ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿ ಕೆ.ಸೆಟ್ ಪರೀಕ್ಷೆಯಲ್ಲಿ 5,627 ಅಭ್ಯರ್ಥಿಗಳಿಗೆ ಅರ್ಹತೆ

|
Google Oneindia Kannada News

ಮೈಸೂರು, ಮಾರ್ಚ್ 29 : ಮೈಸೂರು ವಿಶ್ವವಿದ್ಯಾನಿಲಯ ನಡೆಸಿದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ( ಕೆ. ಸೆಟ್ )ನಲ್ಲಿ 5,627 ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರಾಗುವ ಅರ್ಹತೆ ಪಡೆದುಕೊಂಡಿದ್ದಾರೆ

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮೈಸೂರು ವಿಶ್ವವಿದ್ಯಾಲಯ 2018ರ ಡಿಸೆಂಬರ್‌ನಲ್ಲಿ ನಡೆಸಿದ್ದ ಕೆ-ಸೆಟ್ ಫಲಿತಾಂಶ ಪ್ರಕಟಿಸಿದ್ದು, ಶೇ 6.96ರಷ್ಟು ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಪಡೆದುಕೊಂಡಿದ್ದಾರೆ.

ಪ್ರೊ.ಮಾನೆ ವಿರುದ್ಧದ ಕಿರುಕುಳ ಪ್ರಕರಣ: ಹೈಕೋರ್ಟ್ ನಿಂದ ಬಂತು ಖಡಕ್ ಆದೇಶ ಪ್ರೊ.ಮಾನೆ ವಿರುದ್ಧದ ಕಿರುಕುಳ ಪ್ರಕರಣ: ಹೈಕೋರ್ಟ್ ನಿಂದ ಬಂತು ಖಡಕ್ ಆದೇಶ

3,154 ಪುರುಷರು ಮತ್ತು 2,473 ಮಹಿಳೆಯರು ತೇರ್ಗಡೆ ಹೊಂದಿದ್ದಾರೆ. ಫಲಿತಾಂಶದ ಕುರಿತು ವೆಬ್‌ಸೈಟ್‌ನಲ್ಲಿ ಮಾರ್ಚ್‌ 30ರಂದು ಲಭ್ಯವಾಗಲಿದೆ ಎಂದು ಕೆ-ಸೆಟ್‌ ಮುಖ್ಯಸ್ಥರೂ ಆಗಿರುವ ಮೈಸೂರು ವಿ.ವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ತಿಳಿಸಿದರು.

2018ರ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆದಿತ್ತು

2018ರ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆದಿತ್ತು

2018ರ ಡಿಸೆಂಬರ್‌ನಲ್ಲಿ ರಾಜ್ಯದ 11 ಕೇಂದ್ರಗಳಲ್ಲಿ 39 ವಿಷಯಗಳಿಗೆ ಪರೀಕ್ಷೆ ನಡೆಸಲಾಗಿತ್ತು. 94,840 ಮಂದಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. 80,758 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಮಾಹಿತಿ ನೀಡಿದರು. ವಾಣಿಜ್ಯ ವಿಷಯದಲ್ಲಿ ಅತಿಹೆಚ್ಚು ಮಂದಿ ಅಂದರೆ 791 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಕನ್ನಡ ವಿಷಯದಲ್ಲಿ 627, ಜೀವವಿಜ್ಞಾನದಲ್ಲಿ 571 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅಂಗವಿಕಲರ ಕೋಟಾದಡಿ ಒಟ್ಟು 113 ಮಂದಿ ಅರ್ಹತೆ ಪಡೆದುಕೊಂಡಿದ್ದಾರೆ ಎಂದರು.

ಕೇಂದ್ರವಾರು ಫಲಿತಾಂಶದಲ್ಲಿ ಬೆಂಗಳೂರು ಪ್ರಥಮ

ಕೇಂದ್ರವಾರು ಫಲಿತಾಂಶದಲ್ಲಿ ಬೆಂಗಳೂರು ಪ್ರಥಮ

ಕೇಂದ್ರವಾರು ಫಲಿತಾಂಶದಲ್ಲಿ ಬೆಂಗಳೂರು ಪ್ರಥಮ ಸ್ಥಾನ ಪಡೆದುಕೊಂಡಿದೆ. 12,902 ಅಭ್ಯರ್ಥಿಗಳಲ್ಲಿ 1,249 ಮಂದಿ ತೇರ್ಗಡೆ ಹೊಂದಿದ್ದು, ಶೇ 9.68ರಷ್ಟು ಸಾಧನೆ ಮೂಡಿಬಂದಿದೆ. ಮಂಗಳೂರು ಮತ್ತು ಮೈಸೂರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡಿವೆ. ಈ ಬಾರಿ ಮೈಸೂರು ಕೇಂದ್ರದಿಂದ ಅತಿಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದರು. ಒಟ್ಟು 18,359 ಮಂದಿ ಅರ್ಜಿ ಸಲ್ಲಿಸಿದ್ದರು. 16,368 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 1,189 ಮಂದಿ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಮೈಸೂರು ಮುಕ್ತ ವಿವಿಗೆ ಮರುಜೀವ: ಹೊಸ ಕೋರ್ಸ್ ಗೆ ಅರ್ಜಿ ಆಹ್ವಾನ ಮೈಸೂರು ಮುಕ್ತ ವಿವಿಗೆ ಮರುಜೀವ: ಹೊಸ ಕೋರ್ಸ್ ಗೆ ಅರ್ಜಿ ಆಹ್ವಾನ

ಒಟ್ಟಾರೆ ಫಲಿತಾಂಶದಲ್ಲಿ ಹೆಚ್ಚಳ

ಒಟ್ಟಾರೆ ಫಲಿತಾಂಶದಲ್ಲಿ ಹೆಚ್ಚಳ

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಒಟ್ಟಾರೆ ಫಲಿತಾಂಶದಲ್ಲಿ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಬಾರಿ ಇಬ್ಬರು ತೃತೀಯಲಿಂಗಿಗಳು ಪರೀಕ್ಷೆಗೆ ಅರ್ಜಿ ಹಾಕಿದ್ದು, ಒಬ್ಬರು ಪರೀಕ್ಷೆ ಎದುರಿಸಿದ್ದಾರೆ. ಆದರೆ ಅವರು ಅರ್ಹತೆ ಪಡೆದುಕೊಂಡಿಲ್ಲ ಎಂದು ವಿವರಿಸಿದರು.

ಮೂರು ತಿಂಗಳಲ್ಲಿ ಫಲಿತಾಂಶ ಪ್ರಕಟ

ಮೂರು ತಿಂಗಳಲ್ಲಿ ಫಲಿತಾಂಶ ಪ್ರಕಟ

2018ರ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆದಿತ್ತು. ಮಾರ್ಚ್‌ ಮುಗಿಯುವುದರೊಳಗೆ ಫಲಿತಾಂಶ ಪ್ರಕಟಿಸಿದ್ದೇವೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಿದ್ದು ಇದೇ ಮೊದಲು. ಈ ಹಿಂದಿನ ವರ್ಷಗಳಲ್ಲಿ ಐದರಿಂದ ಆರು ತಿಂಗಳುಗಳನ್ನು ತೆಗೆದುಕೊಂಡಿದ್ದೆವು ಎಂದರು.

ಮೈಸೂರು ವಿವಿಯಲ್ಲಿ ಚನ್ನಪಟ್ಟಣಗೊಂಬೆ ಪರಿಣಿತಿ ಕೇಂದ್ರ ಮೈಸೂರು ವಿವಿಯಲ್ಲಿ ಚನ್ನಪಟ್ಟಣಗೊಂಬೆ ಪರಿಣಿತಿ ಕೇಂದ್ರ

English summary
5,627 candidates qualified as Assistant Professor in Karnataka State Assistant Professor Eligibility Test (KSet) conducted by Mysuru University
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X