ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಕಳೆದ ವರ್ಷದಿಂದ 40 ಲಕ್ಷ ಟ್ರಾಫಿಕ್ ಉಲ್ಲಂಘನೆ ಪ್ರಕರಣ ದಾಖಲು

|
Google Oneindia Kannada News

ಮೈಸೂರು, ಜೂನ್ 22: ಮೈಸೂರು ಟ್ರಾಫಿಕ್ ಪೊಲೀಸರೆಂದರೆ ಎಲ್ಲರ ಕಣ್ಣು ಅವರತ್ತ ಬೀಳುತ್ತದೆ. ಕಾರಣ, ಅವರು ಹೊಸ ಹೊಸ ರೂಲ್ಸ್ ಗಳು ತರುವಲ್ಲಿ ನಿಸ್ಸೀಮರು. ಆದರೆ ಎಷ್ಟು ನಿಯಮ ರೂಪಿಸಿದರೂ ರಂಗೋಲಿ ಕೆಳಗೆ ನುಸುಳುತ್ತಾರೆ. ಈ ಹಿನ್ನೆಲೆ ಕಳೆದ ಐದು ವರ್ಷದಲ್ಲಿ ಸಂಚಾರ ನಿಯಮ ಉಲ್ಲಂಘನೆ ದಾಖಲಾದ ಪ್ರಕರಣಗಳಲ್ಲಿ ಶೇ.50ರಷ್ಟು ಹೆಚ್ಚು ಮೊಕದ್ದಮೆ ವಿಲೇವಾರಿಯಾಗದೆ ಹಾಗೆಯೇ ಬಾಕಿ ಉಳಿದಿದೆ.

ಟ್ರಾಫಿಕ್ ಪೊಲೀಸ್ ಆಗಿಬಿಟ್ಟಿದ್ದಾರೆ ಮೊಹಮ್ಮದ್‌ ನಲಪಾಡ್‌! ಟ್ರಾಫಿಕ್ ಪೊಲೀಸ್ ಆಗಿಬಿಟ್ಟಿದ್ದಾರೆ ಮೊಹಮ್ಮದ್‌ ನಲಪಾಡ್‌!

ಇನ್ನು ಮೈಸೂರು ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ವಿರುದ್ಧ ಕಳೆದ ಐದು ವರ್ಷಗಳಿಂದೀಚೆಗೆ 40 ಲಕ್ಷ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅದರಲ್ಲೂ 25 ಲಕ್ಷ ಹೆಚ್ಚು ಕೇಸು ವಿಲೇವಾರಿಯಾಗಿಲ್ಲ. ಇದರಿಂದ ಸರಕಾರಕ್ಕೆ ದಂಡದ ರೂಪದಲ್ಲಿ ಬರಬೇಕಿದ್ದ ಕೋಟ್ಯಂತರ ರೂಪಾಯಿ ಸಂದಾಯವಾಗದೆ ಹಾಗೆಯೇ ಮೂಲೆಗುಂಪಾಗಿದೆ.

ಹೆಲ್ಮೆಟ್ ಇಲ್ಲದೆ ಬೈಕ್ ರೈಡ್; ಫೋಟೊ ತೆಗೆದ ಪೊಲೀಸ್ ಮೇಲೆ ಹಲ್ಲೆ ಹೆಲ್ಮೆಟ್ ಇಲ್ಲದೆ ಬೈಕ್ ರೈಡ್; ಫೋಟೊ ತೆಗೆದ ಪೊಲೀಸ್ ಮೇಲೆ ಹಲ್ಲೆ

ಆರ್ ಟಿ ಐನಲ್ಲಿ ಈ ಮಾಹಿತಿ ಲಭ್ಯವಾಗಿದ್ದು ಶೇ80ರಷ್ಟು ಹೆಚ್ಚು ಪ್ರಕರಣ ಹೆಲ್ಮೆಟ್ ಧರಿಸದಿರುವುದು ಎಂಬುದು ಅಚ್ಚರಿಯ ವಿಚಾರ. ಸಂಚಾರಿ ಪೊಲೀಸರು ಪಾರ್ಕಿಂಗ್ ಜಾಗದಲ್ಲಿ ನಿಂತ ಬೈಕ್ ಮತ್ತು ಕಾರುಗಳನ್ನು ನಂಬರ್ ಪರಿಶೀಲಿಸಿ ಎಷ್ಟು ಪ್ರಕರಣ ದಾಖಲಾಗಿದೆ ಎಂದು ಗಮನಿಸಿ ದಂಡ ವಿಧಿಸುತ್ತಾರೆ. ಅಲ್ಲದೇ ನಗರದ ಪ್ರಮುಖ ರಸ್ತೆಯಲ್ಲಿ ವಾಹನವನ್ನು ತಡೆದು ಒಂದು ವೇಳೆ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣ ಕಂಡು ಬಂದಲ್ಲಿ ಸ್ಥಳದಲ್ಲೇ ದಂಡ ವಸೂಲಿಗೂ ಮುಂದಾಗಿದ್ದಾರೆ. ಇಷ್ಟೆಲ್ಲಾ ಮಾಡಿದರೂ 25 ಲಕ್ಷಕ್ಕೂ ಹೆಚ್ಚು ಪ್ರಕರಣ ವಿಲೇವಾರಿ ಆಗದೇ ಇರುವುದು ಅಚ್ಚರಿಯ ಸಂಗತಿ.

40 lakh traffic rules violation case has been registered in Mysuru

ನಿತ್ಯ ನಗರ ಸಂಚಾರಿ ಪೊಲೀಸರು 2 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಸಂಚಾರ ನಿಯಮ ಉಲ್ಲಂಘನೆಯಡಿ ದಾಖಲಿಸಿಕೊಳ್ಳುತ್ತಿದ್ದಾರೆ. ನಗರದಲ್ಲಿ ಪ್ರಮುಖ ವೃತ್ತದಲ್ಲಿ 66ಕ್ಕೂ ಹೆಚ್ಚು ಸಿಸಿಟಿವಿ ಫೋಟೆಜ್ ಗಳಿಂದ ಮಾಹಿತಿ ಸಂಚಾರ ಪೊಲೀಸರಿಗೆ ಲಭ್ಯವಾಗುತ್ತದೆ. ಆದರೂ ಇಷ್ಟು ಪ್ರಕರಣಗಳು ನಡೆಯುತ್ತಲೇ ಇದೆ. ಇನ್ನು ಹೆಲ್ಮೆಟ್ ಅವಶ್ಯಕತೆ ಬಗ್ಗೆ ಜಾಥಾ, ಕರಪತ್ರ ಜಾಗೃತಿ ಏನೆಲ್ಲಾ ಮೂಡಿಸಿದರೂ ಸಾರ್ವಜನಿಕರು ಇನ್ನೂ ಸ್ವಯಂ ಬಳಕೆಗೆ ಮುಂದಾಗಿಲ್ಲ ಎನ್ನುವುದು ಮಾತ್ರ ಬೇಸರದ ಸಂಗತಿ.

English summary
Around 40 lakh traffic rules violation case has been registered in Mysuru. Out of this Fines for ೨೫ lakh cases yet to be collected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X