ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಹೆಚ್ಚುತ್ತಿವೆ ವಾಹನಗಳು, ಏನಿದರ ಸೂಚನೆ?

|
Google Oneindia Kannada News

ಮೈಸೂರು, ಜುಲೈ 12: ರಾಜ್ಯದ ರಾಜಧಾನಿ ಬೆಂಗಳೂರಿನ ನಂತರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ವರ್ಷ ಸುಮಾರು 82 ಸಾವಿರ ವಾಹನಗಳು ಮೈಸೂರಿನಲ್ಲಿ ನೋಂದಣಿಯಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ನಿವೃತ್ತರ ಸ್ವರ್ಗವೆಂದೇ ಹೆಸರಾದ ಮೈಸೂರಿಗೆ ವರ್ಷದಿಂದ ವರ್ಷಕ್ಕೆ ಪ್ರವಾಸಿಗರು ಹೆಚ್ಚಾಗುತ್ತಿದ್ದಾರೆ. ಹಾಗೆಯೇ ಅವರನ್ನು ಅವಲಂಬಿಸಿ ನೌಕರಿಯೂ ಹುಟ್ಟಿಕೊಳ್ಳುತ್ತಿದೆ. ಇದರಿಂದ ಇಲ್ಲಿಗೆ ಬರುವವರ ಸಂಖ್ಯೆಯೂ ಹೆಚ್ಚಿದೆ. ಹೀಗಿದ್ದಾಗ ಸ್ವಾಭಾವಿಕವಾಗಿ ವಾಹನಗಳ ಸಂಖ್ಯೆಯೂ ಹೆಚ್ಚುತ್ತದೆ.

 ಸಂಚಾರಿ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ: ಯಾವ ತಪ್ಪಿಗೆ ಎಷ್ಟು ದಂಡ? ಸಂಚಾರಿ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ: ಯಾವ ತಪ್ಪಿಗೆ ಎಷ್ಟು ದಂಡ?

ಇದರಿಂದ ಮೈಸೂರಿನಲ್ಲಿ ಟ್ರಾಫಿಕ್ ಕಿರಿಕಿರಿಯೂ ಆರಂಭವಾಗಿದೆ. ಟ್ರಾಫಿಕ್ ಕಡಿಮೆ ಮಾಡಲು ಇಲ್ಲಿನ ಟ್ರಾಫಿಕ್ ಪೊಲೀಸರು ಅನೇಕ ಹೊಸ ಹೊಸ ಕ್ರಮಗಳನ್ನು ಜಾರಿಗೆ ತಂದರೂ ವಾಹನ ಕೊಳ್ಳುವವರ ಸಂಖ್ಯೆಯೇನೂ ಇಳಿಮುಖವಾಗುವಂತೆ ಕಾಣುತ್ತಿಲ್ಲ.

82 thousand vehicles registered in last year at Mysuru

ಕಳೆದ ವರ್ಷ ಸುಮಾರು 82 ಸಾವಿರ ವಾಹನಗಳು ನೋಂದಣಿಯಾಗಿದ್ದು, ಇದರಲ್ಲಿ ದ್ವಿಚಕ್ರ ವಾಹನಗಳ ಪಾಲು ಹೆಚ್ಚಾಗಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ವಾಹನಗಳು ಖರೀದಿಯಾಗಿರುವುದು ಇದೇ ಮೊದಲು ಎನ್ನಬಹುದು. ಒಟ್ಟಾರೆ ಜಿಲ್ಲೆಯಲ್ಲಿ 2018ರ ಸಾಲಿನಲ್ಲಿ 82,340 ಹೊಸ ವಾಹನಗಳು ನೋಂದಾಯಿಸಿಕೊಂಡಿವೆ.

ಆರ್'ಟಿಓ ಅಧಿಕಾರಿಗೆ ಚಪ್ಪಲಿ ತೋರಿಸಿದ ಶಿವಮೊಗ್ಗ ಪಾಲಿಕೆ ಸದಸ್ಯನ ವಿರುದ್ಧ ದೂರುಆರ್'ಟಿಓ ಅಧಿಕಾರಿಗೆ ಚಪ್ಪಲಿ ತೋರಿಸಿದ ಶಿವಮೊಗ್ಗ ಪಾಲಿಕೆ ಸದಸ್ಯನ ವಿರುದ್ಧ ದೂರು

ಮೈಸೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಈಗಾಗಲೇ 56,131 ವಾಹನಗಳು ನೋಂದಣಿ ಮಾಡಿಕೊಂಡಿದ್ದು, ಇದಕ್ಕೆ ತಿ. ನರಸೀಪುರ ಮತ್ತು ಮೈಸೂರು ತಾಲ್ಲೂಕಿನ ಕೆಲ ಭಾಗದ ವಾಹನಗಳ ಸಂಖ್ಯೆಯೂ ಸೇರಿಕೊಂಡಿವೆ.

ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಮೈಸೂರಿನಲ್ಲಿ ಈಗ ವಾಹನಗಳ ಸಂಖ್ಯೆ ಹೆಚ್ಚಿದೆ. ಆದರೆ ಹೀಗೇ ಮುಂದುವರೆದರೆ ಮುಂದೆ ಹೇಗೆ ಎಂಬ ಆತಂಕವೂ ವ್ಯಕ್ತಗೊಂಡಿದೆ. ಇದು ಏನನ್ನು ಸೂಚಿಸುತ್ತಿದೆ ಎಂಬ ಪ್ರಶ್ನೆಯೂ ಮೂಡುತ್ತದೆ.

English summary
82 thousand vehicles registered in last year at Mysuru. Around 50 thousand new two wheeler registerd in rto.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X