ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂತ್ರಸ್ತರಿಗೆ ಪಾಲಿಕೆ ಸದಸ್ಯರಿಂದ 6.50 ಲಕ್ಷ ನೀಡಲು ನಿರ್ಧಾರ

|
Google Oneindia Kannada News

ಮೈಸೂರು, ಆಗಸ್ಟ್ 14 : ಪ್ರವಾಹದಲ್ಲಿ ನಲುಗುತ್ತಿರುವ ನಿರಾಶ್ರಿತರ ನೆರವಿಗೆ ಮೈಸೂರು ನಾಗರೀಕರು, ಸಂಘ ಸಂಸ್ಥೆ, ಮಠ -ಮಾನ್ಯಗಳು ಈಗಾಗಲೇ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದು, ಮೈಸೂರಿನ ಮಹಾನಗರ ಪಾಲಿಕೆ ಸದಸ್ಯರು ಸಹ ತಮ್ಮ ಅಳಿಲು ಸೇವೆಗೆ ಮುಂದಡಿಯಿಟ್ಟಿದ್ದಾರೆ.

ಮತ್ತೆ ಕುಮಾರಣ್ಣನ ಔದಾರ್ಯ: ಸಂತ್ರಸ್ತರಿಗೆ ಮಧುರೈಯಿಂದ 10 ಸಾವಿರ ಬೆಡ್
ಮೈಸೂರು ಮಹಾನಗರ ಪಾಲಿಕೆ ಸದಸ್ಯರು ತಲಾ 10 ಸಾವಿರ ರೂಗಳಂತೆ 6.50 ಲಕ್ಷ ರೂಗಳನ್ನು ದೇಣಿಗೆ ನೀಡಲು ನಿರ್ಧರಿಸಿದ್ದು, ಆಗಸ್ಟ್ 16ರಂದು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಕೂಡ ನಿರ್ಧರಿಸಿದ್ದಾರೆ.

65 Mysuru corporaters giving 6.50 lakh money to flood victims

ಮಹಾಪೌರರಾದ ಪುಷ್ಪಲತಾ ಜಗನ್ನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 10 ಸಾವಿರ ದೇಣಿಗೆ ನೀಡಲು ಸದಸ್ಯರು ಒಮ್ಮತದ ನಿರ್ಧಾರಕ್ಕೆ ಬಂದರು. ತಮ್ಮ ಹಣದ ಜೊತೆ ಸಾರ್ವಜನಿಕರಿಂದಲೂ ದೇಣಿಗೆ ಸಂಗ್ರಹಿಸಲು ಮುಂದಾಗಿರುವ ಸದಸ್ಯರು 65 ಜನರ ಮೂರು ತಂಡಗಳಾಗಿ ನಗರದ ಸಂತೇಪೇಟೆ, ದೇವರಾಜ ಅರಸ್ ರಸ್ತೆ, ಮಾರುಕಟ್ಟೆ, ಸಯ್ಯಾಜಿರಾವ್ ರಸ್ತೆ ಹೀಗೆ ಇನ್ನಿತರ ಪ್ರಮುಖ ರಸ್ತೆಗಳು ಹಾಗೂ ಗಣ್ಯ ವ್ಯಕ್ತಿಗಳ ಬಳಿಗೆ ತೆರಳಿ ಹಣ ಸಂಗ್ರಹಿಸಲು ತೀರ್ಮಾನ ಕೈಗೊಂಡರು.

English summary
65 Mysuru corporater are giving 6.50 lakh money to flood victims. Although they are planning to collect money from public's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X