ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧ್ಯ ಸಿಗದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಮೈಸೂರಿನ ವ್ಯಕ್ತಿ

|
Google Oneindia Kannada News

ಮೈಸೂರು, ಏಪ್ರಿಲ್ 2: ಲಾಕ್ ಡೌನ್‌ನಿಂದ ಮಧ್ಯ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಎಣ್ಣೆ ಸಿಗಲಿಲ್ಲ ಎಂದು ಜೀವ ಕಳೆದುಕೊಂಡ ಕೆಲವು ಘಟನೆ ನೆಡೆದಿವೆ. ಈಗ ಮೈಸೂರಿನಲ್ಲಿ ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾನೆ.

Recommended Video

ಡಿ ಬಾಸ್ ಮಾನವೀಯತೆಯನ್ನು ಮನಸಾರೆ ಹೊಗಳಿದ ಪ್ರತಾಪ್ ಸಿಂಹ | Oneindia Kannada

ಕೊರೊನಾ ತಡೆಗೆ ದೇಶವೇ ಲಾಕ್ ಡೌನ್ ಆಗಿದೆ. ಲಾಕ್‌ ಡೌನ್‌ ಶುರುವಾಗಿ ಒಂದು ವಾರ ಕಳೆದಿದೆ. ಒಂದು ವಾರದಿಂದ ಎಣ್ಣೆ ಸಿಕ್ಕಿಲ್ಲ ಎಂದು ಮೈಸೂರಿನ ನಿವಾಸಿ ಆನಂದ್ ಎಂಬುವವನು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೈಸೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೊನಾ ಇಲ್ಲವೆಂದು ವೈದ್ಯರು ಹೇಳಿದರೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಕೊರೊನಾ ಇಲ್ಲವೆಂದು ವೈದ್ಯರು ಹೇಳಿದರೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಆನಂದ್‌ಗೆ 45 ವರ್ಷದ ವಯಸ್ಸಾಗಿದ್ದು, ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದನು. ಲಾಕ್‌ಡೌನ್‌ನಿಂದ ಮಧ್ಯ ಮಾರಾಟ ನಿಷೇಧ ಆಗಿದ್ದು, ವಾರಗಳಿಂದ ಈ ವ್ಯಕ್ತಿ ಮಧ್ಯ ಸೇವನೆ ಮಾಡಿರಲಿಲ್ಲ. ಎಣ್ಣೆ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಕತ್ತು ಕೊಯ್ದುಕೊಳ್ಳಲು ಪ್ರಯತ್ನಪಟ್ಟಿದ್ದನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

A 45 Years Old Man Tried To Commit Suicide Because Of Not Being Able To Get Liquor

ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯ ನಿಷೇಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಲಾಕ್ ಡೌನ್ ಮುಗಿಯುವ ವರೆಗೆ ಮಧ್ಯ ಸಿಗುವುದಿಲ್ಲ ಎಂದು ಹೇಳಿದ್ದಾರೆ.

 ಲಾಕ್ ಡೌನ್ ಟೈಮಲ್ಲಿ ಸಿಗೋ ಮದ್ಯವೆಲ್ಲಾ ವಿಷಪೂರಿತವಂತೆ... ಲಾಕ್ ಡೌನ್ ಟೈಮಲ್ಲಿ ಸಿಗೋ ಮದ್ಯವೆಲ್ಲಾ ವಿಷಪೂರಿತವಂತೆ...

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆತ್ಮಹತ್ಯೆ ಪ್ರಯತ್ನಗಳು ಮಧ್ಯ ಸಿಗದಿರುವುದಕ್ಕೆ ನಡೆದಿವೆ ಎನ್ನುವ ಸಾಕ್ಷಿ ಇಲ್ಲ. ಈಗ ಮಧ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಕುಡುಕರು ಸ್ತಿಮಿತದಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ.

English summary
Anand, A 45 years old man tried to commit suicide because of not being able to get liquor in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X