ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಇನ್ನು ಮುಂದೆ ಮಾಸ್ಕ್ ಧರಿಸದಿದ್ದರೆ ಕಠಿಣ ಕ್ರಮ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 25: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡ ವಿಧಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ.

ಜಿಲ್ಲಾದ್ಯಂತ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಸೋಂಕು ನಿಯಂತ್ರಣ ಕುರಿತು ಜಿಲ್ಲಾಧಿಕಾರಿ ಬಿ. ಶರತ್ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಜಿಲ್ಲೆಯಲ್ಲಿ ಸೋಂಕು ಪರೀಕ್ಷೆಯನ್ನು ಹೆಚ್ಚಳ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಯಿತು. ಸಭೆಯಲ್ಲಿ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಶರತ್, ಮಾಸ್ಕ್ ಇಲ್ಲದೇ ಎಲ್ಲೆಂದರಲ್ಲಿ ಓಡಾಡಿದರೆ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮುಂದೆ ಓದಿ...

 ಮಾಸ್ಕ್ ಧರಿಸದಿದ್ದರೆ 200 ದಂಡ

ಮಾಸ್ಕ್ ಧರಿಸದಿದ್ದರೆ 200 ದಂಡ

ಮಾಸ್ಕ್ ಧರಿಸದೆ ತಿರುಗಾಡುವವರಿಗೆ ಕಟ್ಟುನಿಟ್ಟಾಗಿ 200 ರೂ. ದಂಡ ವಿಧಿಸಲು ನಿರ್ಧಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಲೇಬೇಕೆಂದು ಸಾರ್ವಜನಿಕರಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕುರಿತು ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜನಜೀವನ ಆರ್ಥಿಕ ಪರಿಸ್ಥಿತಿ ಇತ್ಯಾದಿಗಳನ್ನು ಗಮನಿಸಿ ಅನ್ಲಾಕ್ ಮಾಡಿದ್ದವು. ಜನರು ಸೋಂಕಿಗೆ ತಾವೇ ಒಳಗಾಗುವವರೆಗೂ ಬುದ್ಧಿ ಕಲಿಯಲ್ಲ ಅನ್ನಿಸುತ್ತಿದೆ. ಬೇಕಾಬಿಟ್ಟಿ ಮಾಸ್ಕ್ ಧರಿಸುತ್ತಾರೆ. ಇನ್ನು ಮುಂದೆ ಇಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೊವಿಡ್ 19 ಲಸಿಕೆಗಳಿಗಿಂತ ಮಾಸ್ಕ್ ಹೆಚ್ಚು ಸುರಕ್ಷಿತ ಎಂದ ವಿಜ್ಞಾನಿಗಳುಕೊವಿಡ್ 19 ಲಸಿಕೆಗಳಿಗಿಂತ ಮಾಸ್ಕ್ ಹೆಚ್ಚು ಸುರಕ್ಷಿತ ಎಂದ ವಿಜ್ಞಾನಿಗಳು

 ಟೆಸ್ಟ್ ಮಾಡಿಸಿಕೊಳ್ಳಲು ಕರೆ

ಟೆಸ್ಟ್ ಮಾಡಿಸಿಕೊಳ್ಳಲು ಕರೆ

ಯಾವುದೇ ರೀತಿಯ ತೊಂದರೆಗಳಿದ್ದರೆ ಮುಕ್ತವಾಗಿ ಬಂದು ಟೆಸ್ಟ್ ಮಾಡಿಸಿ. ಇದರಿಂದ ಆರೋಗ್ಯದ ಜೊತೆ ರೋಗವನ್ನು ತಡೆಯಬಹುದು. ಕೇವಲ ರೋಗ ಲಕ್ಷಣಗಳು ಇದ್ದರೆ ಮಾತ್ರ ಟೆಸ್ಟ್ ಮಾಡಿಸಬೇಕು ಎಂದುಕೊಳ್ಳಬೇಡಿ ಎಂದು ಹೇಳಿದರು. ಸಾರ್ವಜನಿಕರು ವೈದ್ಯರ ಜೊತೆ ಅಸಭ್ಯವಾಗಿ ನಡೆದುಕೊಂಡರೆ ಎಫ್.ಐ.ಆರ್ ಹಾಕುತ್ತೇವೆ ಎಂದು ಎಚ್ಚರಿಸಿದರು.

 ಪರೀಕ್ಷೆ ಹೆಚ್ಚಿಸಲು ತಂಡ ರಚನೆ

ಪರೀಕ್ಷೆ ಹೆಚ್ಚಿಸಲು ತಂಡ ರಚನೆ

ವೈದ್ಯರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಾರ್ವಜನಿಕರು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಟೆಸ್ಟ್ ಗಳ ಸಂಖ್ಯೆ ಹೆಚ್ವಿಸುವ ಸಲುವಾಗಿ ತಂಡ ಸಿದ್ಧಗೊಳಿಸುತ್ತಿದ್ದೇವೆ. ವ್ಯಾಪಾರ ಮಾಡುವ ಸ್ಥಳಗಳಲ್ಲಿ ಎಚ್ಚರ ವಹಿಸಿ. ಮಳಿಗೆ ವ್ಯಾಪಾರಿಗಳು, ತಿಂಡಿ ವ್ಯಾಪಾರಿಗಳು, ಸಾರ್ವಜನಿಕರು ಶಿಸ್ತನ್ನು ಕಾಪಾಡಬೇಕು. ಸಾರ್ವಜನಿಕರು ಮುತುವರ್ಜಿ ವಹಿಸಿ ತಾವೇ ತಮ್ಮ ಜವಾಬ್ದಾರಿ ಅರಿಯಬೇಕು ಎಂದು ಡಾ.ಚಂದ್ರಗುಪ್ತ ಸಲಹೆ ನೀಡಿದರು.

ಫೋನ್ ಕಾಲ್ ಸ್ವೀಕರಿಸಲು, ಹಾಡು ಕೇಳಲು ಈ ಮಾಸ್ಕ್ ಸಾಕು!ಫೋನ್ ಕಾಲ್ ಸ್ವೀಕರಿಸಲು, ಹಾಡು ಕೇಳಲು ಈ ಮಾಸ್ಕ್ ಸಾಕು!

Recommended Video

ಭಾರತದ ಪವರ್ ಗೆ ಶಾಕ್ ಆದ China | Oneindia Kannada
 ಮೈಸೂರಿನಲ್ಲಿ ಸದ್ಯ ಎಷ್ಟು ಪ್ರಕರಣ?

ಮೈಸೂರಿನಲ್ಲಿ ಸದ್ಯ ಎಷ್ಟು ಪ್ರಕರಣ?

ಮೈಸೂರು ಜಿಲ್ಲೆಯಲ್ಲಿ ನಿನ್ನೆ 481 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 31,573 ಕ್ಕೆ ಏರಿಕೆಯಾಗಿದೆ. ಇದುವರೆಗೆ ಒಟ್ಟು 26,051 ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ 4,807 ಜನರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವನ್ನಪ್ಪಿದವರ ಸಂಖ್ಯೆ 715 ಆಗಿದೆ.

English summary
The number of coronavirus infections in Mysuru is increasing day by day. So Mysuru district aministration has come forward to take stringent action by imposing penalties on those who do not wear masks in public
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X