ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು-ಚೆನ್ನೈ ಹೈ ಸ್ಪೀಡ್‌ ರೈಲು; ಸರ್ವೆಗೆ ಬಿಡ್‌ ಸಲ್ಲಿಕೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 17: ಮೈಸೂರು-ಚೆನ್ನೈ ನಡುವೆ ಹೈಸ್ಪೀಡ್ ರೈಲು ಓಡಿಸಲು ರೈಲ್ವೆ ಮಂಡಳಿಯು ಒಪ್ಪಿಗೆ ನೀಡಿದೆ. ಈ ರೈಲ್ವೆ ಯೋಜನೆಗೆ ಸರ್ವೆ ನಡೆಸಲು ಬಿಡ್‌ ಆಹ್ವಾನಿಸಲಾಗಿತ್ತು. ಒಟ್ಟು 8 ಕಂಪೆನಿಗಳು ಬಿಡ್‌ ಸಲ್ಲಿಸಿದ್ದು, ಯೋಜನೆ ಆರಂಭಕ್ಕೆ ಮೊದಲ ಹೆಜ್ಜೆ ಇಟ್ಟಂತಾಗಿದೆ.

ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮ ಮೈಸೂರು-ಚೆನ್ನೈ ನಡುವಿನ ಸುಮಾರು 450 ಕಿ.ಮೀ. ಉದ್ದದ ಹೈಸ್ಪೀಡ್ ರೈಲು ಯೋಜನೆಗೆ ಸರ್ವೆ ಕಾರ್ಯ ನಡೆಸಲಿದೆ. ಯೋಜನೆ ಕುರಿತು ವಿಸ್ತ್ರತ ಯೋಜನಾ ವರದಿ ತಯಾರು ಮಾಡಲು ಸರ್ವೆ ಕಾರ್ಯವನ್ನು ಮಾಡಲಾಗುತ್ತಿದೆ.

ಬೆಳಗಾವಿ-ಧಾರವಾಡ-ಹುಬ್ಬಳ್ಳಿ ನಡುವೆ ಹೈಸ್ಪೀಡ್ ರೈಲುಬೆಳಗಾವಿ-ಧಾರವಾಡ-ಹುಬ್ಬಳ್ಳಿ ನಡುವೆ ಹೈಸ್ಪೀಡ್ ರೈಲು

ಈ ಸರ್ವೆ ಕಾರ್ಯಕ್ಕಾಗಿ ಅರ್ಹ ಗುತ್ತಿಗೆದಾರರಿಂದ ಟೆಂಡರ್‌ ಆಹ್ವಾನಿಸಿತ್ತು. 98 ದಿನಗಳೊಳಗೆ ಸರ್ವೆ ನಡೆಸುವುದರ ಜೊತೆಗೆ ವಿದ್ಯುತ್ ಸೌಕರ್ಯ ಮೂಲವನ್ನು ಗುರುತಿಸುವ ಸಲುವಾಗಿ ಬಿಡ್ ಕರೆಯಲಾಗಿತ್ತು. 8 ಕಂಪನಿಗಳು ಬಿಡ್ ಸಲ್ಲಿಕೆ ಮಾಡಿವೆ.

ದೇಶದಲ್ಲೇ ಮೊದಲು: ಮೈಸೂರಲ್ಲಿ ತಯಾರಾದ ಹೈಸ್ಪೀಡ್ ರೈಲು ಚಕ್ರ ದೇಶದಲ್ಲೇ ಮೊದಲು: ಮೈಸೂರಲ್ಲಿ ತಯಾರಾದ ಹೈಸ್ಪೀಡ್ ರೈಲು ಚಕ್ರ

8 Companies Submitted Bid For Survey Of Mysuru-Chennai High Speed Train Project

ಅಪೆಕೋ ಇನ್ಫ್ರಾಸ್ಟ್ರಕ್ಚರ್ ಇಂಡಿಯಾ ಪ್ರೈ.ಲಿ., ಎಆರ್‌ಕೆ ಸರ್ವೀಸಸ್ ಪ್ರೈ.ಲಿ., ಜಿಪಿಎಸ್ ಟೆಕ್ನಾಲಜಿಸ್ ಪ್ರೈ.ಲಿ., ಇಮೇಜಿಸ್ ಇಂಜಿನಿಯರಿಂಗ್ ಸಲ್ಯೂಷನ್ಸ್ ಪ್ರೈ.ಲಿ., ಎಂಎನ್‌ಇಸಿ ಕನ್ಸಲ್ಟೆಂಟ್ಸ್ ಪ್ರೈ.ಲಿ., ಸರಾಥಿ ಇಂಜಿನಿಯರ್ಸ್‌, ಸಕುರಾ ಜಿಯೋ ಇನ್ಫಾರ್ಮೇಷನ್ಸ್ ಸಾಫ್ಟ್‌ವೇರ್ ರೀಸರ್ಚ್ ಪ್ರೈ.ಲಿ., ಸುಬುಧಿ ಟೆಕ್ನಾಲಾಜೀಸ್ ಪ್ರೈ.ಲಿ. ಸಂಸ್ಥೆಗಳು ಟೆಂಡರ್‌ ಸಲ್ಲಿಕೆ ಮಾಡಿದೆ.

ಬೆಂಗಳೂರು -ಚೆನ್ನೈ ಹೈಸ್ಪೀಡ್ ರೈಲು ಯೋಜನೆಗೆ ಚೀನಾ ಅಡ್ಡಗಾಲುಬೆಂಗಳೂರು -ಚೆನ್ನೈ ಹೈಸ್ಪೀಡ್ ರೈಲು ಯೋಜನೆಗೆ ಚೀನಾ ಅಡ್ಡಗಾಲು

ಚೆನ್ನೈ-ಮೈಸೂರು-ಬೆಂಗಳೂರು ಹೈಸ್ಪೀಡ್ ರೈಲು ಮಾರ್ಗದಲ್ಲಿ ಒಟ್ಟು 9 ನಿಲ್ದಾಣಗಳು ಬರಲಿವೆ. ಪೂನಮಲೈ, ಅರಕ್ಕೋಣಂ, ಚಿತ್ತೂರು, ಬಂಗಾರಪೇಟೆ, ಬೆಂಗಳೂರು, ಚನ್ನಪಟ್ಟಣ, ಮಂಡ್ಯ ಮತ್ತು ಮೈಸೂರು ನಿಲ್ದಾಣಗಳನ್ನು ಯೋಜನೆ ಸಂಪರ್ಕಿಸಲಿದೆ.

ಬಿಡ್‌ಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತಾಂತ್ರಿಕ ಪರಿಶೀಲನೆ ವಿಭಾಗವು ಪರಿಶೀಲನೆ ನಡೆಸಲಿದೆ. ಅಂತಿವಾಗಿ ಒಂದು ಕಂಪನಿಯನ್ನು ಅಂತಿಮಗೊಳಿಸಲಾಗುತ್ತದೆ.

English summary
8 Companies submitted bid for Mysuru-Chennai high speed train project survey. DIPR will be prepared after the survey report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X