ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Stories Of Strength: ಕೊರೊನಾ ಗೆದ್ದು ಸ್ಫೂರ್ತಿಯಾದ 98 ವರ್ಷದ ವೃದ್ಧ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 8: ಮಹಾಮಾರಿ ಕೊರೊನಾ ಬಂದ್ರೆ ಬದುಕುವುದೇ ಇಲ್ಲ ಅನ್ನುವ ಮಾತಿದೆ. ಹೀಗಿರುವಾಗಲೇ ಮೈಸೂರಿನಲ್ಲಿ 98 ವರ್ಷದ ವೃದ್ಧ ಕೊರೊನಾ ಸೋಂಕು ಗೆದ್ದು ಇತರರಿಗೆ ಸ್ಫೂರ್ತಿ ಆಗಿದ್ದಾರೆ.

Recommended Video

Stories of Strength : Corona ಗೆದ್ದು ಮನೆಗೆ ಬಂದ 98 ವರ್ಷದ ತಾತನಿಗೆ ಭರ್ಜರಿ ಸ್ವಾಗತ | Oneindia Kannada

ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ 98 ವರ್ಷದ ಸೂರ್ಯನಾರಾಯಣ್ ಕೊರೊನಾ ಗೆದ್ದ ವೃದ್ಧನಾಗಿದ್ದಾನೆ. ಕೊರೊನಾ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಸೋಮವಾರ ಮನೆಗೆ ಬಂದ ಅವರನ್ನು ಕೋವಿಡ್ ಟಾಸ್ಕ್‌ಫೋರ್ಸ್‌ ಸಮಿತಿ ಹಾಗೂ ಕುಟುಂಬಸ್ಥರು ಪುಷ್ಪಾರ್ಚನೆ ಮೂಲಕ ಸ್ವಾಗತಿಸಿದರು.

ಕೊರೊನಾ ಲಸಿಕೆ ಮೇಲೆ ಜನರ ಪ್ರೀತಿ: ಭಾರತದಲ್ಲಿ ಹೇಗಿದೆ ಲೆಕ್ಕಾಚಾರ!?ಕೊರೊನಾ ಲಸಿಕೆ ಮೇಲೆ ಜನರ ಪ್ರೀತಿ: ಭಾರತದಲ್ಲಿ ಹೇಗಿದೆ ಲೆಕ್ಕಾಚಾರ!?

ಜನ ಕೋವಿಡ್ ಸೋಂಕಿತರನ್ನು ಮಾತನಾಡಿಸಲು, ಮುಟ್ಟಲು ಹೆದರುತ್ತಿದ್ದಾರೆ. ಇಂಥಾ ಸಮಯದಲ್ಲಿ ಮಾನವೀಯತೆಯೇ ಮುಖ್ಯವಾಗಿದೆ. ಸೂರ್ಯ ನಾರಾಯಣ್‌ ಅವರು ಕೋವಿಡ್ ಸೋಂಕಿತರಾಗಿರುವುದು ತಿಳಿಯುತ್ತಿದ್ದಂತೆಯೇ ಅವರನ್ನು ತುಳಸಿದಾಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.

Mysuru: 98 Years Old Person Fully Recovers From Covid-19

98 ವರ್ಷದ ಸೂರ್ಯ ನಾರಾಯಣ್‌ ರಾವ್‌ ಅವರು ಕೋವಿಡ್ ಮುಕ್ತರಾಗಿರುವುದು ಸಂತಸ ತಂದಿದೆ. ಕೋವಿಡ್ ಸೋಂಕಿನ ಕುರಿತು ತಪ್ಪು ತಿಳುವಳಿಕೆ ಹೊಂದಿರುವವರು ಹಾಗೂ ಸೋಂಕು ತಗುಲಿದರೆ ಎಲ್ಲಿ ಸಾಯುತ್ತೇವೋ ಎಂದು ಭಯಪಡುವವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಪುಷ್ಪಾರ್ಚನೆ ಮೂಲಕ ಸ್ವಾಗತಿಸಲಾಯಿತು.

English summary
98 Years Old Surya Narayan Rao Successfully Recovered From Covid-19 infection at Mysuru Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X