ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾವವೇ ನಮ್ಮ ಜೀವ; ಮೈಸೂರಿನಲ್ಲಿ ಮೈನವಿರೇಳಿಸಿತು ಬೈಕ್ ರ‍್ಯಾಲಿ

|
Google Oneindia Kannada News

ಮೈಸೂರು, ಜುಲೈ 15: ಗತ ಕಾಲದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಅನೇಕ ರಸ್ತೆಗಳಲ್ಲಿ ಭಾರೀ ಸದ್ದು ಮಾಡಿದ್ದವು ವಿವಿಧ ಬಗೆಯ ಜಾವಾ ಬೈಕ್ ‌ಗಳು. ಇದೀಗ ಮತ್ತೆ ಆ ಜಾವಾ ವೈಭವವನ್ನು ಇಂದು ಕಣ್ತುಂಬಿಕೊಂಡ ಹಾಗಾಯಿತು. ನಗರದೆಲ್ಲೆಡೆ ಸಂಚರಿಸುವ ಮೂಲಕ ಬೈಕ್ ಪ್ರಿಯರನ್ನು ಜಾವಾ ಆಕರ್ಷಿಸಿದವು.

ಜಾವಾ ಡೇ ಅಂಗವಾಗಿ ಜಾವಾ ಮೋಟಾರ್ ಬೈಕ್ ಮೆರವಣಿಗೆಯನ್ನು ಇಲ್ಲಿ ಆಯೋಜಿಸಲಾಗಿತ್ತು. 60ರ ದಶಕ ನೆನಪಿಸುವಂತೆ ಆಂಟಿಕ್ ಪೀಸ್‌ ಜಾವಾ ಯಜ್ಡಿ ಬೈಕ್ ‌ಗಳ ಪ್ರದರ್ಶನ ಮೆರವಣಿಗೆ ಜರುಗಿತು. ಈ ಕಾರ್ಯಕ್ರಮವನ್ನು ಮೈಸೂರು ಜಾವಾ ಬೈಕ್ ಅಸೋಸಿಯೇಷನ್ ಆಯೋಜಿಸಿತ್ತು. ನಗರದ ವಿವಿಧ ಭಾಗಗಳಲ್ಲಿ ಜಾವಾ ಬೈಕ್ ಸವಾರರು ಸುತ್ತಾಟ ನಡೆಸಿದರು. ಹಳೆಯ ಜಾವಾ ಬೈಕ್ ಗಳಿಂದ ಹಿಡಿದು ಹೊಸ ಮಾದರಿಯ ಜಾವಾ ಕಂಪನಿಯ 300 ಹೆಚ್ಚು ಬೈಕ್ ಗಳು ಭಾಗಿಯಾಗಿದ್ದವು.

 ಬೈಕ್ ರೈಡಿಂಗ್ ಮೂಲಕ ದೇಶ ಸುತ್ತಿ ಸೈ ಎನಿಸಿಕೊಂಡ ಮಲೆನಾಡ ಬೆಡಗಿ ಬೈಕ್ ರೈಡಿಂಗ್ ಮೂಲಕ ದೇಶ ಸುತ್ತಿ ಸೈ ಎನಿಸಿಕೊಂಡ ಮಲೆನಾಡ ಬೆಡಗಿ

ಮೈಸೂರಿನ ನಜರ್ ‌ಬಾದ್ ‌ನಿಂದ ಆರಂಭಗೊಂಡ ಮೆರವಣಿಗೆ ಹಾರ್ಡಿಂಗ್ ವೃತ್ತ, ಜೋಡಿರಸ್ತೆ, ನ್ಯೂ ಕಾಂತರಾಜ ಅರಸು ರಸ್ತೆ, ಕುಕ್ಕರಹಳ್ಳಿ ಕೆರೆ ಜಂಕ್ಷನ್‌, ಮಾನಸಗಂಗೋತ್ರಿ, ಹುಣಸೂರು ಮುಖ್ಯರಸ್ತೆ, ವಿವಿ ಮೊಹಲ್ಲಾ ಮಾರ್ಗವಾಗಿ ಸಂಚರಿಸಿ ಎಲ್ಲರ ಗಮನ ಸೆಳೆದವು.

300 java bike riders rally at mysuru

ಇಂದಿನ ಹೊಸ ಬೈಕ್ ರೈಡರ್ ಗಳಿಗೂ ಈ ಬೈಕ್ ಅಚ್ಚುಮೆಚ್ಚಾಗಿದೆ. ಲಾಂಗ್ ಡ್ರೈವ್ ಗೆ ತಕ್ಕ ಮೋಟಾರ್ ಗಾಡಿ ಇದು ಎಂದು ಜಾವಾ ಬೈಕ್ ಪ್ರೇಮಿ ಸಲ್ಲಾವುದಿನ್ ಬೈಕ್ ಬೆನ್ನು ತಟ್ಟಿದರು.

ಅಣ್ಣಾವ್ರ ವಿಡಿಯೋ ಟ್ವೀಟ್‌ ಮಾಡಿ, ಮಾರುಕಟ್ಟೆಗೆ ಬಂದ ಜಾವಾ ಬೈಕ್‌ ಅಣ್ಣಾವ್ರ ವಿಡಿಯೋ ಟ್ವೀಟ್‌ ಮಾಡಿ, ಮಾರುಕಟ್ಟೆಗೆ ಬಂದ ಜಾವಾ ಬೈಕ್‌

ಮೈಸೂರಿಗರ ಮನಗೆದ್ದಿರುವ ಜಾವಾ ಬೈಕ್ ಮೈಸೂರಿನ ಹೆಮ್ಮೆ ಎಂದೇ ಬಿಂಬಿತವಾಗಿದೆ. ನಗರದ ಮೈಸೂರು ಜಾವಾ ಕ್ಲಬ್‌ ವತಿಯಿಂದ ಅಂತಾರಾಷ್ಟ್ರೀಯ ಜಾವಾ ದಿನದ ಅಂಗವಾಗಿ ಕಳೆದ ಕೆಲವು ವರ್ಷಗಳಿಂದೀಚೆಗೆ ಜಾವಾ ಬೈಕ್ ಮೆರವಣಿಗೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.

300 java bike riders rally at mysuru

ಮೈಸೂರು: ಪಾರಂಪರಿಕ ಹಾದಿ ಹಾದುಬಂದ ಜಾವಾ ಬೈಕ್ ಗಳು ಮೈಸೂರು: ಪಾರಂಪರಿಕ ಹಾದಿ ಹಾದುಬಂದ ಜಾವಾ ಬೈಕ್ ಗಳು

ಜಾವಾ ಮೋಟರ್ ಬೈಕ್ ಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಈ ಮೋಟರ್ ಬೈಕ್ ಭಾರತಕ್ಕೆ ಕಾಲಿಟ್ಟಿದ್ದು 1950ರಲ್ಲಿ. ಪ್ಯಾರಿಸ್‌ ನಿವಾಸಿಗಳಾದ ಇಬ್ಬರು ವಾಣಿಜ್ಯೋದ್ಯಮಿಗಳು ಭಾರತಕ್ಕೆ ಜಾವಾ ಬೈಕ್ ಗಳನ್ನ ಆಮದು ಮಾಡಿಕೊಂಡು ಮಾರಾಟ ಮಾಡಲು ಮೊದಲು ಆರಂಭಿಸಿದರು. ಇದಾದ ಬಳಿಕ 1961ರಲ್ಲಿ ಭಾರತದಲ್ಲಿ ಜಾವಾ ಮೊತ್ತ ಮೊದಲ ಫ್ಯಾಕ್ಟರಿ ಆರಂಭಗೊಂಡಿತು. ಜಾವಾ ಕಂಪೆನಿಯ ಮೊದಲ ಫ್ಯಾಕ್ಟರಿ ಆರಂಭವಾಗಿದ್ದು ಸಾಂಸ್ಕೃತಿಕ ಮೈಸೂರಿನಲ್ಲಿ. ಆಗಿನ ಕಾಲದಲ್ಲಿ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ ಜಾವಾ ಫ್ಯಾಕ್ಟರಿಯನ್ನು ಉದ್ಘಾಟಿಸಿದ್ದನ್ನು ಇಂದಿಗೂ ಮೈಸೂರಿಗರು ನೆನಪಿಸಿಕೊಳ್ಳುತ್ತಾರೆ.

English summary
On behalf of world java day, 300 java bike riders went rally at Mysuru. java bike factory started in karnataka at 1951. The Java Motor Bike Parade was organized as part of Java Day. The Antique Piece Java Yazdi bike parade was held to commemorate the java day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X