ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಸಿಕ್ಕ ಕುರಾನ್ ಜಮ್ಮುವಿನಲ್ಲಿ ಕಳುವಾಗಿದ್ದಲ್ಲ

|
Google Oneindia Kannada News

ಮೈಸೂರು, ಆ.28 : ಮೈಸೂರಿನ ಕೆ.ಆರ್.ನಗರ ತಾಲೂಕಿನಲ್ಲಿ ಸಿಕ್ಕಿದ ಚಿನ್ನದ ಲೇಪನವಿರುವ ಹಾಳೆಗಳ ಕುರಾನ್ ಜಮ್ಮು ಮತ್ತು ಕಾಶ್ಮೀರದ ವಸ್ತು ಸಂಗ್ರಹಾಲಯದಲ್ಲಿ ಕಳುವಾಗಿದ್ದಲ್ಲ ಎಂದು ಸ್ಪಷ್ಟನೆ ಸಿಕ್ಕಿದೆ. ಕುರಾನ್ ಎಲ್ಲಿಯದಿರಬಹುದೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮತ್ತು ಪುರಾತತ್ವ ಇಲಾಖೆಯ 5 ಜನರ ತಂಡ ಮೈಸೂರಿಗೆ ಭೇಟಿ ನೀಡಿ. ಮೈಸೂರು ಪೊಲೀಸರು ವಶಪಡಿಸಿಕೊಂಡ ಕುರಾನ್ ಪರಿಶೀಲನೆ ನಡೆಸಿದೆ. ಈ ಕುರಾನ್ 2003ರಲ್ಲಿ ಕಾಶ್ಮೀರದಿಂದ ಕಳುವಾಗಿದ್ದಲ್ಲ ಎಂದು ಸ್ಪಷ್ಟನೆ ನೀಡಿದೆ. [ಕುರಾನ್ ಜಮ್ಮುವಿನಲ್ಲಿ ಕಳುವಾಗಿದ್ದು?]

quran

ಆ.10ರಂದು ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರ ಬಳಿ ಕುರಾನ್ ಮಾರಲು ಯತ್ನಿಸುತ್ತಿದ್ದ 10 ಮಂದಿಯ ತಂಡವನ್ನು ಪೊಲೀಸರು ಬಂಧಿಸಿದ್ದರು. ಇವರಿಂದ ವಶಪಡಿಸಿಕೊಂಡ ಚಿನ್ನದ ಲೇಪನವಿರುವ ಹಾಳೆಗಳ ಕುರಾನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ಕುರಾನ್ ಜಮ್ಮು-ಮತ್ತು ಕಾಶ್ಮೀರದ ಶ್ರೀನಗರದ ವಸ್ತು ಸಂಗ್ರಹಾಲಯದಿಂದ 2003ರಲ್ಲಿ ಕಳುವಾಗಿದ್ದು ಎಂಬ ಶಂಕೆ ವ್ಯಕ್ತವಾಗಿತ್ತು. ಪ್ರತಾಪ್ ಸಿಂಗ್ ವಸ್ತುಸಂಗ್ರಹಾಲಯದ ಸಿಬ್ಬಂದಿ ಈ ಕುರಿತು ಮೈಸೂರು ಪೊಲೀಸರಿಗೆ ಈ ಮೇಲ್ ಮೂಲಕ ಮಾಹಿತಿ ರವಾನಿಸಿದ್ದರು.

ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮೈಸೂರಿಗೆ ಭೇಟಿ ನೀಡಿ ಕುರಾನ್ ಪರಿಶೀಲನೆ ನಡೆಸಿದ್ದು, ಇದು ಪ್ರತಾಪ್ ಸಿಂಗ್ ವಸ್ತು ಸಂಗ್ರಹಾಲಯದಲ್ಲಿ ಕಳುವಾಗಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗ ಪೊಲೀಸರು ಕುರಾನ್ ಎಲ್ಲಿಗೆ ಸೇರಿದ್ದು? ಎಂಬ ತನಿಖೆ ಮುಂದುವರೆಸಿದ್ದಾರೆ.

English summary
A five-member team of archaeologists and police from Jammu and Kashmir examined the Quran in Mysuru and said, it wasn’t stolen from a museum in Jammu and Kashmir, as suspected earlier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X