ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಚರಾಜ್ಯದ ಚುನಾವಣೆಗೆ ಮೈಸೂರಿನಿಂದ ಮಸಿ ಬಳಕೆ!

By ಯಶಸ್ವಿನಿ ಎಂ.ಕೆ.
|
Google Oneindia Kannada News

ಮೈಸೂರು, ಜನವರಿ 31 : ದೇಶದಲ್ಲಿ ನಡೆಯುತ್ತಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಮೈಸೂರಿನಿಂದಲೇ ಶಾಯಿ ವಿತರಣೆಯಾಗುತ್ತಿದೆ. ಉತ್ತರ ಪ್ರದೇಶ ಒಂದಕ್ಕೆ 3.30 ಲಕ್ಷ ಅಳಿಸಲಾಗದ ಮಸಿ ಬಾಟಲ್ ಗಳು ಪೂರೈಕೆಯಾಗಿದೆ ಎನ್ನಲಾಗಿದೆ.

ಪಂಚರಾಜ್ಯಗಳಾದ ಉತ್ತರಪ್ರದೇಶ, ಮಣಿಪುರ, ಗೋವಾ, ಪಂಜಾಬ್, ಉತ್ತರಾಖಂಡ್ ವಿಧಾನಸಭಾ ಚುನಾವಣೆ ಮತದಾರರ ಕೈ ಬೆರಳಿಗೆ ಹಾಕುವ ಅಳಿಸಲಾಗದ ಶಾಯಿಯನ್ನು ಮೈಸೂರಿನ ಮೈಲ್ಯಾಕ್(ಮೈಸೂರು ಪೆಯಿಂಟ್ ಮತ್ತು ವಾರ್ನಿಷ್ ಲಿಮಿಟೆಡ್) ನಿಂದ ಪೂರೈಕೆ ಮಾಡಲಾಗುತ್ತಿದೆ. ಚುನಾವಣಾ ಆಯೋಗದಿಂದ ಇನ್ನೂ 2 ಲಕ್ಷ ಬಾಟಲ್ ಗಳಿಗೆ ಬೇಡಿಕೆ ಬಂದಿದ್ದು ಅದನ್ನು ಕೂಡ ಪೂರೈಕೆ ಮಾಡಲಾಗುತ್ತಿದೆ.[ಚಿತ್ರಗಳಲ್ಲಿ : ಬ್ಯಾಂಕುಗಳಲ್ಲಿ ಬೆರಳುಗಳಿಗೆ ಅಂಟಿದ ಮಸಿ]

'ಮೈಲಾಕ್ ಸಂಸ್ಥೆ 6.5 ಕೋಟಿ ರೂ. ವ್ಯವಹಾರ ನಡೆಸಿದ್ದು, ಯಾವುದೇ ಕ್ಷಣದಲ್ಲಿ ಬೇಡಿಕೆ ಬಂದರೂ ಶಾಯಿ ಪೂರೈಕೆ ಮಾಡಲು ನಾವು ಸಿದ್ದರಿದ್ದೇವೆ. ಮೈಲ್ಯಾಕ್ ಅಳಿಸಲಾಗದ ಶಾಯಿ ತಯಾರಿಸುವ ದೇಶದ ಏಕೈಕ ಸಂಸ್ಥೆಯಾಗಿದ್ದು, ದೇಶ ಅಲ್ಲದೆ ವಿಶ್ವದ ಇತರ ರಾಷ್ಟ್ರಗಳಿಗೂ ಶಾಯಿ ಪೂರೈಸುತ್ತಾ ಬಂದಿದೆ. ಇದರ ಜೊತೆಯಲ್ಲಿ ಪಂಚ ರಾಜ್ಯಗಳಿಗೂ ಶಾಯಿ ಬಾಟಲ್ ರವಾನೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ಮೈಲಾಕ್ ತಿಳಿಸಿದರು.

 ವಿಶ್ವ ವಿಖ್ಯಾತ ಮೈಸೂರು

ವಿಶ್ವ ವಿಖ್ಯಾತ ಮೈಸೂರು

ಮೈಸೂರಿನ ಹೆಸರು ಜಗದ್ವಿಖ್ಯಾತ. ಸದಾ ಒಂದಿಲ್ಲೊಂದು ರೀತಿಯಲ್ಲಿ ಹೆಸರು ಮಾಡುತ್ತಲೇ ಇರುತ್ತದೆ. ಹಲವಾರು ಪ್ರವಾಸಿತಾಣಗಳನ್ನು ಹೊಂದಿರುವ ಮೈಸೂರು ಪ್ರವಾಸಿಗರ ಆಕರ್ಷಕ ತಾಣವೂ ಹೌದು. ಜನತೆ ಬಳಸುವ ನೋಟುಗಳ ಮುದ್ರಣವೂ ಮೈಸೂರಿನಲ್ಲಿಯೇ ಆಗುತ್ತದೆ ಎಂಬ ಹೆಗ್ಗಳಿಕೆ ಒಂದೆಡೆಯಾದರೆ, ತಮ್ಮ ಹಕ್ಕು ಚಲಾಯಿಸಿದ್ದೇವೆ ಎಂದು ತೋರಿಸಲು ಗುರುತಿಗಾಗಿ ಬಳಸುವ ಶಾಯಿಯೂ ಇಲ್ಲಿಯೇ ಸಿದ್ಧಗೊಳ್ಳುತ್ತದೆ. ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶಕ್ಕೆ 5.30 ಲಕ್ಷ ಅಳಿಸಲಾಗದ ಶಾಯಿಯ ಬಾಟಲಿಗಳನ್ನು ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆಯಿಂದ ಪೂರೈಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

 ಲಕ್ಷಗಟ್ಟಲೆ ಮಸಿ ಬಾಟಲಿಗಳು

ಲಕ್ಷಗಟ್ಟಲೆ ಮಸಿ ಬಾಟಲಿಗಳು

ಫೆಬ್ರವರಿ 4 ರಿಂದ ಮತ್ತು ಮಾರ್ಚ್ 11 ವರೆಗೆ ನಡೆಯಲಿರುವ ಉತ್ತರಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಕಾಂಡ ವಿಧಾನಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ಮತದಾರರ ಬೆರಳಿಗೆ ಹಾಕುವ ಶಾಯಿಯನ್ನ ಪೂರೈಸುವಂತೆ ಚುನಾವಣಾ ಆಯೋಗ ಕಳೆದ ಮೂರು ತಿಂಗಳ ಹಿಂದೆಯೇ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಟ್ ಗೆ 4.18 ಲಕ್ಷ ಶಾಯಿ ಬಾಟಲ್ ಗಳನ್ನು ಪೂರೈಸುವಂತೆ ಕೇಳಿತ್ತು.
ಈ ಹಿನ್ನೆಲೆ ಕಳೆದ ಒಂದು ತಿಂಗಳಿಂದಲೇ ಮೈಲಾಕ್ ನಲ್ಲಿ 50 ಮಂದಿ ಖಾಯಂ ಮತ್ತು 100 ಮಂದಿ ಹೊರ ಗುತ್ತಿಗೆ ಕಾರ್ಮಿಕರು ದಿನದ 2 ಪಾಳಯದಲ್ಲೂ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಉತ್ತರ ಪ್ರದೇಶ ಸೇರಿದಂತೆ ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಗೆ ಶಾಯಿಯನ್ನ ಪೂರೈಸುವ ಪ್ರಕ್ರಿಯೆ ಆರಂಭಿಸಿದ್ದಾರೆ.

 ಐದು ರಾಜ್ಯಗಳಿಗೂ ಶಾಯಿ ಪೂರೈಕೆ…!

ಐದು ರಾಜ್ಯಗಳಿಗೂ ಶಾಯಿ ಪೂರೈಕೆ…!

ಪಂಚರಾಜ್ಯಗಳ ಚುನಾವಣೆಗೆ ಒಟ್ಟು 10 ಎಂಎಲ್ ಸಾಮರ್ಥ್ಯದ 4.18 ಲಕ್ಷ ಶಾಯಿಯನ್ನ ಪೂರೈಸುವಂತೆ ಕೇಂದ್ರ ಚುನಾವಣಾ ಆಯೋಗ ಮೈಲಾಕ್ ಗೆ ಬೇಡಿಕೆ ಸಲ್ಲಿಸಿತ್ತು. ಇದರನ್ವಯ ಫೆ. 4 ರಂದು ಒಂದೇ ಹಂತದಲ್ಲಿ ಚುನಾವಾಣೆ ನಡೆಯುವ ಗೋವಾ ರಾಜ್ಯಕ್ಕೆ 10 ಎಂಎಲ್ ನ 4 ಸಾವಿರ ಬಾಟಲ್ ಪೂರೈಸಲಾಗಿದೆ. ಪಂಜಾಬ್‌ಗೆ 10 ಎಂಎಲ್ ನ 52 ಸಾವಿರ ಬಾಟಲ್ ಗಳನ್ನ ಪೂರೈಕೆ ಮಾಡಲಾಗಿದೆ. ಇನ್ನು ಮಣಿಪುರಕ್ಕೆ 7,300 ಬಾಟಲ್ ಗಳನ್ನ ಈಗಾಗಲೇ ರವಾನಿಸಲಾಗಿದೆ.
ಫೆ. 11 ರಿಂದ ಮಾ. 8ರವರೆಗೆ 7 ಹಂತದಲ್ಲಿ ಮತದಾನ ನಡೆಯಲಿರುವ ಉತ್ತರಪ್ರದೇಶ ರಾಜ್ಯಕ್ಕೆ 10 ಎಂಎಲ್ ನ 3.30 ಲಕ್ಷ ಬಾಟಲ್ ಪೈಕಿ ಜ. 16ರಂದು 1 ಲಕ್ಷ ಬಾಟಲ್ ಗಳನ್ನು ಕಳುಹಿಸಲಾಗಿದೆ. ಇನ್ನುಳಿದ 2.30 ಲಕ್ಷ ಬಾಟಲ್ ಗಳನ್ನು ಜ. 24 ರಂದು ಕಳುಹಿಸಲು ಮೈಲಾಕ್ ಸಿದ್ಧತೆ ಮಾಡಿಕೊಂಡಿದೆ. ಚಿಕ್ಕ ರಾಜ್ಯ ಉತ್ತಾರಕಾಂಡಗೆ 25 ಸಾವಿರ ಬಾಟಲ್ ಗಳ ಶಾಯಿಯನ್ನು ಪೂರೈಸಲು ಕೇಂದ್ರ ಚುನಾವಣಾ ಆಯೋಗ ಬೇಡಿಕೆ ಸಲ್ಲಿಸಿದೆ ಎಂದು ಮೈಲಾಕ್ ನ ಅಧ್ಯಕ್ಷ ಹೆಚ್.ಎ ವೆಂಕಟೇಶ ತಿಳಿಸಿದರು.

 ಬಾಟಲ್ ಗಳ ಮೌಲ್ಯವೆಷ್ಟು?

ಬಾಟಲ್ ಗಳ ಮೌಲ್ಯವೆಷ್ಟು?

10 ಎಂಎಲ್ ನ ಶಾಯಿಯ ಬೆಲೆ 142 ರೂ. ನಿಗದಿ ಪಡಿಸಲಾಗಿದ್ದು, 1 ಬಾಟಲ್ ನಿಂದ 750 ಜನ ಮತದಾರರ ಬೆರಳಿಗೆ ಶಾಯಿ ಹಚ್ಚಬಹುದು . ಅಂದರೆ ಒಟ್ಟು 4.18 ಲಕ್ಷ ಬಾಟಲಿಗಳಿಗೆ ಮೌಲ್ಯ ಎಷ್ಟಾಗಬಹುದು ಎಂದು ನಿವೇ ಅಂದಾಜಿಸಿಕೊಳ್ಳಿ.

 ಚುನಾವಣೆಯೇತರ ಬಳಕೆ

ಚುನಾವಣೆಯೇತರ ಬಳಕೆ

ಮೊದಲ ಬಾರಿಗೆ ನೋಟು ರದ್ದತಿ ಆದ ನಂತರ ಬ್ಯಾಂಕ್‌ಗಳು ಗುರುತಿಗಾಗಿ ಶಾಯಿಯನ್ನ ಬಳಸುವಂತೆ ತಿಳಿಸಿದ್ದರು. 3 ಲಕ್ಷ ಬಾಟಲ್ ಗಳನ್ನ ದೇಶದ ಆರ್‌ಬಿಐ ನಿರ್ದೆಶನದಂತೆ ವಿವಿದ ಬ್ಯಾಂಕ್‌ಗಳಿಗೆ ಮೈಲಾಕ್ ನಿಂದ ಶಾಯಿಯನ್ನ ಪೂರೈಸಲಾಗಿತ್ತು. ಈ ಮೂಲಕ ಮೊದಲ ಬಾರಿಗೆ ಚುನಾವಣೇತ್ತರ ಉದ್ದೇಶಕ್ಕಾಗಿ ಮೈಲಾಕ್ ಅಳಿಸಲಾಗದ ಶಾಯಿಯನ್ನ ಪೂರೈಸುವ ಮೂಲಕ ಹೆಚ್ಚಿನ ಲಾಭವನ್ನ ಪಡೆದಿದೆ.

English summary
For Eletion purpose 3.30 lakh bottles of indelible ink, the country's biggest state of Uttar Pradesh, Mysore has been revealed that the supply of shellac and paint factory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X