ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ವರ್ಷ ಮೈಸೂರು ಅರಮನೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಎಷ್ಟು ಗೊತ್ತಾ?

|
Google Oneindia Kannada News

ಮೈಸೂರು, ಜನವರಿ 4 : ವಿಶ್ವವಿಖ್ಯಾತ ಮೈಸೂರು ಅರಮನೆಗೆ 2017-18ನೇ ಸಾಲಿನಲ್ಲಿ ದಾಖಲೆ ಸಂಖ್ಯೆಯಲ್ಲಿ ಮಕ್ಕಳು ಭೇಟಿ ನೀಡಿದ್ದಾರೆ. 6 ವರ್ಷಗಳಲ್ಲಿ ಇಷ್ಟು ಸಂಖ್ಯೆಯಲ್ಲಿ ಮಕ್ಕಳು ಬಂದಿರುವುದು ಇದೇ ಮೊದಲು.

ಈ ವರ್ಷವೂ ಕೊಡಗಿನಲ್ಲಿ ಉಂಟಾದ ಪ್ರವಾಹದಿಂದಾಗಿ ಪ್ರವಾಸೋದ್ಯಮದ ಮೇಲೆ ಹೊಡೆತ ಬಿದ್ದಿತ್ತು. ಆದರೆ, ಅದು ಮೈಸೂರು ಅರಮನೆಯ ಪಾಲಿಗೆ ಸುಳ್ಳಾಗಿದೆ.

ಅರಮನೆಯ ಸೌಂದರ್ಯಕ್ಕೆ ಮಾರುಹೋದ ರಾಜ್ಯಪಾಲ ವಜುಭಾಯಿ ವಾಲಾಅರಮನೆಯ ಸೌಂದರ್ಯಕ್ಕೆ ಮಾರುಹೋದ ರಾಜ್ಯಪಾಲ ವಜುಭಾಯಿ ವಾಲಾ

ಈಚಿನ ವರ್ಷಗಳಲ್ಲಿ ಮೈಸೂರು ಅರಮನೆಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. 2012-13ರಲ್ಲಿ 33 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ಅಂತೆಯೇ, 2013-14ರಲ್ಲಿ 32.4 ಲಕ್ಷ, 2014-15ರಲ್ಲಿ 33.9 ಲಕ್ಷ, 2015-16ರಲ್ಲಿ 35.6 ಲಕ್ಷ, 2016-17ರಲ್ಲಿ 33.2 ಲಕ್ಷ ಪ್ರವಾಸಿಗರು ಬಂದಿದ್ದರು. ಇಳಿಕೆ ಗತಿಯಲ್ಲೇ ಸಾಗಿದ್ದ ಪ್ರವಾಸಿಗರ ಸಂಖ್ಯೆ ಈ ವರ್ಷ ದಿಢೀರ್‌ ಏರಿಕೆ ಕಂಡಿದೆ.

38.6 lakh tourists visited Mysore Palace

ಈ ವರ್ಷ ಬರೋಬ್ಬರಿ 38.6 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಕಳೆದ ಸಾಲಿಗಿಂತ ಸುಮಾರು 6 ಲಕ್ಷ ಮಂದಿ ಈ ಬಾರಿ ಭೇಟಿ ನೀಡಿದ್ದಾರೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 6 ಪಟ್ಟು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಅರಮನೆ ಆಡಳಿತ ಮಂಡಳಿಯು ತೆಗೆದುಕೊಂಡ ನಿರ್ಧಾರ.

 ಪ್ರವಾಸಿಗರನ್ನು ಕೈಬೀಸಿ ಕರೆಯಲಿವೆ ಮಡಿಕೇರಿ ಕೋಟೆ-ಅರಮನೆ ಪ್ರವಾಸಿಗರನ್ನು ಕೈಬೀಸಿ ಕರೆಯಲಿವೆ ಮಡಿಕೇರಿ ಕೋಟೆ-ಅರಮನೆ

ಅಷ್ಟೇ ಅಲ್ಲ ಈ ಬಾರಿ ಮಕ್ಕಳಿಗೂ ಟಿಕೆಟ್ ದರವನ್ನು 10 ರೂ ಗೆ ಇಳಿಸಲಾಯಿತು. ಅಲ್ಲದೇ, ರಾಜ್ಯದ ಎಲ್ಲ ಡಿಡಿಪಿಐಗಳಿಗೆ ಪತ್ರ ಬರೆದು ಮಕ್ಕಳನ್ನು ಅರಮನೆಗೆ ಕರೆತರುವಂತೆ ಕೋರಲಾಗಿತ್ತು. ಇದರಿಂದಾಗಿ ರಾಜ್ಯದ ಮೂಲೆ ಮೂಲೆಗಳಿಂದ ಮಕ್ಕಳು ತಂಡೋಪತಂಡವಾಗಿ ಅರಮನೆಗೆ ಭೇಟಿ ನೀಡಿದ್ದಾರೆ.

 ದಸರಾ ಮುಗಿದರೂ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ ದಸರಾ ಮುಗಿದರೂ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ

ಮುಂಚೆ ಅರಮನೆಯ ವರಾಹ ದ್ವಾರದಲ್ಲಿ ಮಾತ್ರ ಪ್ರವೇಶ ಸೌಲಭ್ಯವಿತ್ತು. ಈಗ ಎಲ್ಲ ದ್ವಾರಗಳಲ್ಲೂ ಟಿಕೆಟ್ ಕೊಳ್ಳುವ ಸೌಲಭ್ಯ ಇರುವುದು ಪ್ರವಾಸಿಗರ ಸಂಖ್ಯೆ ಹೆಚ್ಚುವುದಕ್ಕೆ ಕಾರಣವಾಗಿದೆ. ವರಾಹ ದ್ವಾರದ ಜತೆಗೆ, ಜಯಮಾರ್ತಾಂಡ, ಕರಿಕಲ್ಲುತೊಟ್ಟಿ ಹಾಗೂ ಅಂಬಾವಿಲಾಸ ದ್ವಾರಗಳಲ್ಲೂ ಟಿಕೆಟ್ ಖರೀದಿಗೆ ಅವಕಾಶ ಇದೆ.

ಜೊತೆಗೆ, ಎಲ್ಲ ಪ್ರವಾಸಿಗರಿಗೂ ಪ್ರವೇಶ ದರ 50ರೂ. ಇದೆ. ವಿದೇಶಿಗರಿಗೆ ಹೆಚ್ಚು ದರ ನಿಗದಿಪಡಿಸಿಲ್ಲ. ಹಾಗಾಗಿ, ವಿದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. 2017-18ನೇ ಸಾಲಿನಲ್ಲಿ 54 ಸಾವಿರ ವಿದೇಶಿಗರು ಭೇಟಿ ನೀಡಿದ್ದಾರೆ ಎಂಬುದು ಗಮನಾರ್ಹ.

English summary
This year, 38.6 lakh tourists visited Mysore Palace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X