ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್. ಡಿ ಕೋಟೆಯಲ್ಲಿ ಹುಲಿ ಹಿಡಿಯಲು ಬಂತು ಆನೆಗಳ ತಂಡ

|
Google Oneindia Kannada News

ಮೈಸೂರು, ಜನವರಿ 31 : ಕಳೆದೊಂದು ವಾರದಿಂದ ಬೆಂಬಿಡದೇ ಕಾಡುತ್ತಿರುವ ಹುಲಿ ದಾಳಿಗೆ ಮಟ್ಟಹಾಕಲು ಅರಣ್ಯ ಇಲಾಖೆ ಸಜ್ಜಾಗಿದೆ. ಎಚ್. ಡಿ ಕೋಟೆ ತಾಲ್ಲೂಕಿನ ನಾಗರಹೊಳೆ ಅರಣ್ಯ ಪ್ರದೇಶದ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಹುಲುಮಟ್ಲು ಗ್ರಾಮದ ಚಿನ್ನಪ್ಪ ಎಂಬುವರನ್ನು ಬಲಿ ಪಡೆದಿದ್ದ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರೆದಿದೆ. ಐದು ಆನೆಗಳ ಮೂಲಕ ಪತ್ತೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೈಗೊಂಡಿದ್ದಾರೆ.

ಹುಲಿಯು ಚಿನ್ನಪ್ಪನನ್ನು ಕೊಂದ ಸ್ಥಳದಲ್ಲಿ ಮಂಗಳವಾರವೇ ಬೋನು ಇಡಲಾಗಿತ್ತು. ಮೂರು ಆನೆಗಳ ಮೂಲಕ ಕಾರ್ಯಾಚರಣೆ ನಡೆಸಲಾಗಿತ್ತು.

ಗುಂಡುಮೇಟ್ಲು ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಹುಲಿ ದಾಳಿ:ವ್ಯಕ್ತಿ ಸಾವು ಗುಂಡುಮೇಟ್ಲು ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಹುಲಿ ದಾಳಿ:ವ್ಯಕ್ತಿ ಸಾವು

ಆದರೆ, ಹುಲಿ ಪತ್ತೆಯಾಗಿರಲಿಲ್ಲ. ಕಳೆದೊಂದು ವಾರದಿಂದ ಬೆಂಬಿಡದೇ ಕಾಡುತ್ತಿರುವ ಹುಲಿ ದಾಳಿಗೆ ಮಟ್ಟಹಾಕಲು ಅರಣ್ಯ ಇಲಾಖೆ ಸಜ್ಜಾಗಿದೆ. ಎಚ್. ಡಿ ಕೋಟೆ ತಾಲ್ಲೂಕಿನ ನಾಗರಹೊಳೆ ಅರಣ್ಯ ಪ್ರದೇಶದ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಹುಲುಮಟ್ಲು ಗ್ರಾಮದ ಚಿನ್ನಪ್ಪ ಎಂಬುವರನ್ನು ಬಲಿ ಪಡೆದಿದ್ದ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರೆದಿದೆ. ಐದು ಆನೆಗಳ ಮೂಲಕ ಪತ್ತೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೈಗೊಂಡಿದ್ದಾರೆ.

5 elephants came to h d kote for catch the tiger

ಹುಲಿಯು ಚಿನ್ನಪ್ಪನನ್ನು ಕೊಂದ ಸ್ಥಳದಲ್ಲಿ ಮಂಗಳವಾರವೇ ಬೋನು ಇಡಲಾಗಿತ್ತು. ಮೂರು ಆನೆಗಳ ಮೂಲಕ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಹುಲಿ ಪತ್ತೆಯಾಗಿರಲಿಲ್ಲ. ಹೀಗಾಗಿ, ಕಾರ್ಯಾಚರಣೆ ತೀವ್ರಗೊಳಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಐದು ಆನೆಗಳನ್ನು ಬಳಸಿಕೊಂಡು ಪ್ರತ್ಯೇಕ ತಂಡಗಳಲ್ಲಿ ಪತ್ತೆ ಕಾರ್ಯ ನಡೆಸಿದರು.

ಕರ್ನಾಟಕದಲ್ಲಿ ಅಪರೂಪಕ್ಕೆ ಗೋಚರವಾಗಿದ್ದ ನೀಲ್ ಗಾಯ್ ಹುಲಿ ದಾಳಿಗೆ ಬಲಿ ಕರ್ನಾಟಕದಲ್ಲಿ ಅಪರೂಪಕ್ಕೆ ಗೋಚರವಾಗಿದ್ದ ನೀಲ್ ಗಾಯ್ ಹುಲಿ ದಾಳಿಗೆ ಬಲಿ

ಅರ್ಜುನ, ಕೃಷ್ಣ, ಭೀಮ, ಸರಳ ಮತ್ತು ಕುಮಾರಸ್ವಾಮಿ ಆನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಕಾಡಿನ ಆಸುಪಾಸಿನಲ್ಲಿರುವ ಗ್ರಾಮಗಳ ಬಳಿ ಹುಲಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಬೆಳಿಗ್ಗೆ ಗುಂಡ್ರೆ ಹಿನ್ನೀರಿನ ಸುತ್ತ ಮುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ, ಮಚ್ಚೂರ- ಜಾಗನಕೋಟೆ ಸುತ್ತಲಿನ ಕಾಡಿನ ಪ್ರದೇಶದಲ್ಲಿ 15 ಕಿ.ಮೀ.ವರೆಗೆ ಕಾರ್ಯಾಚರಣೆ ನಡೆಸಲಾಯಿತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಕೆ.ಜಿ.ಹಬ್ಬನಕುಪ್ಪೆ ಎಸ್ಟೇಟ್‌ನಲ್ಲಿ ಭಯ ಸೃಷ್ಟಿಸಿದ ಹುಲಿಯ ಸೆರೆ ಯಾವಾಗ? ಕೆ.ಜಿ.ಹಬ್ಬನಕುಪ್ಪೆ ಎಸ್ಟೇಟ್‌ನಲ್ಲಿ ಭಯ ಸೃಷ್ಟಿಸಿದ ಹುಲಿಯ ಸೆರೆ ಯಾವಾಗ?

ಹುಲಿ ಸೆರೆಗೆ ಬೋನು ಇರಿಸಲಾಗಿದೆ. ತಜ್ಞ ವೈದ್ಯ ಮುಜೀಬ್ ಅಹ್ಮದ್ ಅರಿವಳಿಕೆ ಚುಚ್ಚುಮದ್ದು ನೀಡಲು ತಯಾರಿ ಮಾಡಿಕೊಂಡಿದ್ದು, ಇನ್ನು ಕೂಡ ನರಭಕ್ಷಕ ಹುಲಿ ಬೋನಿಗೆ ಬೀಳದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

English summary
Forest department officials came with 5 elephants for catch the tiger in Mysuru district H D kote talluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X