ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; ಹೆಚ್ಚಿದ ಕೊರೊನಾ ಸೋಂಕಿತರ ಸಂಖ್ಯೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 26; ಸರ್ಕಾರ ಹಾಗೂ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದ ನಡುವೆಯು ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ವೀಕೆಂಡ್ ಲಾಕ್‌ಡೌನ್‌ ನಡುವೆಯೂ ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಆ ಮೂಲಕ ಮಹಾಮಾರಿಯ ಆತಂಕ ಮುಂದುವರಿದಿದೆ.

ಮೈಸೂರು ಜಿಲ್ಲೆಯಲ್ಲಿ ವೆಂಟಿಲೇಟರ್ ಅಭಾವ ಕೂಡ ಎದುರಾಗಿದ್ದು ಜನರ ಆತಂಕವನ್ನು ಹೆಚ್ಚಿಸಿದೆ. ಜಿಲ್ಲೆಯಲ್ಲಿ ಪ್ರತಿದಿನ ನೂರಾರು ಹೊಸ ಪ್ರಕರಣಗಳು ವರದಿ ಆಗುತ್ತಿರುವ ಪರಿಣಾಮ ಈಗಾಗಲೇ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಹಾಗೂ ವೆಂಟಿಲೇಟರ್ ಭರ್ತಿ ಆಗಿದೆ.

ಮೈಸೂರು; ನಕಲಿ ರೆಮ್ಡೆಸಿವಿರ್ ಔಷಧ ಮಾರಾಟ ಜಾಲ ಪತ್ತೆ ಮೈಸೂರು; ನಕಲಿ ರೆಮ್ಡೆಸಿವಿರ್ ಔಷಧ ಮಾರಾಟ ಜಾಲ ಪತ್ತೆ

ಇದಕ್ಕೆ ಸಾಕ್ಷಿ ಎನ್ನುವಂತೆ ಮೈಸೂರು ಜಿಲ್ಲಾಸ್ಪತ್ರೆ ಹಾಗೂ ಕೆ. ಆರ್. ಆಸ್ಪತ್ರೆಯಲ್ಲಿ ಹಾಸಿಗೆಗಳು ಭರ್ತಿಯಾಗಿದ್ದು, ಎರಡೂ ಕಡೆಗಳಲ್ಲಿ ವೆಂಟಿಲೇಟರ್‌ಗಳು ಸಹ ಖಾಲಿ ಇಲ್ಲದಂತಾಗಿದೆ.

ಮೈಸೂರು; ಅಘೋಷಿತ ಬಂದ್, ಪ್ರಮುಖ ರಸ್ತೆಗಳ ಅಂಗಡಿಗೆ ಬೀಗ ಮೈಸೂರು; ಅಘೋಷಿತ ಬಂದ್, ಪ್ರಮುಖ ರಸ್ತೆಗಳ ಅಂಗಡಿಗೆ ಬೀಗ

700 New COVID 19 Cases Reported In Mysuru District

ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ 405 ಮಂದಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಎಲ್ಲಾ ಬಗೆಯ 70 ವೆಂಟಿಲೇಟರ್‌ಗಳು ಭರ್ತಿಯಾಗಿದೆ. ಪ್ರಮುಖವಾಗಿ ನಗರದ ಜಿಲ್ಲಾಸ್ಪತ್ರೆ, ಕೆ‌. ಆರ್. ಆಸ್ಪತ್ರೆ ಹಾಗೂ‌ ಟ್ರಾಮಾ ಸೆಂಟರ್ ಸೇರಿದಂತೆ ಒಟ್ಟು 54 ಐಸಿಯುಗಳು ಫುಲ್ ಆಗಿವೆ.

ಮೈಸೂರು ಡಿಎಚ್‍ಒ ಡಾ.ಟಿ ಅಮರನಾಥ್‍ಗೆ ಕೊರೊನಾ ದೃಢಮೈಸೂರು ಡಿಎಚ್‍ಒ ಡಾ.ಟಿ ಅಮರನಾಥ್‍ಗೆ ಕೊರೊನಾ ದೃಢ

ಕೆ. ಆರ್. ಆಸ್ಪತ್ರೆಯಲ್ಲಿ ಹಾಸಿಗೆ, ಐಸಿಯು ಹಾಗೂ ವೆಂಟಿಲೇಟರ್ ಭರ್ತಿ ಆಗಿರುವ ಸಂಬಂಧ ಆಸ್ಪತ್ರೆಯ ಹೊರಗೆ ಬೆಡ್ ಹಾಗೂ ವೆಂಟಿಲೇಟರ್ ಖಾಲಿ ಇಲ್ಲ ಎಂಬ ಬೋರ್ಡ್ ಹಾಕಲಾಗಿದೆ.

ಭಾನುವಾರ ಮೈಸೂರು ಜಿಲ್ಲೆಯಲ್ಲಿ 700 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 66,692ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5040.

English summary
700 new COVID 19 cases reported in Mysuru on April 25th, 2021. Total cases number jumped to 66,692. Active case number 5040.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X