ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿಗೆ ಕಾಲಿಟ್ಟ ಮಹಾಮಾರಿ ಹಂದಿ ಜ್ವರ:94 ಮಂದಿಗೆ ಸೋಂಕು

|
Google Oneindia Kannada News

ಮೈಸೂರು, ಮೇ 2:ಮೈಸೂರು ಜಿಲ್ಲೆಗೆ ಮಹಾಮಾರಿ ಹಂದಿ ಜ್ವರ ಕಾಲಿಟ್ಟಿದ್ದು, ಈ ವರ್ಷದಲ್ಲಿ ಮಾರ್ಚ್ ವರೆಗೆ ಪರೀಕ್ಷೆಗೆ ಒಳಪಟ್ಟ 318 ಮಂದಿ ಪೈಕಿ 94 ಮಂದಿಯಲ್ಲಿ ಈ ಸೋಂಕು ದೃಢಪಟ್ಟಿದೆ.

ಇದನ್ನು ಕೇಳಿ ಆತಂಕಕ್ಕೆ ಒಳಗಾಗುವ ಬದಲು ಮುಂಜಾಗ್ರತೆ ವಹಿಸಿದರೆ ಇದರಿಂದ ಮುಕ್ತವಾಗಬಹುದು. ಕಳೆದ ವರ್ಷ ಅವಧಿಯಲ್ಲಿ 612 ಮಂದಿಯ ಕಫ ಪರೀಕ್ಷೆಗೆ ಒಳಪಟ್ಟು, ಈ ಪೈಕಿ 93 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಈ ವರ್ಷದ ಜನವರಿಯಿಂದ ಮಾರ್ಚ್ ವರೆಗೆ 318 ಮಂದಿ ಪೈಕಿ 94 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆ ಮೂಲಕ ಈ ವರ್ಷ ಕೇವಲ ಮೂರು ತಿಂಗಳ ಅವಧಿಯಲ್ಲಿ ಸೋಂಕು ಹೊಂದಿದವರ ಸಂಖ್ಯೆ ಹೆಚ್ಚಳಗೊಂಡಿದೆ.

ಶಿವಮೊಗ್ಗ : ತೀರ್ಥಹಳ್ಳಿಯಲ್ಲಿ ಹಂದಿ ಜ್ವರ, 14 ಪ್ರಕರಣ ಪತ್ತೆಶಿವಮೊಗ್ಗ : ತೀರ್ಥಹಳ್ಳಿಯಲ್ಲಿ ಹಂದಿ ಜ್ವರ, 14 ಪ್ರಕರಣ ಪತ್ತೆ

ಈ ಅಂಕಿ ಅಂಶ ನೀಡಿರುವ ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ಘಟಕ ಈ ಸಂಖ್ಯೆಯಿಂದ ಇತ್ತೀಚೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ತಿಳಿಸಿದೆ. ಬಹುತೇಕ ಆಸ್ಪತ್ರೆಗಳಲ್ಲಿ ನೆಗಡಿ, ಕೆಮ್ಮು, ಸೇರಿದಂತೆ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆ ದಾಖಲಾಗುತ್ತಿರುವವರ ಸಂಖ್ಯೆ ಅಧಿಕಗೊಳ್ಳುತ್ತಿದೆ.

94 people are suspected H1N1 fever at Mysuru

ಎಚ್1ಎನ್ 1 ಸೋಂಕು ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಆಸ್ಪತ್ರೆಗಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಇದರೊಂದಿಗೆ ಸಾರ್ವಜನಿಕರ ಸಹಕಾರವೂ ಮುಖ್ಯ ಎಂಬುದು ಜಿಲ್ಲಾ ಆರೋಗ್ಯಾಧಿಕಾರಿಗಳ ಆಶಯ.

 ಎಚ್ 1 ಎನ್1: ಮೈಸೂರಿನಲ್ಲಿ 27 ಶಂಕಿತ ಪ್ರಕರಣಗಳು ಪತ್ತೆ ಎಚ್ 1 ಎನ್1: ಮೈಸೂರಿನಲ್ಲಿ 27 ಶಂಕಿತ ಪ್ರಕರಣಗಳು ಪತ್ತೆ

ಈ ಕುರಿತಾಗಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಆರ್.ವೆಂಕಟೇಶ್, ಗ್ರಾಮಾಂತರ ಪ್ರದೇಶಕ್ಕಿಂತ ಮೈಸೂರು ನಗರದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಈ ಕಾಯಿಲೆ ನಿಯಂತ್ರಿಸುವ ಸಂಬಂಧ ಇಲಾಖೆ ಸರ್ವಸನ್ನದ್ಧವಾಗಿದ್ದು, ಸೋಂಕು ಇರುವವರು ಮತ್ತು ಈ ಬಗ್ಗೆ ಶಂಕೆ ಇರುವವರು ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

English summary
94 people are suspected H1N1 fever in past 3 months at Mysuru.District health department are taken precautionary measures for this fever.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X