ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಐಪಿಎಲ್ ನೋಡುತ್ತಿದ್ದ ವ್ಯಕ್ತಿ ನೇಣಿಗೆ ಶರಣು

|
Google Oneindia Kannada News

ಮೈಸೂರು, ಮಾರ್ಚ್ 30 : ಮೈಸೂರಿನಲ್ಲಿ ಐಪಿಎಲ್ ಪಂದ್ಯ ವೀಕ್ಷಣೆ ಮಾಡುತ್ತಿದ್ದ ವ್ಯಕ್ತಿ ಏಕಾಏಕಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ನಗರದ ಹಳೆ ಬಂಡಿಕೇರಿಯಲ್ಲಿ ವಾಸವಾಗಿದ್ದ ಕಾರು ಚಾಲಕ ರಘು (35) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಊರಿಗೆ ತೆರಳಿದ್ದ ಇವರ ಪತ್ನಿ ಮತ್ತು ಮಕ್ಕಳು ಗುರುವಾರ ಸಂಜೆ ಹೊತ್ತಿಗೆ ವಾಪಸ್ ಬಂದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಾತ್ರಿ ಕೋಣೆಯಲ್ಲಿ ಒಬ್ಬರೇ ಐಪಿಎಲ್‌ ಕ್ರಿಕೆಟ್ ಪಂದ್ಯ ನೋಡುತ್ತಿದ್ದರು. ಪತ್ನಿ ಮತ್ತು ಮಕ್ಕಳು ಮನೆಯಲ್ಲಿ ಬೇರೆಡೆ ಮಲಗಿದ್ದಾರೆ. ಆದರೆ, ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ರಘು ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆ ಕಾರಣ ತಿಳಿದು ಬಂದಿಲ್ಲ.

ಬ್ಲೇಡಿನಿಂದ ಕೈಕೊಯ್ದುಕೊಂಡು ಪೊಲೀಸರಿಗೆ ಕರೆ ಮಾಡಿದ ಮಹಿಳಾ ಟೆಕ್ಕಿ - ಬ್ಲೇಡಿನಿಂದ ಕೈಕೊಯ್ದುಕೊಂಡು ಪೊಲೀಸರಿಗೆ ಕರೆ ಮಾಡಿದ ಮಹಿಳಾ ಟೆಕ್ಕಿ -

ಎಲ್ಲ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಕೆ.ಆರ್.ಠಾಣೆಯಲ್ಲಿ ದಾಖಲಾಗಿದೆ.

ಮುಂದುವರಿದ ಸರಗಳ್ಳತನ : ಬಿಸಿಲಿನಲ್ಲಿ ಸುತ್ತಿ ಸೊಪ್ಪು ವ್ಯಾಪಾರ ಮಾಡಿ ಗಳಿಸಿದ 1 ಸಾವಿರ ಹಣ ಹಾಗೂ ಕುತ್ತಿಗೆಯಲ್ಲಿದ್ದ 8ರಿಂದ 10 ಗ್ರಾಂನಷ್ಟು ಚಿನ್ನದ ಗುಂಡುಗಳುಳ್ಳ ಕರಿಮಣಿ ಸರವನ್ನು 55 ವರ್ಷದ ಮಹಿಳೆಯೊಬ್ಬರಿಂದ ಅಪಹರಿಸಿದ ಘಟನೆ ನಡೆದಿದೆ.

A man committed suicide after watching IPL Match at Mysuru

ಇಲ್ಲಿನ ಶಿವಾಜಿ ರಸ್ತೆಯ 10ನೇ ಕ್ರಾಸ್‌ನಲ್ಲಿ ಮಹಿಳೆಯೊಬ್ಬರು ಸೊಪ್ಪು ಮಾರಾಟ ಮಾಡುತ್ತಾ ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ನೀಲಿ ಬಣ್ಣದ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಮಹಿಳೆಯ ಸೊಂಟದಲ್ಲಿ ಸಿಕ್ಕಿಸಿ ಕೊಂಡಿದ್ದ ಚೀಲ ಹಾಗೂ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಿತ್ತುಕೊಂಡು ಹೋಗಿದ್ದಾನೆ. ಪ್ರಕರಣ ಎನ್.ಆರ್.ಠಾಣೆಯಲ್ಲಿ ದಾಖಲಾಗಿದೆ.

English summary
35 year old man Raghu committed suicide after watching IPL Match at Mysuru. K R Police taken this case for investigation,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X