• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಸಿಲ್ಕ್ ಸೀರೆ ಹಿಂದಿದೆ ಕುತೂಹಲಕಾರಿ ಕಥೆ

By Yashaswini
|
   Mysuru Silks : An Interesting story behind this Saree | Watch video | Oneindia Kannada

   ಮೈಸೂರು, ಸೆಪ್ಟೆಂಬರ್ 13 : ರೇಷ್ಮೆ ಸೀರೆಗೆ ಮನಸೋಲದ ಹೆಂಗಳೆಯರೇ ಇಲ್ಲ. ಅದರಲ್ಲೂ ನಮ್ಮ ಭಾಗದ ಮೈಸೂರು ಸಿಲ್ಕ್ ಸೀರೆ, ನೀರೆಯರಿಗೆ ಭವ್ಯ ಪಾರಂಪರಿಕ ಉಡುಗೆಯ ಪ್ರತೀಕ ಎಂದೇ ಭಾವನೆ. ಇತ್ತೀಚೆಗೆ ವಿದೇಶಿಗರಿಗೂ ಸೀರೆ ಉಡುಗೆಗೆ ಆಕರ್ಷಿತರಾಗುತ್ತಿದ್ದಾರೆ. ಇದರಿಂದಾಗಿಯೇ ಮೈಸೂರು ಸಿಲ್ಕ್ ಸೀರೆಗಳು ವಿದೇಶಗಳಲ್ಲಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿವೆ. ಭಾರತೀಯ ಸಂಸ್ಕೃತಿ, ಸಂಪ್ರದಾಯದಲ್ಲಿ ಸೀರೆ ಉಡುಗೆಗೆ ಅಗ್ರ ಸ್ಥಾನ ನೀಡಲಾಗಿದೆ.

   ರುಚಿ ರುಚಿ ಮೈಸೂರು ಪಾಕ ಹುಟ್ಟಿದ್ದು ಹೀಗೆ...

   ಭಾರತೀಯ ಮಹಿಳೆಯರಿಗೆ ಸೀರೆ ಎಂದರೆ ಅಚ್ಚು-ಮೆಚ್ಚು, ಮದುವೆ ಮುಂತಾದ ಶುಭ ಕಾರ್ಯಗಳಲ್ಲಿ ರೇಷ್ಮೆ ಸೀರೆ ಉಡುಗೆಗೆ ಅಗ್ರಸ್ಥಾನ, ರೇಷ್ಮೆ ಸೀರೆಯಲ್ಲೇ ಸೌಂದರ್ಯ ಇನ್ನೂ ಹೆಚ್ಚುತ್ತದೆ ಎನ್ನುವ ದೃಢವಿಶ್ವಾಸ. ರಾಜ್ಯದಲ್ಲಿ ರೇಷ್ಮೆ ಸೀರೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅದೇ ರೀತಿ ರೇಷ್ಮೆ ತಯಾರಿಕೆಯಲ್ಲಿಯೂ ರಾಜ್ಯ ಮುಂದಿದೆ. ಮೈಸೂರು ಸಿಲ್ಕ್ ಸೀರೆ ಸಾಂಪ್ರದಾಯಿಕ ಮತ್ತು ಪಾರಂಪರಿಕ ಉಡುಗೆಯಲ್ಲಿ ಮಹತ್ವದ ಸ್ಥಾನ ಹೊಂದಿದೆ. ಇಂತಹ ಮೈಸೂರು ಸಿಲ್ಕ್ ಜನ್ಮತಾಳಿದ್ದರ ಹಿಂದೆ ಬಹುದೊಡ್ಡ ಕಥೆಯೇ ಇದೆ.

   1912 ಬ್ರಿಟನ್ ರಾಣಿ ವಿಕ್ಟೋರಿಯಾ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಲು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಇಂಗ್ಲೆಂಡಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನಾಲ್ವಡಿ ಅವರು ಸ್ವಿಜರ್ಲೆಂಡ್ ಗೆ ಭೇಟಿ ನೀಡಿದರು. ಅಲ್ಲಿ ನೇಯ್ಗೆ ಯಂತ್ರಗಳನ್ನು ಕೊಂಡು ಅದರ ಬಗ್ಗೆ ವಿವರವನ್ನು ಪಡೆದರು. ನಮ್ಮ ರಾಜ್ಯದಲ್ಲಿ ಕೈಮಗ್ಗದಿಂದ ಸೀರೆ ಬಟ್ಟೆಗಳನ್ನು ನೇಯುತ್ತಾರೆ. ಅದಕ್ಕೆ ಹೆಚ್ಚು ಶ್ರಮ ಹಾಗೂ ಸಮಯ ಬೇಕಾಗುತ್ತದೆ.

   ದಸರಾ ಹೊತ್ತಲ್ಲಿ ನೆನೆಯೋಣ ಬಾಯಲ್ಲಿ ನೀರೂರಿಸುವ ಮೈಸೂರು ತಿನಿಸುಗಳ...

   ಅಷ್ಟೆಲ್ಲ ಆದರೂ ಯಂತ್ರದ ಮೂಲಕ ಬಟ್ಟೆಯಲ್ಲಿ ಕಾಣುವ ವೃತ್ತಿಪರತೆ ಹಾಗೂ ಸೌಂದರ್ಯ ಕೈಮಗ್ಗದ ಬಟ್ಟೆಯಲ್ಲಿ ಕಾಣುವುದಿಲ್ಲ ಎಂಬುದನ್ನು ಮನಗಂಡ ರಾಜರು, ಯಂತ್ರವನ್ನು ತಮ್ಮ ರಾಜ್ಯದಲ್ಲಿ ಆರಂಭಿಸುವ ಸಂಕಲ್ಪ ಮಾಡಿದರು. ಅದರ ಫಲವಾಗಿ 1912 ರಲ್ಲಿ 32 ನೇಯ್ಗೆ ಯಂತ್ರಗಳು ಮೈಸೂರಿಗೆ ಬಂದವು. ಈ ಹಿನ್ನೆಲೆಯಲ್ಲಿ ದೇಶದಲ್ಲೇ ಯಂತ್ರದ ಮೂಲಕ ನೇಯ್ಗೆಯನ್ನು ಆರಂಭಿಸಿದ ಮೊದಲ ರಾಜ್ಯ ಮೈಸೂರು ಎಂಬ ಕೀರ್ತಿ ಸಿಗುವಂತಾಯಿತು.

   ಭಾರತೀಯ ಪರಂಪರೆಯ ಹೆಮ್ಮೆಯ ಪ್ರತೀಕ ಈ 'ಮೈಸೂರು ಪೇಟ'

   ನಮ್ಮ ದೇಶದಲ್ಲಿ ರೇಷ್ಮೆ ಎಂದರೆ ಎರಡು ಹೆಸರು ಕಣ್ಣೆದುರು ಕಾಣಿಸಿಕೊಳ್ಳುತ್ತದೆ. ಕಾಂಜೀವರಂ ಹಾಗೂ ಮೈಸೂರು ಜಗತ್ತಿನ ಮೂಲೆ ಮೂಲೆಯಲ್ಲೂ ಗುಣಮಟ್ಟದ ರೇಷ್ಮೆಗೆ ಹೆಸರುವಾಸಿ. ಮೈಸೂರು ರೇಶಿಮೆ ಇಂದು ಜಗತ್ತಿನಲ್ಲಿ ಮಣ್ಣನ್ನೇ ಸಿಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಆಡಳಿತವೇ ಕಾರಣ ಎನ್ನಬೇಕು. ಮೈಸೂರು ರಾಜ್ಯದಲ್ಲಿ ರೇಷ್ಮೆಯನ್ನು ಪರಿಚಯಿಸಿದ ಕೀರ್ತಿ ಟಿಪ್ಪು ಸುಲ್ತಾನನಿಗೆ ಸಲ್ಲಬೇಕು ಆದರೆ ಅದಕ್ಕೊಂದು ಉದ್ಯಮದ ಮಾನ್ಯತೆ ದೊರಕಿಸಿಕೊಟ್ಟವರು ನಾಲ್ವಡಿಯವರು.(ಚಿತ್ರಕೃಪೆ: ಕೆಎಸ್ ಐಸಿ)

   ಮೈಸೂರು ಪರಂಪರೆಗೆ ತಕ್ಕುದಾದ ಗೌರವ

   ಮೈಸೂರು ಪರಂಪರೆಗೆ ತಕ್ಕುದಾದ ಗೌರವ

   ಕರ್ನಾಟಕವು ತನ್ನ ರಾಜಮನೆತನದ ಪರಂಪರೆ ಹಾಗೂ ವೈಭವದಿಂದ ಶ್ರೀಮಂತವಾಗಿದೆ. ಹಾಗಾಗಿ ಇಲ್ಲಿ ಉತ್ಪಾದಿಸಲಾಗುವ ರೇಷ್ಮೆ ತನ್ನ ಶ್ರೀಮಂತ ಹಾಗೂ ನಾಜೂಕಾದ ಜರಿತಾರೆಗಳ ಮೂಲಕ ಕರ್ನಾಟಕ ಪಾರಂಪರಿಕ ವೈಭವವನ್ನು ಪ್ರತಿಫಲಿಸುತ್ತದೆ. ಮೈಸೂರು ರೇಷ್ಮೆ ಎನ್ನುವ ಹೆಸರು ಮೈಸೂರಿನ ಪರಂಪರೆಗೆ ತಕ್ಕುದಾದ ಗೌರವ. ಈ ರಾಜ ಪರಂಪರೆಯನ್ನು ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ ಕಳೆದ ಒಂಬತ್ತು ದಶಕಗಳಿಂದ ಕಾಯ್ದುಕೊಳ್ಳುತ್ತಾ ಹೆಮ್ಮೆಯಿಂದ ಮುನ್ನಡೆಸಿಕೊಂಡು ಹೋಗುತ್ತಿದೆ. ಶುದ್ಧ ಚಿನ್ನದ ಜರಿಯೊಂದಿಗೆ ಪರಿಪೂರ್ಣ ಶುದ್ಧ ರೇಷ್ಮೆಯನ್ನು ಉತ್ಪಾದಿಸುತ್ತಾ ಬಂದಿರುವ ಕೆಎಸ್ಐಸಿ , ರೇಷ್ಮೆ ನೂಲು ತೆಗೆಯುವುದರಿಂದ ಮೊದಲ್ಗೊಂಡು ವಿವಿಧ ಬಣ್ಣಗಳಲ್ಲಿ ಹಾಗೂ ವಿನ್ಯಾಸಗಳಲ್ಲಿ ಶುದ್ಧ ರೇಷ್ಮೆ ಬಟ್ಟೆಯನ್ನು ನೇಯುವಲ್ಲಿ ಕೆಎಸ್ಐಸಿ ದೇಶದಲ್ಲೇ ಏಕಮಾತ್ರ ಸಂಸ್ಥೆ.

   ಸದಾ ಹೊಸದಾಗಿಯೇ ಕಾಣುವ ಸೀರೆ

   ಸದಾ ಹೊಸದಾಗಿಯೇ ಕಾಣುವ ಸೀರೆ

   ಇಲ್ಲಿ ಉತ್ಪಾದಿಸಲಾದ ಸೀರೆಯ ಜರಿಯು ಎಂದಿಗೂ ಮಾಸುವುದಿಲ್ಲ ಹಾಗೆಯೇ ಬಹಳ ವರ್ಷಗಳು ಉಪಯೋಗಿಸಿದ ನಂತರವೂ ಹೊಚ್ಚ ಹೊಸದಾಗಿಯೇ ಕಾಣುತ್ತದೆ. ನಿಗಮವು ಏರ್ಪಡಿಸುವ ಅಪರೂಪದ ಸೀರೆ ವಸ್ತು ಪ್ರದರ್ಶನಗಳು ಇದರ ಗರಿಮೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಕಸೂತಿ ಮಾಡಲಾದ ಕೋಡ್ ಸಂಖ್ಯೆಯ ಮೂಲಕ ಜರಿ ಸೀರೆಗಳಿಗೆ ಭರವಸೆ ನೀಡುವಲ್ಲಿ ಕೆಎಸ್ಐಸಿ ಏಕಮಾತ್ರ ಸಂಸ್ಥೆ. ಇಂದು ಕೆಎಸ್ಐಸಿ ತಯಾರಿಸುವ ಸೀರೆಗಳ ಗುಣಮಟ್ಟಕ್ಕೆ ಸರಿಸಾಟಿಯೇ ಇಲ್ಲ. ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ವಿವಿಧ ರೀತಿಯಲ್ಲಿ ಸೀರೆಗಳು ಹೊರಬರುತ್ತಿವೆ.

   ಪಾವಿತ್ರ್ಯ ಉಳಿಸಿಕೊಂಡ ಸೀರೆ

   ಪಾವಿತ್ರ್ಯ ಉಳಿಸಿಕೊಂಡ ಸೀರೆ

   ಕುಸುರಿ ವಿನ್ಯಾಸ ಸೀರೆ , ದೊಡ್ಡ ಬುಟ್ಟಾ ಪಲ್ಲು ಸೀರೆ , ಶ್ರೀಮಂತ ಪಲ್ಲು ಸೀರೆ , ಜವಾರ್ ಅಂಚಿನ ಸೀರೆ , ಸಣ್ಣ ಮಾವಿನ ಸೀರೆ , ಜರಿ ಪ್ರಿಂಟೆಡ್ ಸೀರೆ , ಟಿಶ್ಯೂ ಸೀರೆ ಸಾಂಪ್ರದಾಯಿಕ ಝರಿ ಸೀರೆ ಹೀಗೆ ಇತ್ಯಾದಿ ಸೀರೆಗಳು ಇಲ್ಲಿನ ಪಾವಿತ್ರ್ಯಯನ್ನು ಉಳಿಸಿಕೊಂಡು ಬಂದಿದೆ.

   ಉದ್ಯೋಗ ಭಾಗ್ಯ

   ಉದ್ಯೋಗ ಭಾಗ್ಯ

   ಹೀಗೆ ಅಶೋಕಪುರಂ ಎದುರಿನ ಜಾಗದಲ್ಲಿ ಕಾರ್ಖಾನೆಯನ್ನು ಆರಂಭಿಸಿ, ಸ್ಥಳೀಯರಿಗೆ ಉದ್ಯೋಗ ದೊರಕಿಸಿ ಕೊಟ್ಟ ಕೀರ್ತಿ ಮಹಾರಾಜರಿಗೆ ಸಲ್ಲುತ್ತದೆ. ಜೊತೆಗೆ ಶತಮಾನ ಪೂರೈಸಿ ಮುನ್ನುಗ್ಗುತ್ತಿರುವ ರೇಷ್ಮೆ ಕಾರ್ಖಾನೆ ಈಗ ತಿಂಗಳಿಗೆ 32,000 ಮೀಟರ್ ರೇಷ್ಮೆಯನ್ನು ನೇಯ್ದು ಗುಣಮಟ್ಟದ ಸೀರೆಯನ್ನು ಉತ್ಪಾದಿಸಿದೆ . 115 ಬಗೆಯ 300ಕ್ಕೂ ಹೆಚ್ಚು ವರ್ಣರಂಜಿತ ಮಾದರಿಯ ಸೀರೆಗಳು ಇಲ್ಲಿ ತಯಾರಾಗುವುದು ಇಲ್ಲಿನ ವಿಶೇಷ.

   English summary
   Mysore Silks are being manufactured with love and care that have made them possessions of great value. Here is a brief story on Mysuru Silks and its history.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X