ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿ 96 ಸಿಬ್ಬಂದಿಗೆ ಕೆಲಸ ಕಳೆದುಕೊಳ್ಳುವ ಆತಂಕ

By Gururaj
|
Google Oneindia Kannada News

ಮೈಸೂರು, ಜೂನ್ 27 : ಮೈಸೂರು ವಿಶ್ವವಿದ್ಯಾಲಯದ 96 ಬೋಧಕೇತರ ಸಿಬ್ಬಂದಿಗಳ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸಿಬ್ಬಂದಿಯನ್ನು ಕರ್ತವ್ಯದಿಂದ ಕೂಡಲೇ ಬಿಡುಗಡೆ ಮಾಡಿ ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಬೋಧಕೇತರ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳುವಾಗ ಮೀಸಲಾತಿ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪವಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಕೆಎಸ್ಒಯುಗೆ ಮಾನ್ಯತೆ ನೀಡಲು ಒಪ್ಪಿಗೆ ನೀಡಿದ ಯುಜಿಸಿಕೆಎಸ್ಒಯುಗೆ ಮಾನ್ಯತೆ ನೀಡಲು ಒಪ್ಪಿಗೆ ನೀಡಿದ ಯುಜಿಸಿ

ಪ್ರೊ.ಕೆ.ಎಸ್.ರಂಗಪ್ಪ ಅವರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ಅವರ ಅಧಿಕಾರ ಅವಧಿ ಮುಗಿಯಲು ಕೆಲವು ತಿಂಗಳು ಬಾಕಿ ಇರುವಾಗ 96 ಬೋಧಕೇತರ ಸಿಬ್ಬಂದಿಗಳನ್ನು ನೇಮಕ ಮಾಡಿದ್ದರು. ಈ ನೇಮಕಾತಿಯ ವೇಳೆ ಮೀಸಲಾತಿ ನಿಯಮಗಳನ್ನು ಪಾಲಿಸಿರಲಿಲ್ಲ.

96 non-teaching staff of University of Mysore facing job loss

ಈ ಕುರಿತು ಪ್ರಭಾರಿ ಕುಲಪತಿಯಾಗಿದ್ದ ಪ್ರೊ.ದಯಾನಂದ ಮಾನೆ ರಾಜ್ಯಪಾಲರಿಗೆ ದೂರು ನೀಡಿದ್ದರು. ರಾಜ್ಯಪಾಲರು ಡಾ.ಎಂ.ಆರ್.ನಿಂಬಾಳ್ಕರ್, ಡಾ.ಕನುಭಾಯ್, ಸಿ.ಮಾವನಿ ನೇತೃತ್ವದದಲ್ಲಿ ಸಮಿತಿ ರಚನೆ ಮಾಡಿದ್ದರು.

ಕೆಂಗಲ್ ಹನುಮಂತಯ್ಯ ಸಂಪುಟ ಸಚಿವರ ಶೈಕ್ಷಣಿಕ ಅರ್ಹತೆಕೆಂಗಲ್ ಹನುಮಂತಯ್ಯ ಸಂಪುಟ ಸಚಿವರ ಶೈಕ್ಷಣಿಕ ಅರ್ಹತೆ

ಸಮಿತಿ ನೇಮಕಾತಿ ವೇಳೆ ಮೀಸಲಾತಿ ನಿಯಮ ಉಲ್ಲಂಘನೆಯಾಗಿದೆ, ಸಿಬ್ಬಂದಿಯನ್ನು ವಜಾಗೊಳಿಸಬಹುದು. ನೇಮಕಾತಿ ಮಾಡಿದವರ ವಿರುದ್ಧ ಅಧಿಕಾರ ದುರುಪಯೋಗದ ಕ್ರಮ ಕೈಗೊಳ್ಳಬಹುದು ಎಂದು 2017 ಜುಲೈ 12ರಂದು ಸಮಿತಿ ವರದಿ ನೀಡಿತ್ತು.

ಈ ವರದಿಯ ಆಧಾರದ ಮೇಲೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಉನ್ನತ ಶಿಕ್ಷಣ ಇಲಾಖೆಗೆ ಬೋಧಕೇತರ ಸಿಬ್ಬಂದಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಎಂದು ಸೂಚನೆ ನೀಡಿದ್ದಾರೆ.

English summary
Over 96 non-teaching employees of University of Mysore under the threat of losing their jobs after Governor Vajubhai Vala has issued an order asking the higher education department to remove all the appointments made during December 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X