ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೀಲ ಕೊರೆದಿದ್ದ ಇಲಿಗೆ ವಿಶೇಷ ಶಿಕ್ಷೆಯ ವಿಡಿಯೋ ವೈರಲ್!

ಮೈಸೂರಿನ ವರ್ತಕನೊಬ್ಬ ಇಲಿಗೆ ಶಿಕ್ಷೆ ಕೊಟ್ಟ ವಿಡಿಯೋ ವೈರಲ್. ದಿನಾಲು ಬಿಲ ಕೊರೆಯುತ್ತಿದ್ದ ಇಲಿಯನ್ನು ಕಟ್ಟಿ ಹಾಕಿ ಕಡ್ಡಿಯಿಂದ ಥಳಿತ, ಬೈಗುಳ.

By ಯಶಸ್ವಿನಿ ಎಂ.ಕೆ.
|
Google Oneindia Kannada News

ಮೈಸೂರು, ಸೆಪ್ಟೆಂಬರ್ 15: ನಮ್ಮ ಮನೆಗಳಲ್ಲೋ, ಅಂಗಡಿಗಳಲ್ಲೋ ಇಲಿ ಕಾಟ ಹೆಚ್ಚಾದರೆ ನಾವೇನು ಮಾಡುತ್ತೇವೆ? ಒಂದೇ ಇಲಿ ಬೋನು ಇಡುತ್ತೇವೆ. ಇಲ್ಲವಾದರೆ ಪಾಷಾಣ ಹಾಕುತ್ತೇವೆ. ಆದರೆ, ಮೈಸೂರಿನಲ್ಲೊಬ್ಬ ದಿನಸಿ ಅಂಗಡಿ ಮಾಲೀಕ ತನ್ನ ಅಂಗಡಿಯಲ್ಲಿ ಕಾಳುಗಳ ಚೀಲ ಕೊರೆಯುತ್ತಿದ್ದ ಇಲಿಗೆ ವಿಶಿಷ್ಟವಾದ ಶಿಕ್ಷೆ ಕೊಟ್ಟಿದ್ದಾನೆ.

ಮೈಸೂರಿನಲ್ಲಿ ಮರದ ಕೊಂಬೆ ತಲೆಯ ಮೇಲೆ ಬಿದ್ದು ವ್ಯಕ್ತಿ ಸಾವುಮೈಸೂರಿನಲ್ಲಿ ಮರದ ಕೊಂಬೆ ತಲೆಯ ಮೇಲೆ ಬಿದ್ದು ವ್ಯಕ್ತಿ ಸಾವು

ಇಲಿಯನ್ನು ಜೀವಂತವಾಗಿ ಹಿಡಿದಿರುವ ಆತ, ಅದರ ಕೈ ಕಾಲುಗಳನ್ನು ಅಗಲಿಸಿ ಬಾಟಲಿಯೊಂದಕ್ಕೆ ಕಟ್ಟಿ ಹಾಕಿದ್ದಲ್ಲದೆ, ಪೊರಕೆ ಕಡ್ಡಿಯಿಂದ ಕೊಂಚ ಹೊಡೆದಿದ್ದಾನೆ.

A cute punishment for a rat, given by Shop keeper in Mysuru

ಅಷ್ಟೇ ಅಲ್ಲ, ''ಬುದ್ಧಿ ಇಲ್ವಾ ನಿನಗೆ, ನಿಮ್ಮ ಅಪ್ಪ ಅಮ್ಮ ಇದನ್ನೇನಾ ಹೇಳ್ಕೊಟ್ಟಿರೋದು'' ಎಂದೆಲ್ಲಾ ಅದನ್ನು ಪ್ರಶ್ನೆ ಮಾಡಿದ್ದಾನೆ. ನಿಮ್ಮಪ್ಪ ಅಮ್ಮ ಬುದ್ದಿ ಕಲ್ಸಿಲ್ವಾ ಅಂತ ಪ್ರಶ್ನೆ ಬೇರೆ ಕೇಳಿದ್ದಾನೆ.

ಇದರ ವಿಡಿಯೋ ಈಗ ಮೈಸೂರಿನ ತುಂಬೆಲ್ಲಾ ಹರಿದಾಡಿ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದವರಿಗೆ, ಹಾಲಿವುಡ್ ಚಿತ್ರಗಳಾದ 'ರಾಟಟೂಲಿ' ಅಥವಾ 'ಮೌಸ್ ಹಂಟ್' ನೆನಪಾದರೆ ಅಚ್ಚರಿಯಿಲ್ಲ.

English summary
A shop keeper of Mysuru punish a rat differently and record that punishment and spread in social media. This video has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X