• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ ಮಹೋತ್ಸವದಲ್ಲಿ 250 ತಳಿಯ 500 ಶ್ವಾನಗಳ ಪ್ರದರ್ಶನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್‌, 03: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರು ವಿಶ್ವವಿದ್ಯಾಲಯ ಮೈದಾನದಲ್ಲಿ ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಪ್ರದರ್ಶನಕ್ಕೆ ಆಗಮಿಸಿದ್ದ ಶ್ವಾನಗಳನ್ನು ಕಂಡ ಜನರು ಕುತೂಹಲದಿಂದ ವೀಕ್ಷಿಸಿ ಪ್ರಪಂಚದಲ್ಲಿ ಇಂತಹ ತಳಿಯ ನಾಯಿಗಳಿವೆಯೇ ಎಂದು ಆಶ್ಚರ್ಯಪಟ್ಟರು. ವಿಶೇಷವಾಗಿ ಚಾರ್ಲಿ 777 ಚಲನಚಿತ್ರದ ಶ್ವಾನ ಭಾಗಿಯಾಗಿ ಎಲ್ಲರ ಗಮನ ಸೆಳೆಯಿತು. ಹಾಗೂ ಮೈಸೂರು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಶ್ವಾನಗಳು ಬಂದಿದ್ದವು.

ದೆಹಲಿ, ಮುಂಬೈ, ಕೊಲ್ಕತ್ತಾ, ಗೋವಾ, ಗುಜರಾತ್ ಭಾಗದಿಂದ ವಿಶೇಷ ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಶ್ವಾನ ಪ್ರದರ್ಶನಕ್ಕೆ ಬಂದಿದ್ದವರು ಎತ್ತರದ ಸಿಂಹ, ಹುಲಿಯಂತಿರುವ ಶ್ವಾನಗಳಿಂದ ಹಿಡಿದು ಸಣ್ಣ ಗಾತ್ರದ ಕ್ಯೂಟ್ ಪಪ್ಪಿಗಳನ್ನೂ ವೀಕ್ಷಣೆ ಮಾಡಿದರು. ಮೇಳದಲ್ಲಿ ಸುಮಾರು 250 ತಳಿಯ 500 ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಪರ್ಷಿಯನ್ ಬೆಕ್ಕು ಸೇರಿದಂತೆ ಅನೇಕ ಜಾತಿಯ ಬೆಕ್ಕುಗಳು ಪ್ರದರ್ಶನದಲ್ಲಿ ಭಾಗವಹಿಸಿ ನೋಡುಗರ ಮನವನ್ನು ಸೆಳೆದವು. ಕೆಲ ಶ್ವಾನಗಳು ತಮ್ಮ ತುಂಟಾಟದ ಮೂಲಕ ಜನರಿಗೆ ಮನಸ್ಸಿಗೆ ಮುದ ನೀಡಿ ನೆರೆದಿದ್ದವರನ್ನು ರಂಜಿಸಿದವು.

ರೈತ ದಸರಾ 2022: ಕೆಸರು ಗದ್ದೆಯಲ್ಲಿ ಬಿದ್ದರು, ಕಾಲು‌ಕಟ್ಟಿಕೊಂಡು ಓಡಿ ಗೆದ್ದರುರೈತ ದಸರಾ 2022: ಕೆಸರು ಗದ್ದೆಯಲ್ಲಿ ಬಿದ್ದರು, ಕಾಲು‌ಕಟ್ಟಿಕೊಂಡು ಓಡಿ ಗೆದ್ದರು

ಮೇಳದಲ್ಲಿ ಕಂಡ ಶ್ವಾನ ತಳಿಗಳಿವು

ಮೇಳದಲ್ಲಿ ಕಂಡ ಶ್ವಾನ ತಳಿಗಳಿವು

ಶ್ವಾನಗಳು ಇತರ ತಳಿಯ ನಾಯಿಗಳನ್ನು ಕಂಡು ಹೊಸ ಸ್ನೇಹಿತನನ್ನು ಪರಿಚಯ ಮಾಡಿಕೊಳ್ಳಲು ಹಾಗೂ ಹಳೆ ಸ್ನೇಹಿತರನ್ನು ಭೇಟಿ ಮಾಡಲು ಪ್ರದರ್ಶನ ವೇದಿಕೆ ಆಯಿತು. ಪಗ್, ಜರ್ಮನ್ ಶಪರ್ಡ್, ಗ್ರೇಟ್ ಡೇನ್, ಗೋಲ್ಡನ್ ರೆಟ್ರಿವರ್, ಮುಧೋಳ, ರಾಟ್ ವಿಲ್ಲರ್, ಬಾಕ್ಸರ್, ಬ್ರಿಟೀಷ್‌ ಬುಲ್ಡಾಗ್, ಪ್ರೆಂಚ್ ಬುಲ್, ಡಾಗ, ಮಲ್ಟಿ ಶ್, ಚೌ ಚೌ, ಪಿಟ್ ಬುಲ್, ಅಮೆರಿಕನ್ ಬುಲ್ಲಿ, ಸೈಬೀರಿಯನ್ ಹಸ್ಕಿ ಹೀಗೆ ವಿವಿಧ ತಳಿಗಳ ಶ್ವಾನಗಳು ಪ್ರದರ್ಶನದಲ್ಲಿ ಪ್ರಮುಖ್ಯ ಆಕರ್ಷಣೆ ಆಗಿದ್ದವು.

ಆರನೇ ಬಾರಿಗೆ ದೇಶದಲ್ಲೇ ಅತಿಹೆಚ್ಚು ಸ್ವಚ್ಛತೆ

ಆರನೇ ಬಾರಿಗೆ ದೇಶದಲ್ಲೇ ಅತಿಹೆಚ್ಚು ಸ್ವಚ್ಛತೆ

ಇನ್ನು 2022ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಶ್ರೇಣಿ ಪಟ್ಟಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಿಡುಗಡೆ ಮಾಡಿದ್ದರು. ಸತತ ಆರನೇ ಬಾರಿಗೆ ದೇಶದಲ್ಲೇ ಅತಿಹೆಚ್ಚು ಸ್ವಚ್ಛತೆ ಕಾಯ್ದುಕೊಂಡಿರುವ ನಗರವಾಗಿ ಮಧ್ಯಪ್ರದೇಶದ ಇಂದೋರ್ ಹೊರ ಹೊಮ್ಮಿದೆ. ಸಾಂಸ್ಕೃತಿಕ ನಗರಿ ಮೈಸೂರು 8 ಸ್ಥಾನ ಪಡೆದಿದೆ. ಗುಜರಾತ್‌ ಸೂರತ್ ಸತತ 3ನೇ ಬಾರಿಗೆ 2ನೇ ಸ್ಥಾನ ಕಾಯ್ದುಕೊಂಡಿರುವುದು ಕೂಡ ಮತ್ತೊಂದು ವಿಶೇಷವಾಗಿದೆ. ಆಂಧ್ರಪ್ರದೇಶದ ವಿಜಯವಾಡವನ್ನು ಹಿಂದಿಕ್ಕಿರುವ ಮುಂಬಯಿ ಆಗ್ರ 3ನೇ ಸ್ಥಾನಕ್ಕೇರಿದೆ. ವಿಶ್ವದ ಅತಿ ಶ್ರೀಮಂತ ದೇವರು ನೆಲೆಸಿರುವ ತಿರುಪತಿಗೆ 7ನೇ ಸ್ವಚ್ಛನಗರ ಸ್ಥಾನ ದಕ್ಕಿದೆ. 2020ರಲ್ಲಿ 3ರಿಂದ 8 ಲಕ್ಷ ಜನಸಂಖ್ಯೆಯ ನಗರಗಳ ಪೈಕಿ ದೇಶದಲ್ಲೇ ನಂ.1 ಸ್ವಚ್ಛನಗರ ಎಂಬ ಖ್ಯಾತಿ ಪಡೆದಿದ್ದ ಅರಮನೆ ನಗರಿ 'ಮೈಸೂರು' ಇದೀಗ ಅಗ್ರ 8ನೇ ಸ್ಥಾನ ಪಡೆದಿದೆ.

 ಮೈಸೂರಿಗೆ ಮತ್ತೆ ಸ್ವಚ್ಛತೆ ನಗರ ಎಂಬ ಗೌರವ

ಮೈಸೂರಿಗೆ ಮತ್ತೆ ಸ್ವಚ್ಛತೆ ನಗರ ಎಂಬ ಗೌರವ

ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೆ ಸ್ವಚ್ಛತೆ ನಗರ ಎಂಬ ಗೌರವ ಲಭಿಸಿದೆ. ಪೌರಕಾರ್ಮಿಕರು, ಅಧಿಕಾರಿಗಳ ಶ್ರಮ ಹಾಗೂ ಸಾರ್ವಜನಿಕರ ಸಹಕಾರದಿಂದ ಸ್ವಚ್ಛ ಸರ್ವೇಕ್ಷಣೆಯಲ್ಲಿ 3 ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೈಸೂರು ನಗರ ಎರಡನೇ ಸ್ಥಾನ ಪಡೆದಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಹೆಚ್.ವಿ‌.ರಾಜೀವ್ ಸ್ನೇಹಬಳಗ ಹಾಗೂ ಇತರೆ ಸಂಘಟನೆಗಳು ಹಮ್ಮಿಕೊಂಡಿದ್ದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಮೈಸೂರು ನಗರ ಪ್ರಥಮ ಸ್ಥಾನಕ್ಕೇರಲಿದೆ. ಪೌರಕಾರ್ಮಿಕರು ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ ಮೂರು ಗಂಟೆಯವರೆಗೆ ಸ್ವಚ್ಚತಾ ಕಾರ್ಯ ಮಾಡುತ್ತಿದ್ದಾರೆ. ಇದರ ಜೊತೆಗೆ ವಿವಿಧ ಸಂಘಟನೆಗಳು ಕೂಡ ಸ್ವಚ್ಚತಾ ಕಾರ್ಯಕ್ಕೆ ಕೈಜೋಡಿಸಿದ್ದು, ಅವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದರು.

ಗಮನ ಸೆಳೆದ ಮೈಸೂರು

ಗಮನ ಸೆಳೆದ ಮೈಸೂರು

ಇನ್ನು ಕಳೆದ ಬಾರಿ 12ನೇ ಸ್ಥಾನಕ್ಕೆ ಕುಸಿದಿದ್ದ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು, ಈ ಬಾರಿ 8ನೇ ಸ್ಥಾನಕ್ಕೆ ಏರುವ ಮೂಲಕ ಗಮನ ಸೆಳೆದಿದೆ. ಹಾಗೆಯೇ ಶಿವಮೊಗ್ಗವು 'ಅತ್ಯಂತ ವೇಗವಾಗಿ ಚಲಿಸುತ್ತಿರುವ ನಗರ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2022ರ ಸ್ವಚ್ಛ ನಗರಿಗಳ ನಗರ ಸ್ಥಳೀಯ ಸಂಸ್ಥೆಗಳ ಶ್ರೇಯಾಂಕದ ಸ್ವಚ್ಛ ಸರ್ವೇಕ್ಷಣ ಪಟ್ಟಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಿಡುಗಡೆ ಮಾಡಿದ್ದರು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಎಲ್ಲ ಪುರಸ್ಕೃತ ನಗರಗಳ ಪ್ರತಿನಿಧಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ನವಿ ಮುಂಬಯಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ.

ದೇಶದ ಅತ್ಯಂತ ಪ್ರಭಾವಶಾಲಿ ಜನರು ವಾಸಿಸುತ್ತಿರುವ ಎನ್‌ಡಿಎಂಸಿ, 2021ರಲ್ಲಿ ಐದನೇ ಸ್ಥಾನದಿಂದ ಈ ಬಾರಿ 9ನೇ ಸ್ಥಾನಕ್ಕೆ ಕುಸಿತ ಕಂಡಿದೆ. 2020ರಲ್ಲಿ ಅದು ಎಂಟನೇ ಸ್ಥಾನದಲ್ಲಿತ್ತು. ಕಳೆದ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದ ವಿಜಯವಾಡ, ಈ ಬಾರಿ ಐದನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಎರಡು ವರ್ಷಗಳಲ್ಲಿ ಟಾಪ್ ಹತ್ತರಲ್ಲಿಯೂ ಸ್ಥಾನ ಪಡೆದುಕೊಳ್ಳದ ವಿಶಾಖಪಟ್ಟಣ, ಈ ವರ್ಷ ನಾಲ್ಕನೇ ಶ್ರೇಯಾಂಕ ಪಡೆದು ಗಮನ ಸೆಳೆದಿದೆ. ಇನ್ನು ಭೋಪಾಲ್, ತಿರುಪತಿ, ಮೈಸೂರು, ಎನ್‌ಡಿಎಂಸಿ ಮತ್ತು ಅಂಬಿಕಾಪುರ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. 2021ರಲ್ಲಿ ಕೊನೆಯ ಮೂರು ಸ್ಥಾನಗಳಲ್ಲಿದ್ದ ಪುಣೆ, ನೋಯ್ಡಾ ಮತ್ತು ಉಜ್ಜಯನಿ ನಗರಗಳು ಈ ಬಾರಿ ಟಾಪ್ 10ರಿಂದ ಸ್ಥಾನ ಕಳೆದುಕೊಂಡಿವೆ.

English summary
dog show organized at Mysuru University Ground, dogs of different breeds attracted attention, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X