ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರೀಕ್ಷೆಯಲ್ಲಿ ಅಕ್ರಮ ಮಾಡಿ ಸಿಕ್ಕಿಬಿದ್ದವರಿಗೆ 3 ವರ್ಷ ಜೈಲು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 01: ಪರೀಕ್ಷೆ ಬರೆಯುವಾಗ ಅಕ್ರಮ ಎಸಗಿ ಸಿಕ್ಕಿ ಬಿದ್ದಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಮೈಸೂರಿನ ಮೂರನೇ ಹೆಚ್ಚುವರಿ, ಒಂದನೇ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕೆ.ಆರ್.ನಗರ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದ ಯೋಗೇಶ ಮತ್ತು ಪಿರಿಯಾಪಟ್ಟಣದ ಮರದೂರು ನಿವಾಸಿ ನಂದೀಶ್ ಎಂಬುವವರೇ ಶಿಕ್ಷೆಗೆ ಒಳಗಾದವರಾಗಿದ್ದಾರೆ.

ಚೀನಾ ಪ್ರವಾಸಿಗರ ಮೇಲೆ ಕಣ್ಣಿಟ್ಟ ಮೈಸೂರು ಜಿಲ್ಲಾಡಳಿತಚೀನಾ ಪ್ರವಾಸಿಗರ ಮೇಲೆ ಕಣ್ಣಿಟ್ಟ ಮೈಸೂರು ಜಿಲ್ಲಾಡಳಿತ

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ 2009 ರಲ್ಲಿ ನಡೆಯುತ್ತಿದ್ದ ಅಖಿಲ ಭಾರತ ವೃತ್ತಿ ಪರೀಕ್ಷೆಯ ಕಾರ್ಯಾಗಾರ ಲೆಕ್ಕಾಚಾರ ಮತ್ತು ವಿಜ್ಞಾನ ಎಂಬ ವಿಷಯದ ಪರೀಕ್ಷೆಗೆ ನಂದೀಶ್ ಅವರ ಬದಲು ಯೋಗೇಶ್ ಹಾಜರಾಗಿ ಪರೀಕ್ಷೆ ಬರೆಯುವ ವೇಳೆ ಸಿಕ್ಕಿ ಬಿದ್ದಿದ್ದರು.

3 years imprisonment To 2 Persons For Illegal In Exam

ಇವರ ವಿರುದ್ಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಂ.ರಾಜೇಂದ್ರ ವಾದ ಮಂಡಿಸಿದ್ದರು.

English summary
Mysuru Court Verdict Of 3 years imprisonment For Illegal in ITI exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X