ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಷಪ್ರಸಾದ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಪ್ರತಿಭಟನೆ

|
Google Oneindia Kannada News

ಮೈಸೂರು, ಜನವರಿ 2: ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ನಡೆದ ವಿಷ ಪ್ರಸಾದ ದುರಂತದಲ್ಲಿ ಅಸ್ವಸ್ಥರಾಗಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರ ಪೈಕಿ ಗುಣಮುಖರಾಗಿರುವ ಆರು ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಜೆಎಸ್ಎಸ್ ಆಸ್ಪತ್ರೆ , ಅಪೊಲೊ, ಕಾವೇರಿ ಆಸ್ಪತ್ರೆಯಿಂದ ತಲಾ ಒಬ್ಬರು, ಡಿಆರ್ ಎಂ ಆಸ್ಪತ್ರೆಯಿಂದ ಮೂವರು ಹೊಸ ವರ್ಷದ ದಿನ ಬಿಡುಗಡೆಯಾಗಿದ್ದಾರೆ.

ವಿಷಪ್ರಸಾದ ಆರೋಪಿಗಳಿಂದ ಜಾಮೀನು ಪಡೆದುಕೊಳ್ಳಲು ಪ್ರಯತ್ನವಿಷಪ್ರಸಾದ ಆರೋಪಿಗಳಿಂದ ಜಾಮೀನು ಪಡೆದುಕೊಳ್ಳಲು ಪ್ರಯತ್ನ

ಹನೂರು ತಾಲೂಕಿನ ಎಂಜಿ ದೊಡ್ಡಿಯವರಾದ ಮಲ್ಲಿಗೆ, ಪಳನಿಯಮ್ಮ, ವಡ್ಡರ ದೊಡ್ಡಿ ಯವರಾದ ಕಂದಸ್ವಾಮಿ, ಮಹಾದೇವಿ ಹೊಸ್ತೂರು ಗ್ರಾಮದವರಾದ ಜಯಲಕ್ಷ್ಮೀ ಹಾಗೂ ಕೆಂಪರಾಜಮ್ಮ ಅವರು ಡಿಸ್ಚಾರ್ಜ್ ಆಗಿದ್ದಾರೆ.

6 sulvadi victims are discharged from various hospital

ಉಳಿದಂತೆ ಜೆಎಸ್ಎಸ್ ಆಸ್ಪತ್ರೆಯಲ್ಲಿ ಒಬ್ಬರು, ಸುಯೋಗ ಆಸ್ಪತ್ರೆಯಲ್ಲಿ ಇಬ್ಬರು , ಕಾವೇರಿ ಆಸ್ಪತ್ರೆಯಲ್ಲಿ ಇಬ್ಬರು, ಕೊಲಂಬಿಯಾ ಆಸ್ಪತ್ರೆಯಲ್ಲಿ ಒಬ್ಬರು, ನಾರಾಯಣ ಹೃದಯಾಲಯದಲ್ಲಿ ಮೂವರು ಸೇರಿ ಒಂಬತ್ತು ಮಂದಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರಲ್ಲಿ ಒಬ್ಬರು ವೆಂಟಿಲೇಟರ್ ನಲ್ಲಿ ಇಬ್ಬರು ಐಸಿಯುನಲ್ಲಿ ಇದ್ದಾರೆ. ಈ ದುರಂತದಲ್ಲಿ 17 ಮಂದಿ ಸಾವಿಗೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಕರಣದ ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ,ಅಂಬಿಕಾ,ದೊಡ್ಡಯ್ಯ, ಮತ್ತು ಮಾದೇಶ್ ರನ್ನು ಜೈಲಿಗಟ್ಟಲಾಗಿದೆ.

ವಿಷಪ್ರಸಾದ: ಸಂತ್ರಸ್ತರಾದ ಕುಟುಂಬಕ್ಕೆ ಧೈರ್ಯ ತುಂಬಿದ ಸಿಎಂ
ಇತ್ತ ಪ್ರಕರಣದಲ್ಲಿ ಭಾಗಿಯಾದ ಪಾತಕಿಗಳಿಗೆ ಜಾಮೀನು ನೀಡದೆ ಗಲ್ಲು ಶಿಕ್ಷೆ ನೀಡುವಂತೆ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ನಗರದ ಕೋರ್ಟ್ ಎದುರಿನ‌ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, 17 ಅಮಾಯಕ ಜೀವಗಳ ಸಾವಿಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ವಿವಿಧ ಘೋಷಣೆ‌ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಕಿಚ್ಚುಗುತ್ತಿ ಮಾರಮ್ಮ ದೇಗುಲ ಸರ್ಕಾರಕ್ಕೊಪ್ಪಿಸಲು ಟ್ರಸ್ಟಿಗಳ ಒಪ್ಪಿಗೆ ಕಿಚ್ಚುಗುತ್ತಿ ಮಾರಮ್ಮ ದೇಗುಲ ಸರ್ಕಾರಕ್ಕೊಪ್ಪಿಸಲು ಟ್ರಸ್ಟಿಗಳ ಒಪ್ಪಿಗೆ

ಅಲ್ಲದೇ ಆರೋಪಿಗಳ ಆಸ್ತಿಯನ್ನ ಮುಟ್ಟುಗೋಲು ಹಾಕಿ ಮೃತರ ಕುಟುಂಬಕ್ಕೆ ನೀಡುವಂತೆ ಆಗ್ರಹಿಸಿದ್ದಾರೆ. ಆರೋಪಿಗಳು ಪ್ರಭಾವಿಗಳಾಗಿದ್ದು, ಸಾಕ್ಷಿಗಳನ್ನ ನಾಶ ಮಾಡುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

English summary
6 sulvadi victims are discharged from various hospital at mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X