರೆ. ಕಳೆದೆರಡು ದಿನಗಳ ಹಿಂದೆ ಅಂಗಡಿಯೊಳಗೆ ಹಾವು ಬಂದಿತ್ತು. ಇದನ್ನು ಕಂಡು ಗಾಬರಿಯಿಂದ ಎಲ್ಲರೂ ಅಂಗಡಿಯಿಂದ ಹೊರಗೆ ಓಡಿ ಬಂದಿದ್ದರು.

ಪೊಲೀಸ್ ಜೀಪಿನ ಚಕ್ರದೊಳಗೆ ಪ್ರತ್ಯಕ್ಷವಾದ ನಾಗ:ಆಮೇಲೇನಾಯ್ತು?ಪೊಲೀಸ್ ಜೀಪಿನ ಚಕ್ರದೊಳಗೆ ಪ್ರತ್ಯಕ್ಷವಾದ ನಾಗ:ಆಮೇಲೇನಾಯ್ತು?

ಅಂಗಡಿಯ ಬಾಡಿಗೆ ವಸೂಲಿಗೆ ಬಂದಿದ್ದ ಕಟ್ಟಡದ ಮಾಲೀಕ ವೇಣು ಅವರು ಅಂಗಡಿ ಮಾಲೀಕನಿಗೆ ಗಾಬರಿಯಾಗಬೇಡಿ, ನಾನು ಹಾವನ್ನು ಹಿಡಿಯುತ್ತೇನೆ ಎಂದು ನಾಗರಹಾವನ್ನು ಹಿಡಿದು ಕೈಗೆತ್ತಿಕೊಂಡಿದ್ದಾರೆ. ಆಗ ಚೆಲ್ಲಾಟವಾಡುತ್ತಿದ್ದಾಗ ಹಾವು ಎಡಗೈಗೆ ಕಚ್ಚಿದೆ. ಆದರೂ ಹಾವನ್ನು ಬಲಗೈಯಲ್ಲಿ ಸುತ್ತಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

A man dies when catches snake at hotel in HD Kote

ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಸ್ನೇಕ್ ಹಾಲಿ ಅವರಿಗೆ ಕರೆ ಮಾಡಿ, ವ್ಯಕ್ತಿಯಿಂದ ಹಾವನ್ನು ಬಿಡಿಸುವಂತೆ ತಿಳಿಸಿದ್ದಾರೆ.ಅವರು ಬಂದು ಹಾವನ್ನು ಬಿಡಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಸುಮಾರು 30 ವರ್ಷಗಳಿಂದ ಪಟ್ಟಣದ ಹ್ಯಾಂಡ್‌ಪೋಸ್ಟ್ ಸರ್ಕಲ್‌ ಬಳಿ ವೇಣು ಕುಟುಂಬ ಸಮೇತ ತಮ್ಮದೇ ಶ್ರೀದೇವಿ ಹೋಟೆಲ್ ನಡೆಸುತ್ತಿದ್ದರು. ನಾಲ್ಕೈದು ವರ್ಷಗಳಿಂದ ಹೋಟೆಲ್ ಮುಚ್ಚಿ ಮಳಿಗೆಯನ್ನು ಬೇರೊಬ್ಬರಿಗೆ ಬಾಡಿಗೆ ಕೊಟ್ಟು ಕೇರಳದ ತ್ರಿಶೂರ್‌ಲ್ಲಿ ವಾಸವಾಗಿದ್ದರು. ಬಾಡಿಗೆ ಹಣ ತೆಗೆದುಕೊಳ್ಳಲು ಇಲ್ಲಿಗೆ ಬಂದಾಗ ಈ ಘಟನೆ ನಡೆದಿದೆ.

English summary
A 53 year old man dies when catches snake at hotel in HD Kote, Mysuru district. Venu (53) deceased person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X